Site icon Vistara News

Meri LiFE App: ‘ಮೇರಿ ಲೈಫ್’‌ ಆ್ಯಪ್‌ ಬಿಡುಗಡೆಗೊಳಿಸಿದ ಕೇಂದ್ರ; ಪರಿಸರ ರಕ್ಷಣೆಗಾಗಿ ಯುವಕರಿಗೆ ಹೇಗಿದು ಸಹಕಾರಿ?

Narendra Modi Launches 'Meri LiFE' App For Youth To Battle Climate Change

Narendra Modi Launches 'Meri LiFE' App For Youth To Battle Climate Change

ನವದೆಹಲಿ: ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು, ಅದರಲ್ಲೂ ಪರಿಸರ ಸಂರಕ್ಷಣೆಯಲ್ಲಿ ಯುವಕರ ಸಹಭಾಗಿತ್ವವನ್ನು ಹೆಚ್ಚಿಸುವ ದಿಸೆಯಲ್ಲಿ ಅಭಿವೃದ್ಧಿಪಡಿಸಿರುವ ಮೇರಿ ಲೈಫ್‌ (Meri LiFE App- ನನ್ನ ಜೀವನ) ಆ್ಯಪ್‌ಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಕಲ್ಪನೆಯ ಸಾಕಾರವಾಗಿ LiFE (Lifestyle for Environment- ಪರಿಸರಕ್ಕಾಗಿ ಜೀವನಶೈಲಿ) ಎಂಬ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ, ಜೂನ್‌ 5ರಂದು ವಿಶ್ವ ಪರಿಸರ ದಿನ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆ್ಯಪ್‌ ಬಿಡುಗಡೆಗೊಳಿಸಿದ್ದು, ಇನ್ನಷ್ಟು ಯುವಕರು ಪರಿಸರ ರಕ್ಷಣೆಗೆ ಪಣತೊಡುವಂತಾಗಲಿ ಎಂಬುದು ಸರ್ಕಾರದ ಆಶಯವಾಗಿದೆ.

ಆ್ಯಪ್‌ನಲ್ಲಿ ಏನಿದೆ?

ಆ್ಯಪ್‌ ಬಳಸುವ ಮೂಲಕ ಯುವಕರು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚಾಗಿ ತೊಡಗಲಿ, ತ್ಯಾಜ್ಯ ಮರುಬಳಕೆ, ಇಂಧನ ನವೀಕರಣ ಸೇರಿ ಪರಿಸರದ ಸೂಕ್ಷ್ಮ ವಿಚಾರಗಳನ್ನು ಅವರೂ ತಿಳಿದುಕೊಳ್ಳಲಿ ಎಂಬ ದೃಷ್ಟಿಯಿಂದ ಆ್ಯಪ್‌ನಲ್ಲಿ ಹಲವು ವಿಷಯಗಳನ್ನು ಅಳವಡಿಸಲಾಗಿದೆ. ನೂರಾರು ವಿಡಿಯೊಗಳು, ಸೃಜನಶೀಲ ಚಟುವಟಿಕೆಗಳು, ಪರಿಸರ ಜಾಗೃತಿ ಮೂಡಿಸುವ ಅಂಶಗಳು ಆ್ಯಪ್‌ನಲ್ಲಿವೆ.

ಆ್ಯಪ್‌ಗೆ ಚಾಲನೆ ನೀಡಿದ ಭೂಪೇಂದರ್‌ ಯಾದವ್

ಪರಿಸರ ರಕ್ಷಣೆಯಲ್ಲಿ ನೀವೂ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ: Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ

ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳು, ಉದ್ಯಮಗಳು, ರಾಜ್ಯ ಸರ್ಕಾರಗಳು, ಪ್ರಮುಖ ಸಂಸ್ಥೆಗಳು, ಖಾಸಗಿ ಕಂಪನಿಗಳು ಕೂಡ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಆ್ಯಪ್‌ ಸಹಕಾರಿಯಾಗಲಿದೆ. ಆ್ಯಪ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಭೂಪೇಂದರ್‌ ಯಾದವ್‌, “ಪರಿಸರ ಸಂರಕ್ಷಣೆ ಹಾಗೂ ಹವಾಮಾನ ನಿಯಂತ್ರಣದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡಲು ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ” ಎಂದು ತಿಳಿಸಿದರು.

Exit mobile version