Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ - Vistara News

ದೇಶ

Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ

Narendra Modi: ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ 9 ವರ್ಷ ತುಂಬುತ್ತದೆ. ಹಾಗಾಗಿ, ಬಿಜೆಪಿಯಿಂದ ದೇಶಾದ್ಯಂತ ನೂರಾರು ಕಾರ್ಯಕ್ರಮ, ರ‍್ಯಾಲಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

VISTARANEWS.COM


on

Narendra Modi To Meet NDA Leaders
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರನ್ನು ಸಂಪರ್ಕಿಸಲು, ಅವರ ಗಮನ ಸೆಳೆಯಲು ಬಿಜೆಪಿಯು ಒಂದು ತಿಂಗಳು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ. 2014ರ ಮೇ 26ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಪ್ರಸಕ್ತ ವರ್ಷದ ಮೇ 26ರಂದು ಸರ್ಕಾರಕ್ಕೆ 9 ವರ್ಷ ತುಂಬಲಿದೆ. ಹಾಗಾಗಿ, ಬಿಜೆಪಿಯು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮೇ 30ರಿಂದ ಜೂನ್‌ 30ರ ಅವಧಿಯಲ್ಲಿ ಒಂದು ತಿಂಗಳು ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೇ 30ರಂದು ನರೇಂದ್ರ ಮೋದಿ ಅವರು ಬೃಹತ್‌ ರ‍್ಯಾಲಿ ಮೂಲಕ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ದೇಶಾದ್ಯಂತ ಬಿಜೆಪಿಯ ಪ್ರಮುಖ ನಾಯಕರು 51 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಹಾಗೆಯೇ, ದೇಶದ 396 ಲೋಕಸಭೆ ಕ್ಷೇತ್ರಗಳಲ್ಲಿ ಕೇಂದ್ರದ ಒಬ್ಬ ಸಚಿವರು ಅಥವಾ ರಾಷ್ಟ್ರೀಯ ನಾಯಕರು ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನಡೆಯುವ ರಾಜ್ಯಗಳಿಗೆ ಆದ್ಯತೆ

ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಸಂಭ್ರಮಾಚರಣೆಯ ಜತೆಗೆ ಮತಗಳ ಬೇಟೆಗೂ ಯೋಜನೆ ರೂಪಿಸಿದೆ. ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರ‍್ಯಾಲಿಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಸಾರ್ವಜನಿಕ ಸಭೆ, ಸಮಾವೇಶಗಳ ಮೂಲಕ ಕೇಂದ್ರ ಸರ್ಕಾರದ ಸಾಧನೆ, ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: Karnataka Election Results: ರಾಜ್ಯದ 49 ಕ್ಷೇತ್ರಗಳಲ್ಲಿ ಮೋದಿ ರ‍್ಯಾಲಿ, ರೋಡ್‌ ಶೋ, ಇವುಗಳಲ್ಲಿ ಬಿಜೆಪಿ ಗೆದ್ದಿದ್ದೆಷ್ಟು?

ಬಿಜೆಪಿ ಮುಖ್ಯಮಂತ್ರಿಗಳು, ಆಯಾ ರಾಜ್ಯಗಳಲ್ಲಿರುವ ಪ್ರತಿಪಕ್ಷಗಳ ನಾಯಕರು, ಬಿಜೆಪಿ ಸಂಸದರು, ಸಚಿವರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಲೋಕಸಭೆ ಕ್ಷೇತ್ರಗಳಲ್ಲಿ 250 ಕುಟುಂಬಗಳಂತೆ ದೇಶಾದ್ಯಂತ 2.5 ಲಕ್ಷ ಕುಟುಂಬಗಳನ್ನು ಸಂಪರ್ಕಿಸವುದು ಕೂಡ ಕಾರ್ಯಕ್ರಮದ ಭಾಗವಾಗಿದೆ. ಪ್ರಮುಖವಾಗಿ, ಕಲಾವಿದರು, ಕ್ರೀಡಾಪಟುಗಳು, ಉದ್ಯಮಿಗಳು ಸೇರಿ ಬೇರೆಯವರ ಮೇಲೆ ಪ್ರಭಾವ ಬೀರುವ ಕುಟುಂಬಸ್ಥರನ್ನು ಬಿಜೆಪಿ ನಾಯಕರು ಸಂಪರ್ಕಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

Bridge Collapse: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಸೋಮವಾರ ರಾತ್ರಿ ಕುಸಿದಿದೆ. ಬಲವಾದ ಗಾಳಿ ಬೀಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಚ್ಚರಿ ಎಂದರೆ ಸೇತುವೆ ಕುಸಿಯುವ ಕೇವಲ ಒಂದು ನಿಮಿಷದ ಮೊದಲು ಸುಮಾರು 65 ಜನರಿದ್ದ ಮದುವೆ ಬಸ್‌ ಈ ಸೇತುವೆಯ ಕೆಳಗಿನಿಂದ ಹಾದು ಹೋಗಿತ್ತು.

