Site icon Vistara News

Ban on Sugar Export: ಸಕ್ಕರೆ ರಫ್ತು ಮೇಲೆ ಕೇಂದ್ರ ಸರ್ಕಾರ ನಿಷೇಧ! ಕಾರಣ ಏನು?

Central Government to Ban On Sugar Export

ನವದೆಹಲಿ: ಅಕ್ಟೋಬರ್ 1ರಿಂದ ಆರಂಭವಾಗುವ ಋತುವಿನಲ್ಲಿ ಕೇಂದ್ರ ಸರ್ಕಾರವು (Central Government) ಸಕ್ಕರೆ ರಫ್ತು ನಿಷೇಧಿಸುವ ಸಾಧ್ಯತೆ ಇದೆ(Ban on Sugar Export). ಈ ಕುರಿತಾದ ಅಧಿಸೂಚನೆಯನ್ನು ನವೆಂಬರ್ ಮೊದಲ ವಾರದಲ್ಲಿ ನಿರೀಕ್ಷಿಸಬಹುದಾಗಿದೆ. 2021-22 ಸಾಲಿನಲ್ಲಿ ಭಾರತವು (India) ದಾಖಲೆಯ 11 ಮಿಲಿಯನ್ ಟನ್ ಸಕ್ಕರೆಯನ್ನು ಮಾರಾಟ ಮಾಡಿದ ನಂತರ, ದೇಶೀಯ ಮಾರುಕಟ್ಟೆಗಳಲ್ಲಿ (Domestic Sugar Market) ಪೂರೈಕೆಯನ್ನು ಕಾಯ್ದುಕೊಳ್ಳಲು ಮತ್ತು ಬೆಲೆ ಏರಿಕೆಯನ್ನು ತಡೆಯುವುದಕ್ಕಾಗಿ 2022-23ರ ಸಾಲಿನಲ್ಲಿ ಸಕ್ಕರೆ ರಫ್ತು ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ಮುಂದಿನ ಋತುವಿನಲ್ಲಿ ಭಾರತವು ಸಕ್ಕರೆ ರಫ್ತು ಮಾಡುವುದನ್ನು ನಿಷೇಧಿಸುವ ನಿರೀಕ್ಷೆಯಿದೆ. ಮಳೆ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕೊರತೆಯ ನಂತರ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತು ಮೇಲೆ ಪರಿಣಾಮ ಬೀರಲಿದೆ ಎಂದು ಒಂದು ತಿಂಗಳ ಹಿಂದೆಯೇ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ಒಂದೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಕ್ಕರೆ ದೊರೆಯದಿದ್ದರೆ, ಈಗಾಗಲೇ ನ್ಯೂಯಾರ್ಕ್‌, ಲಂಡನ್‌ನಲ್ಲಿ ವರ್ಷದ ಗರಿಷ್ಠ ಬೆಲೆ ಸಕ್ಕರೆ ದರ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆಗಳನ್ನು ಕೂಡ ತಳ್ಳಿ ಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಪ್ರಸಕ್ತ ಸಾಲಿನ ಋತುವಿನಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಕಡಿಮೆ ಇರಲಿದೆ. ಹಾಗಾಗಿ, ಮುಂದಿನ ವರ್ಷ ಭಾರತವು ಸಕ್ಕರೆ ರಫ್ತು ಮಾಡಲಾರದು ಎಂದು ಹೇಳಲಾಗುತ್ತಿದೆ. ಪ್ರಸಕ್ತ ಋತುವಿನಲ್ಲಿ ಸೆಪ್ಟೆಂಬರ್ 30 ರವರೆಗಿನ ಅವಧಿಯಲ್ಲಿ ಕೇವಲ 6.1 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಭಾರತವು ಗಿರಣಿಗಳಿಗೆ ಅನುಮತಿ ನೀಡಿದೆ. ಈ ಪ್ರಮಾಣವು ಕಳೆದ ಋತುವಿನಲ್ಲಿ ಮಾರಾಟವಾದ 11.1 ಮಿಲಿಯನ್ ಟನ್ಗಳಷ್ಟು ದಾಖಲೆಯ ಅರ್ಧದಷ್ಟು ಆಗಿದೆ.

ಈ ಸುದ್ದಿಯನ್ನೂ ಓದಿ: Sugar Price: ಟೊಮ್ಯಾಟೊ ‘ಹುಳಿ’ಯಾದ ಬೆನ್ನಲ್ಲೇ ಸಕ್ಕರೆ ‘ಕಹಿ’; ಜನರ ಹಬ್ಬದ ಖುಷಿಗೆ ಬೆಲೆಯೇರಿಕೆ ಬಿಸಿ

ಪ್ರಸಕ್ತ ಮಳೆಗಾಲದ ಋತುವಿನಲ್ಲಿ ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಚೆನ್ನಾಗಿಯಾಗಿದ್ದರೂ ಆಗಸ್ಟ್ ತಿಂಗಳಲ್ಲಿನ ಕೊರತೆಯಿಂದಾಗಿ ಕಬ್ಬಿನ ಇಳುವರಿ ಕುಂಠಿತವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ನೂರು ವರ್ಷದಲ್ಲೇ ಆಗಸ್ಟ್ ತಿಂಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ, ಈ ಬಾರಿ ಸಕ್ಕರೆ ಉತ್ಪಾದನೆಯು ಕಡಿಮೆಯಾಗುವುದು ಬಹುತೇಕ ಖಚಿತವಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಲಿದೆ.

ದೇಶದ ಇನ್ನಷ್ಟು ಸುದ್ದಿಘಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version