Site icon Vistara News

Chandrayaan 3: ಬಿಬಿಸಿ ಆ್ಯಂಕರ್‌ಗೆ ಆನಂದ್ ಮಹೀಂದ್ರಾ ತಿರುಗೇಟು! ಆಗಿದ್ದಾದರೂ ಏನು?

Anand Mahindra

ನವದೆಹಲಿ: ಚಂದ್ರಯಾನ 3 (Chandrayaan 3) ಸಕ್ಸೆಸ್ ಆದ ಬೆನ್ನಲ್ಲೇ ಹಲವು ಸಂಗತಿಗಳು ಚರ್ಚೆಯಾಗತ್ತಿವೆ. ಅದೇ ರೀತಿಯಾಗಿ, ಬಿಬಿಸಿಯ (BBC Video) ಹಳೆಯ ವಿಡಿಯೋವೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿಡಿಯೋದಲ್ಲಿ ಬಿಬಿಸಿ ಆ್ಯಂಕರ್(BBC Anchor), 70 ಕೋಟಿ ಜನರು ಬಡತನದಲ್ಲಿರಬೇಕಾದರೆ ಭಾರತವು ಬಾಹ್ಯಾಕಾಶ ಸಂಶೋಧನೆ ಮೇಲೆ ಹಣ ಯಾಕೆ ವೆಚ್ಚ ಮಾಡಬೇಕು ಎಂದು ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ (Mahindra Group Chairman Anand Mahindra) ಅವರು, ಬಿಬಿಸಿಯ ಧೋರಣೆಯನ್ನು ಟೀಕಿಸಿದ್ದಾರೆ.

ಕೆಲವರು ಈ ಬಗ್ಗೆ ಯೋಚಿಸುತ್ತಿರುವ ಕಾರಣ ನಾನು ನಿಮ್ಮನ್ನು ಕೇಳಬೇಕಾಗಿದೆ ಎಂದು ನಿಮಗೆ ತಿಳಿದಿದೆ. ಭಾರತವು ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿರುವ ದೇಶ. ಬಹಳಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ 70 ಕೋಟಿಗಿಂತಲೂ ಹೆಚ್ಚು ಭಾರತೀಯರಿಗೆ ಶೌಚಾಲಯದ ಸೌಲಭ್ಯಗಳಿಲ್ಲ. ಹಾಗಾಗಿ, ಅವರು ರೀತಿಯಾಗಿ ಹಣವನ್ನು ಹಣವನ್ನು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಬೇಕೇ ಎಂದು ಬಿಬಿಸಿ ಆ್ಯಂಕರ್ ವೀಡಿಯೊದಲ್ಲಿ ಕೇಳುವುದನ್ನು ಕಾಣಬಹುದು.

ರಿಯಲೀ.. ಸತ್ಯ ಏನಂದರೆ?

ನಿಜವಾಗಲೂ ? ಸತ್ಯ ಏನಂದರೆ, ನಮ್ಮ ಬಡತನವು ದಶಕಗಳ ವಸಾಹತುಶಾಹಿ ಆಳ್ವಿಕೆಯ ಪರಿಣಾಮವಾಗಿದೆ. ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಯಿತು. ಆದರೂ ನಾವು ದೋಚಲಾದ ಅತ್ಯಮೂಲ್ಯ ಆಸ್ತಿ ಕೊಹಿನೂರ್ ವಜ್ರವಲ್ಲ. ಅದು ನಮ್ಮ ಹೆಮ್ಮೆ ಮತ್ತು ನಮ್ಮ ಸ್ವಂತ ಸಾಮರ್ಥ್ಯಗಳ ಮೇಲಿನ ನಂಬಿಕೆ ಎಂದು ಆನಂದ್ ಮಹೀಂದ್ರಾ ಅವರು ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Chandrayaan 3: ʼದಕ್ಷಿಣ ಏಷ್ಯಾದ ದೈತ್ಯ ದೇಶದಿಂದ ಚಂದ್ರನ ದಕ್ಷಿಣ ಧ್ರುವ ಚುಂಬನ…ʼ ಜಾಗತಿಕ ಮೀಡಿಯಾ ಪ್ರಶಂಸೆ

ವಸಾಹತುಶಾಹಿಯ ಗುರಿ ಏನಂದರೆ, ಅದರ ಸಂತ್ರಸ್ತರಿಗೆ ಕೀಳರಿಮೆಯನ್ನು ಮನವರಿಕೆ ಮಾಡುವುದು. ಅದಕ್ಕಾಗಿಯೇ ಶೌಚಾಲಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ. ಸರ್, ಚಂದ್ರನಿಗೆ ಹೋಗುವುದು ನಮಗೆ ಏನು ಮಾಡುತ್ತದೆ ಎಂದರೆ, ಅದು ನಮ್ಮ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನದ ಮೂಲಕ ಪ್ರಗತಿಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಇದು ನಮ್ಮನ್ನು ಬಡತನದಿಂದ ಹೊರತರುವ ಆಕಾಂಕ್ಷೆಯನ್ನು ನೀಡುತ್ತದೆ. ಮಹಾನ್ ಬಡತನವೆಂದರೆ ಆಕಾಂಕ್ಷೆಯ ಬಡತನ ಎಂದು ಆನಂದ್ ಮಹೀಂದ್ರಾ ಅವರು ಬಿಬಿಸಿ ಆ್ಯಂಕರ್ ಅವರಿಗೆ ತಿರುಗೇಟು ನೀಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version