ನವದೆಹಲಿ: ದೇಶಾದ್ಯಂತ ಮುಂಗಾರು ಮಳೆ (Monsoon Season) ಕೊರತೆಯುಂಟಾಗಿ, ರೈತರು ಸಂಕಷ್ಟ ಅನುಭವಿಸುತ್ತಿರುವ ಬೆನ್ನಲ್ಲೇ ಅನ್ನದಾತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗೋಧಿ ಸೇರಿ ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು (Rabi Crops MSP) ಕೇಂದ್ರ ಸಚಿವ ಸಂಪುಟ ಸಭೆ (Union Cabinet) ಅನುಮೋದನೆ ನೀಡಿದೆ. ಇದರಿಂದ ರೈತರು ಹಿಂಗಾರು ಬೆಳೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗಲಿದೆ.
ಸಚಿವ ಸಂಪುಟ ಸಭೆ ಬಳಿಕ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಈ ಕುರಿತು ಮಾಹಿತಿ ನೀಡಿದರು. “2024-25ನೇ ಸಾಲಿನ ಆರು ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಕೃಷಿ ವೆಚ್ಚಗಳು ಹಾಗೂ ದರಗಳ ಆಯೋಗವು (CAPF) ನೀಡಿದ ಶಿಫಾರಸುಗಳ ಅನ್ವಯ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ” ಎಂದು ತಿಳಿಸಿದರು.
#WATCH | The Union Cabinet has approved hike in Minimum Support Prices (MSP) for Rabi Crops for 2024-25, says Union Minister Anurag Thakur in Delhi. pic.twitter.com/x9W8uPEcEU
— ANI (@ANI) October 18, 2023
ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳ?
ಗೋಧಿ, ಮಸೂರ್ ದಾಲ್, ಸಾಸಿವೆ, ಕುಸುಮ (Safflower), ಬಾರ್ಲಿ ಹಾಗೂ ಕಾಳುಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಗೋಧಿ ಕ್ವಿಂಟಾಲ್‌ಗೆ 150 ರೂ., ಮಸೂರ್ ದಾಲ್ ಕ್ವಿಂಟಾಲ್‌ಗೆ 425, ಸಾಸಿವೆ ಕ್ವಿಂಟಾಲ್‌ಗೆ 200 ರೂ., ಕುಸುಮ 150, ಬಾರ್ಲಿ 115 ಹಾಗೂ ಕಾಳುಗಳಿಗೆ 105 ರೂ. ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಈ ಬಾರಿ ಮಸೂರ್ ದಾಲ್‌ಗೆ ಅತಿ ಹೆಚ್ಚು ಬೆಂಬಲ ಬೆಲೆ ನೀಡಲಾಗಿದೆ. ಗೋಧಿ ಪ್ರಮುಖ ಹಿಂಗಾರು ಬೆಳೆಯಾಗಿದ್ದು, ಏಪ್ರಿಲ್‌ನಲ್ಲಿ ಕಟಾವು ಮಾಡಲಾಗುತ್ತದೆ.
The Union Cabinet chaired by Hon'ble PM Sh. @narendramodi ji approves Minimum Support Prices (MSP) for Rabi Crops for Marketing Season 2024-25. #CabinetDecisions pic.twitter.com/2yYkUsNvoz
— Bhagwanth Khuba (@bhagwantkhuba) October 18, 2023
ಇದನ್ನೂ ಓದಿ: ರೈತರಿಗೆ ಕೇಂದ್ರ ಸಿಹಿ ಸುದ್ದಿ; ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ 1.08 ಲಕ್ಷ ಕೋಟಿ ರೂ. ಸಬ್ಸಿಡಿ
ಗೋಧಿಗೆ 9 ವರ್ಷದಲ್ಲೇ ಗರಿಷ್ಠ
ಗೋಧಿಗೆ ಕೇಂದ್ರ ಸರ್ಕಾರವು 150 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದು 2014ರ ಬಳಿ ಗರಿಷ್ಠ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಇದುವರೆಗೆ ಒಂದು ಕ್ವಿಂಟಾಲ್ ಗೋಧಿಗೆ 2,125 ರೂ. ಬೆಂಬಲ ಬೆಲೆ ಇತ್ತು. ಈಗ ಅದನ್ನು 2,275 ರೂ.ಗೆ ಏರಿಕೆ ಮಾಡಲಾಗಿದೆ. ಮೋದಿ ಅವರು ಪ್ರಧಾನಿಯಾದ ಬಳಿಕ ಗೋಧಿಗೆ ಗರಿಷ್ಠ ಬೆಂಬಲ ಬೆಲೆ ನೀಡಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಸೇರಿ ದೇಶಾದ್ಯಂತ ಕಳೆದ ಐದು ವರ್ಷಗಳಲ್ಲಿಯೇ ಕನಿಷ್ಠ ಮುಂಗಾರು ಮಳೆ ದಾಖಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.