Site icon Vistara News

Ceiling Fan Norms: ಸೀಲಿಂಗ್‌ ಫ್ಯಾನ್‌ಗಳ ಗುಣಮಟ್ಟಕ್ಕೆ ನಿಯಮ ರೂಪಿಸಿದ ಕೇಂದ್ರ; ಬೀಳಲಿದೆ ಭಾರಿ ದಂಡ

Ceiling Fans Norms

Central Government rolls out quality norms for ceiling fans to boost domestic production

ನವದೆಹಲಿ: ದೇಶೀಯವಾಗಿಯೇ ಗುಣಮಟ್ಟದ ಸೀಲಿಂಗ್‌ ಫ್ಯಾನ್‌ಗಳ (Electric Ceiling Fans) ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಇದಕ್ಕಾಗಿ ಹಲವು ನಿಯಮಗಳನ್ನು (Ceiling Fan Norms) ಜಾರಿಗೆ ತಂದಿದೆ. ಬೇರೆ ದೇಶಗಳಿಂದ ಸೀಲಿಂಗ್‌ ಫ್ಯಾನ್‌ಗಳನ್ನು ಆಮದು ಮಾಡಿಕೊಳ್ಳುವ ಬದಲು, ದೇಶೀಯವಾಗಿಯೇ ಗುಣಮಟ್ಟದ ಸೀಲಿಂಗ್‌ ಫ್ಯಾನ್‌ಗಳನ್ನು ಉತ್ಪಾದನೆ ಮಾಡುವ ದಿಸೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.

ಎಲೆಕ್ಟ್ರಿಕ್‌ ಸೀಲಿಂಗ್‌ ಟೈಪ್‌ ಫ್ಯಾನ್‌ಗಳ (ಗುಣಮಟ್ಟ ನಿಯಂತ್ರಣ) ಆದೇಶದ (2023) ಪ್ರಕಾರ (Electric Ceiling Type Fans (Quality Control) Order, 2023)‌ ಸೀಲಿಂಗ್‌ ಫ್ಯಾನ್‌ಗಳ ಮೇಲೆ ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್ ಮಾರ್ಕ್‌ ಇಲ್ಲದಿದ್ದರೆ, ಅಂತಹ ಸೀಲಿಂಗ್‌ ಫ್ಯಾನ್‌ಗಳನ್ನು ಸಂಗ್ರಹ ಮಾಡುವ ಜತೆಗೆ ವ್ಯಾಪಾರ, ಮಾರಾಟ, ಆಮದು ಮಾಡಿಕೊಳ್ಳುವಂತಿಲ್ಲ ಎಂದು ಆಗಸ್ಟ್‌ 9ರಂದು ಕೈಗಾರಿಕಾ ಉತ್ತೇಜನ ಹಾಗೂ ಆಂತರಿಕ ವ್ಯಾಪಾರ ಇಲಾಖೆ (DPIIT) ಅಧಿಸೂಚನೆ ಹೊರಡಿಸಿದೆ.

ಭಾರಿ ಮೊತ್ತದ ದಂಡ

ಇದುವರೆಗೆ ಎಲೆಕ್ಟ್ರಾನಿಕ್‌ ಸೀಲಿಂಗ್‌ ಫ್ಯಾನ್‌ಗಳಿಗೆ ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್ ಮಾರ್ಕ್‌ ಇರಲೇಬೇಕು ಎಂಬ ನಿಯಮ ಇರಲಿಲ್ಲ. ಆದರೆ, ಗುಣಮಟ್ಟ ಕಾಪಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ನೂತನ ನಿಯಮಗಳ ಅಡಿಯಲ್ಲಿ ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡಿದವರಿಗೆ ಎರಡು ವರ್ಷ ಜೈಲು ಅಥವಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Laptop Import: ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಮುಂದೂಡಿದ ಕೇಂದ್ರ; ಈ ಕಂಡಿಷನ್ಸ್‌ ಅಪ್ಲೈ

ಎರಡನೇ ಬಾರಿ ನಿಯಮ ಉಲ್ಲಂಘಿಸಿದವರಿಗೆ ಐದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತಿದೆ. ಅಧಿಸೂಚನೆ ಹೊರಡಿಸಿದ ದಿನದಿಂದ ನಿಯಮಗಳು ಜಾರಿಗೆ ಬರಲಿವೆ. ದೇಶೀಯವಾಗಿಯೇ ಗುಣಮಟ್ಟದ ಸೀಲಿಂಗ್‌ ಫ್ಯಾನ್‌ಗಳ ಉತ್ಪಾದನೆ, ಆಮದು ಮೇಲಿನ ಅವಲಂಬನೆ ಕಡಿಮೆಗೊಳಿಸುವುದು, ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಉತ್ತೇಜನ ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

Exit mobile version