VISTARANEWS.COM


on

Bridge Collapse
Koo

ಹೈದರಾಬಾದ್‌: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಸೋಮವಾರ ರಾತ್ರಿ ಕುಸಿದಿದೆ (Bridge Collapse). ಸುಮಾರು 100 ಅಡಿ ಅಂತರದ ಎರಡು ಕಂಬಗಳ ನಡುವಿನ ಭಾಗ ರಾತ್ರಿ 9.45ರ ಸುಮಾರಿಗೆ ಬೀಸಿದ ಬಲವಾದ ಗಾಳಿಗೆ ಕುಸಿದು ಬಿದ್ದಿದೆ. ಸೇತುವೆಯ ಉಳಿದ ಭಾಗವೂ ಕುಸಿಯುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ತಪ್ಪಿದ ಭಾರೀ ದೊಡ್ಡ ದುರಂತ

ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ʼʼಸೇತುವೆ ಕುಸಿಯುವ ಕೇವಲ ಒಂದು ನಿಮಿಷದ ಮೊದಲು ಸುಮಾರು 65 ಜನರಿದ್ದ ಮದುವೆ ಬಸ್‌ ಈ ಸೇತುವೆಯ ಕೆಳಗಿನಿಂದ ಹಾದು ಹೋಗಿತ್ತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮನೇರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸುಮಾರು ಒಂದು ಕಿಲೋ ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ 2016ರಲ್ಲಿ ಅಂದಿನ ತೆಲಂಗಾಣ ವಿಧಾನಸಭಾ ಸ್ಪೀಕರ್ ಎಸ್.ಮಧುಸೂದನ ಚಾರಿ ಮತ್ತು ಸ್ಥಳೀಯ ಶಾಸಕ ಪುಟ್ಟ ಮಧು ಚಾಲನೆ ನೀಡಿದ್ದರು. ಆದರೆ ಇನ್ನೂ ಅದು ಪೂರ್ಣಗೊಂಡಿಲ್ಲ. ಈ ಸೇತುವೆ ನಿರ್ಮಾಣಕ್ಕೆ ಸುಮಾರು 49 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಥಣಿ, ಪರಕಲ್ ಮತ್ತು ಜಮ್ಮಿಕುಂಟಾ ಎಂಬ ಮೂರು ಪಟ್ಟಣಗಳ ನಡುವಿನ ಅಂತರವನ್ನು ಸುಮಾರು 50 ಕಿ.ಮೀ.ನಷ್ಟು ಕಡಿಮೆ ಮಾಡಲು ಈ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಒಂದು ವರ್ಷದಲ್ಲಿ ಅಂದರೆ 2017ರಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಸರ್ಕಾರವು ಬಾಕಿ ಹಣವನ್ನು ಪಾವತಿಸದ ಕಾರಣ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಅಚ್ಚರಿ ಎಂದರೆ ಇದೇ ಗುತ್ತಿಗೆದಾರ ವೇಮುಲವಾಡದಲ್ಲಿ ಸೇತುವೆಯನ್ನು ನಿರ್ಮಿಸಿದ್ದರು. ಅದು 2021ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು.

ಐದು ವರ್ಷಗಳಿಂದ ಸ್ಥಳೀಯರು ಸೇತುವೆಯ ಕೆಳಗೆ ಮಣ್ಣಿನ ರಸ್ತೆಯನ್ನು ಬಳಸುತ್ತಿದ್ದಾರೆ. ʼʼಸೇತುವೆ ಕಾಮಗಾರಿ ಶೇ. 60ರಷ್ಟೂ ಪೂರ್ಣಗೊಳ್ಳದ ಕಾರಣ ಕಳೆದ ವರ್ಷ ಹೆಚ್ಚುವರಿಯಾಗಿ 11 ಕೋಟಿ ರೂ. ಸೇರಿಸಲಾಗಿತ್ತು. ಆದರೂ ಕಾಮಗಾರಿ ನಡೆಯಲಿಲ್ಲʼʼ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

