Site icon Vistara News

TV Somanathan: ಸಂಪುಟ ಕಾರ್ಯದರ್ಶಿಯಾಗಿ ಸೋಮನಾಥನ್‌ ನೇಮಕ; ಯಾರಿವರು?

TV Somanathan

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾದ ಬಳಿಕ ಆಡಳಿತಾತ್ಮಕವಾಗಿ ಹಲವು ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ. ದಕ್ಷ ಹಾಗೂ ಹೊಸ ಅಧಿಕಾರಿಗಳನ್ನು ಹೊಸ ಹೊಸ ಹುದ್ದೆಗಳಿಗೆ ನೇಮಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸರ್ಕಾರವು (Central Government) ಟಿ.ವಿ.ಸೋಮನಾಥನ್‌ (TV Somanathan) ಅವರನ್ನು ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಟಿ.ವಿ.ಸೋಮನಾಥನ್‌ ಅವರು ಸದ್ಯ ಸಂಪುಟ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

“ನೇಮಕಾತಿ ಕುರಿತ ಸಂಪುಟ ಸಮಿತಿಯು ಟಿ.ವಿ.ಸೋಮನಾಥನ್‌ ಅವರನ್ನು ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇದುವರೆಗೆ ಅವರು ಸಂಪುಟ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರಿಗೆ ಪದೋನ್ನತಿ ನೀಡಲಾಗಿದೆ” ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ 5 ವರ್ಷಗಳಿಂದಲೂ ರಾಜೀವ್‌ ಗೌಬಾ ಅವರು ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹುದ್ದೆಗೆ ಸೋಮನಾಥನ್‌ ಅವರನ್ನು ನೇಮಿಸಲಾಗಿದೆ. ಇವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಯಾರಿವರು ಸೋಮನಾಥನ್?

ಟಿ.ವಿ.ಸೋಮನಾಥನ್‌ ಅವರು 1987ರ ಬ್ಯಾಚ್‌, ತಮಿಳುನಾಡು ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದರೆ. ಇವರು ತಮಿಳುನಾಡು ಸರ್ಕಾರದಲ್ಲೂ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿರುವ ಇವರು ಹಲವು ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಇವರು 2019ರಿಂದ 2021ರವರೆಗೆ ಹಣಕಾಸು ವೆಚ್ಚ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2015-2017ರ ಅವಧಿಯಲ್ಲಿ ಇವರು ಪಿಎಂಒ ಜಂಟಿ ಕಾರ್ಯದರ್ಶಿಯಾಗಿದ್ದರು.

ರಾಜೀವ್‌ ಗೌಬಾ ಅವರು 2019ರಲ್ಲಿ ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಇದಾದ ಬಳಿಕ 2021, 2022 ಹಾಗೂ 2023ರಲ್ಲಿ ಅವರ ಅವಧಿಯನ್ನು ತಲಾ ಒಂದೊಂದು ವರ್ಷ ವಿಸ್ತರಣೆ ಮಾಡಲಾಯಿತು. ರಾಜೀವ್‌ ಗೌಬಾ ಅವರು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ, ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲು ಕಾರಣವಾದ ಜಮ್ಮು-ಕಾಶ್ಮೀರ ಮರು ಸಂಘಟನೆ ಕಾಯ್ದೆಯ (2019) ನಿರ್ಮಾತೃ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ: Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Exit mobile version