ಕ್ರಿಸ್‌ಮಸ್‌ ಆಚರಣೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿತ

ಕೇರಳದಲ್ಲಿ ಕ್ರಿಸ್‌ಮಸ್‌ ಆಚರಣೆಗೆಂದು ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಎಂಟು ಮಂದಿ ಗಾಯಗೊಂಡ ಘಟನೆ ಡಿಸೆಂಬರ್‌ನಲ್ಲಿ ನಡೆದಿತ್ತು. ತಿರುವನಂತಪುರಂ ಜಿಲ್ಲೆಯ ಪೂವರ್‌ ಪ್ರದೇಶದಲ್ಲಿ ಡಿಸೆಂಬರ್‌ 25ರ ರಾತ್ರಿ ಕ್ರೈಸ್ತ ಸಮುದಾಯದ ನೂರಾರು ಜನ ಕ್ರಿಸ್‌ಮಸ್‌ ಆಚರಣೆಗೆಂದು ಒಂದೆಡೆ ಸೇರಿದ್ದರು. ಇದೇ ವೇಳೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕುಸಿದ ಕಾರಣ ಎಂಟು ಮಂದಿ ಗಾಯಗೊಂಡಿದ್ದರು.

ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲೆ ಹೆಚ್ಚಿನ ಜನ ನಿಂತಿದ್ದ ಕಾರಣ ಈ ದುರಂತ ಸಂಭವಿಸಿತ್ತು. ಏಕಾಏಕಿ ಸೇತುವೆ ಕುಸಿದ ಕಾರಣ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಂಬುಲೆನ್ಸ್‌ ವ್ಯವಸ್ಥೆ ಮಾಡುವ ಜತೆಗೆ ಜನರನ್ನು ರಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.

Continue Reading

ದೇಶ

Diamond Smuggling : ನೂಡಲ್ಸ್​ ಪ್ಯಾಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

Dimond Smuggling: ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

dimond smuggling
Koo

ಮುಂಬೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂಡಲ್ಸ್ ಪ್ಯಾಕೆಟ್​ಗಳಲ್ಲಿ ಹುದುಗಿಸಿಟ್ಟಿದದ ವಜ್ರಗಳ ಹರಳುಗಳು (Diamond Smuggling) ಪತ್ತೆಯಾಗಿವೆ. ಅದರ ಮೌಲ್ಯ 6.48 ಕೋಟಿ ರೂಪಾಯಿ ಎಂದು ಮೌಲ್ಯ ಮಾಪನ ಮಾಡಲಾಗಿದೆ. ಅರೋಪಿ ಸಮೇತ ಅಧಿಕಾರಿಗಳು ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ವಿವರಿಸಿದ ಅಧಿಕಾರಿಯೊಬ್ಬರು ಮುಂಬೈನಿಂದ ಬ್ಯಾಂಕಾಕ್​​ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆಯಲಾಯಿತು. ಈ ವೇಳೆ ಆತನ ಟ್ರಾಲಿ ಬ್ಯಾಗ್​ನಲ್ಲಿ ನೂಡಲ್ಸ್ ಪ್ಯಾಕೆಟ್​ಗಳಿದ್ದವು. ಅದರಲ್ಲಿ ಅಡಗಿಸಿಟ್ಟಿದ್ದ ವಜ್ರಗಳಿದ್ದು/ ಅವುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂತು ಎಂದು ಹೇಳಿದ್ದಾರೆ.

ಅದೇ ರೀತಿ ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ದುಬೈ ಮತ್ತು ಅಬುಧಾಬಿಯಿಂದ ತಲಾ ಇಬ್ಬರು, ಬಹ್ರೇನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್ ಮತ್ತು ಸಿಂಗಾಪುರದಿಂದ ತಲಾ ಒಬ್ಬರು ಸೇರಿದಂತೆ ಕನಿಷ್ಠ 10 ಭಾರತೀಯ ಪ್ರಜೆಗಳನ್ನು ತಡೆದು 4.04 ಕೋಟಿ ಮೌಲ್ಯದ 6.199 ಕೆ.ಜಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಮೂವರನ್ನು ನಂತರ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ರೆಸ್ಟೊರೆಂಟ್ ಮಾಲೀಕನ ನೆರವು

ಇದೇ ರೀತಿಯ ಘಟನೆಯಲ್ಲಿ, ಮುಂಬೈ ವಿಮಾನ ನಿಲ್ದಾಣದಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹೊರತರಲು ಸಹಾಯ ಮಾಡಿದ್ದ ಆರೋಪದ ಮೇಲೆ ಅಲ್ಲಿನ ಫಾಸ್ಟ್ ಫುಡ್ ರೆಸ್ಟೋರೆಂಟ್ 38 ವರ್ಷದ ಉದ್ಯೋಗಿಯನ್ನು ಮುಂಬೈ ಕಸ್ಟಮ್ಸ್​ನ ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ. ಸುಮಾರು 1.86 ಕೋಟಿ ಮೌಲ್ಯದ 6 ಅಂಡಾಕಾರದ ಚಿನ್ನದ ಕ್ಯಾಪ್ಸೂಲ್ಸ್​ನಲ್ಲಿ ತನ್ನ ಬೆಲ್ಟ್​​ನಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಇದನ್ನೂ ಓದಿ: Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

ನಿರ್ಗಮನ ಪ್ರದೇಶದಲ್ಲಿ ಚಿನ್ನವನ್ನು ಸ್ವೀಕರಿಸುವುದು ಮತ್ತು ಅದನ್ನು ಹೊರಗಿನ ದಂಧೆಯ ಸದಸ್ಯರಿಗೆ ಹಸ್ತಾಂತರಿಸುವುದು ಅವನ ಪಾತ್ರವಾಗಿತ್ತು. ಅವರು ಬಾಂದ್ರಾ ಟಿ ಜಂಕ್ಷನ್ನಲ್ಲಿ ನೂರುಲ್ ಹಸನ್ ಜೆ ಮತ್ತು ಕಲಂದರ್ ಅಝರುದ್ದೀನ್ ಎಂಬುವರಿಗೆ ಸರಕುಗಳನ್ನು ಹಸ್ತಾಂತರಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಸ್ಜಿದ್ ಬಂದರ್ ನ ಹೋಟೆಲ್ ಸ್ಟಾರ್ ನಲ್ಲಿ ತಂಗಿದ್ದ ನೂರುಲ್ ಮತ್ತು ಕಲಂದರ್ ಅವರು ಮೊಹಮ್ಮದ್ ಅಲಿ ರಸ್ತೆಯ ಆಂಥೋನಿ ಎಂಬುವರಿಗೆ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಪ್ರತಿ ವಿತರಣೆಗೆ 3 ಲಕ್ಷ ರೂ.ಗಳನ್ನು ಪಡೆದರು, ಅದರಲ್ಲಿ 1.8 ಲಕ್ಷ ರೂ.ಗಳನ್ನು ಕಳ್ಳಸಾಗಣೆಗೆ ಸಹಾಯ ಮಾಡಿದ್ದಕ್ಕಾಗಿ ಪಾಂಡಿಯನ್ ಗೆ ಪಾವತಿಸುತ್ತಿದ್ದರು.

Continue Reading

ಪ್ರಮುಖ ಸುದ್ದಿ

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

BrahMos Missiles: ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ.

VISTARANEWS.COM


on

BrahMos Missiles
Koo

ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಚೀನಾದ ಒತ್ತಡದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ರಕ್ಷಣಾ ರಫ್ತಿಗೆ (defence exports) ಭಾರಿ ಉತ್ತೇಜನ ನೀಡುತ್ತಿರುವ ಭಾರತ (India), ಇಂದು ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles, BrahMos supersonic cruise missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು (Battery) ಕಳುಹಿಸಲು ಮುಂದಾಗಿದೆ.

ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿದ್ದು, ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದ ಪ್ರತಿಬಂಧಿಸುವುದು ತುಂಬಾ ಕಷ್ಟ.

ಬ್ರಹ್ಮೋಸ್‌ನ ಫಿಲಿಪೈನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ಬೃಹತ್ ಬೆಳವಣಿಗೆಯಾಗಿದೆ. ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಕ್ಷಿಪಣಿ ರಫ್ತಿನಲ್ಲಿ ಭಾರತವು ಸಂತುಷ್ಟಿಯ ಮಟ್ಟವನ್ನು ಮುಟ್ಟಿದೆ. ನರೇಂದ್ರ ಮೋದಿ ಸರ್ಕಾರ ಇದೀಗ ಮುಂಬೈನಲ್ಲಿ ಸ್ಕಾರ್ಪೀನ್-ಕ್ಲಾಸ್ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಮತ್ತು ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಮೂರನೇ ದೇಶಗಳಿಗೆ ಸರಬರಾಜು ಮಾಡಲು ಮಜಗಾಂವ್ ಡಾಕ್‌ಯಾರ್ಡ್ಸ್ ಲಿಮಿಟೆಡ್ ಮತ್ತು ಫ್ರೆಂಚ್ ನೇವಲ್ ಗ್ರೂಪ್ ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಪ್ರಸ್ತುತ ನಮ್ಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾನ್ ಅವರು ಫ್ರಾನ್ಸ್‌ ಸರ್ಕಾರದೊಂದಿಗೆ ಸಂವಹನ ನಡೆಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಭಾರತೀಯ ಮತ್ತು ಫ್ರೆಂಚ್ ರಕ್ಷಣಾ ವ್ಯವಹಾರ ಸರಪಳಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಗಾಢಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಟೌಲೌಸ್‌ನಲ್ಲಿರುವ ಫ್ರೆಂಚ್ ಜಲಾಂತರ್ಗಾಮಿ ನೆಲೆಗೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಇನ್ನೂ ಮೂರು ಹೆಚ್ಚುವರಿ ಕಲ್ವೇರಿ (Kalveri- ಮಾರ್ಪಡಿಸಿದ ಸ್ಕಾರ್ಪೀನ್) ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಫ್ರೆಂಚ್ ನೇವಲ್ ಗ್ರೂಪ್ ಈಗಾಗಲೇ MDLನೊಂದಿಗೆ ಮಾತುಕತೆ ನಡೆಸುತ್ತಿದೆ.

P-5 ಶಕ್ತಿಗಳು ಪರಮಾಣು-ಚಾಲಿತ ಸಾಂಪ್ರದಾಯಿಕ ಸಶಸ್ತ್ರ ದಾಳಿ ಜಲಾಂತರ್ಗಾಮಿ ನೌಕೆಗಳನ್ನು (SSN) ವೈರಿ ಸೈನ್ಯದ ತಡೆಗಟ್ಟುವಿಕೆಗೆ ಬಳಸುತ್ತಿರುವಾಗ, ಭಾರತವು ಇನ್ನೂ ತನ್ನ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ದೀರ್ಘಾವಧಿಯ ಕಡಲ ಭದ್ರತೆಗಾಗಿ ಎಸ್‌ಎಸ್‌ಎನ್‌ಗಳನ್ನು ತಯಾರಿಸುವುದು ಅಥವಾ ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವುದು ಆಯ್ಕೆಗಳಾಗಿವೆ.

ಇದನ್ನೂ ಓದಿ: BrahMos Missiles: ನೌಕಾಪಡೆಗೆ ಭೀಮಬಲ; 200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರ ಅಸ್ತು

Continue Reading

ವಾಣಿಜ್ಯ

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

Reliance Jio: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ ಡಾಟಾ ಟ್ರಾಫಿಕ್‌ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. 2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Reliance Jio
Koo

ಮುಂಬೈ: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ (Reliance Jio) ಡಾಟಾ ಟ್ರಾಫಿಕ್‌ (Data traffic)ಯ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. ಜಿಯೋ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಹಿರಂಗಪಡಿಸುತ್ತಿದ್ದಂತೆ ಈ ವಿಚಾರ ಬಹಿರಂಗಗೊಂಡಿದೆ.

2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಅದರಲ್ಲಿ 108 ಮಿಲಿಯನ್ (10,80,00000) ಚಂದಾದಾರರು ಜಿಯೋದ ಟ್ರೂ 5 ಜಿ ಸ್ವತಂತ್ರ ನೆಟ್‌ವರ್ಕ್‌ ಬಳಸುತ್ತಿದ್ದಾರೆ. ಈ ಸಂಖ್ಯೆಯು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಯಾವ ರೀತಿಯ ಪ್ರಭಾವ ಬೀರಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಶೇ. 28ರಷ್ಟು ಟ್ರಾಫಿಕ್ 5 ಜಿ ಚಂದಾದಾರರಿಂದ ಕಂಡು ಬಂದಿದೆ. ಹೆಚ್ಚುವರಿಯಾಗಿ ಜಿಯೊ ಫಿಕ್ಸೆಡ್ ವೈರ್‌ಲೆಸ್‌ ಆಕ್ಸೆಸ್ (Fixed Wireless Access) ಸೇವೆಗಳು ಡಾಟಾ ಟ್ರಾಫಿಕ್‌ಗೆ ಗಮನಾರ್ಹ ಕೊಡುಗೆ ನೀಡಿವೆ ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ವಾರ್ಷಿಕ ಡಾಟಾ ಟ್ರಾಫಿಕ್‌ನಲ್ಲಿ 2.4 ಪಟ್ಟು ಹೆಚ್ಚಳ ಕಂಡು ಬಂದಿದೆ. ಮಾಸಿಕ ಡಾಟಾ ಬಳಕೆಯು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಇತ್ತು. ಇದು 28.7 ಜಿಬಿಗೆ ಏರಿಕೆಯಾಗಿದೆ. ಈ ಅಂಕಿ-ಅಂಶ ಭಾರತದಲ್ಲಿ ಡಿಜಿಟಲ್ ಸಂಪರ್ಕದ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ʼʼಕಂಪೆನಿಯ ಕಾರ್ಯಕ್ಷಮತೆ ಮತ್ತು ಭಾರತೀಯ ಆರ್ಥಿಕತೆಗೆ ಅದರ ಕೊಡುಗೆಯ ಬಗ್ಗೆ ತೃಪ್ತಿ ಇದೆʼʼ ಎಂದು ಹೇಳಿದ್ದಾರೆ.

“ರಿಲಯನ್ಸ್‌ ಇಂಡಸ್ಟ್ರೀಸ್‌ನ ಉಪಕ್ರಮಗಳು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಕಂಪೆನಿಯ ಎಲ್ಲ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಇದು ಕಂಪೆನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ತೆರಿಗೆ ಪೂರ್ವ ಲಾಭದಲ್ಲಿ 100,000 ಕೋಟಿ ರೂ.ಗಳ ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪೆನಿ ರಿಲಯನ್ಸ್ ಎನ್ನುವುದು ಹೆಮ್ಮೆಯ ಸಂಗತಿʼʼ ಎಂದು ಅವರು ಸಂತಸ ವ್ಯಕಪಡಿಸಿದ್ದಾರೆ.

ಇದನ್ನೂ ಓದಿ: Reliance Jio Q4 Results: ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

“108,000,000ಕ್ಕೂ ಹೆಚ್ಚು ಟ್ರೂ 5 ಜಿ ಗ್ರಾಹಕರೊಂದಿಗೆ ಜಿಯೊ ಭಾರತದಲ್ಲಿ 5 ಜಿ ನೆಟ್‌ವರ್ಕ್‌ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಯೋ ದೇಶದ ಡಿಜಿಟಲ್ ಮೂಲ ಸೌಕರ್ಯವನ್ನು ಬಲಪಡಿಸುವಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಂಪೆನಿಯ ಚಿಲ್ಲರೆ ವಿಭಾಗವಾದ ರಿಲಯನ್ಸ್ ರೀಟೇಲ್ ಕೂಡ ದೃಢವಾದ ಬೆಳವಣಿಗೆಯನ್ನು ದಾಖಲಿಸಿದೆ. ಗ್ರಾಹಕರ ಸಂಖ್ಯೆಯಲ್ಲಿ ಶೇ. 36ರಷ್ಟು ಹೆಚ್ಚಳವಾಗಿದೆʼʼ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
Voting awareness programme in Shira
ತುಮಕೂರು2 mins ago

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Suresh Raina
ಪ್ರಮುಖ ಸುದ್ದಿ2 mins ago

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Karnataka Weather Forecast
ಮಳೆ6 mins ago

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Bridge Collapse
ದೇಶ17 mins ago

Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

dimond smuggling
ದೇಶ35 mins ago

Diamond Smuggling : ನೂಡಲ್ಸ್​ ಪ್ಯಾಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

Tongue Reveals Health
ಆರೋಗ್ಯ35 mins ago

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

HD Devegowda
ಕರ್ನಾಟಕ41 mins ago

HD Devegowda: ನಾನು ಇನ್ನೆರಡು ವರ್ಷ ಬದುಕಬಹುದು ಎಂದು ಕಣ್ಣೀರು ಹಾಕಿದ ದೇವೇಗೌಡರು

Lok Sabha Election 2024 Only a guaranteed wave in Karnataka says Cm Siddaramaiah
ಕರ್ನಾಟಕ48 mins ago

Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

Virat kohli
ಪ್ರಮುಖ ಸುದ್ದಿ1 hour ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ1 hour ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