Site icon Vistara News

Chandrayaan 3: ಇಸ್ರೋ ಇಡೀ ರಾಷ್ಟ್ರದ ಸೊತ್ತು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ! ಮಮತಾ ದೀದಿ ವಾಗ್ದಾಳಿ

Mamata Banerjee

Mamata Banerjee Redefines INDIA Bloc, Says Will Provide Outside Support

ನವದೆಹಲಿ: ಚಂದ್ರಯಾನ 3 (Chandrayaan 3) ದೇಶದ ಹೆಮ್ಮೆ (Pride of India). ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇಡೀ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಇದರ ಶ್ರೇಯ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಬಂದಿದೆ(Indian Scientists). ಇಸ್ರೋ ಯಾವುದೇ ರಾಜಕೀಯ ಪಕ್ಷಕ್ಕೆ (Political Party) ಸೇರಿದ್ದಲ್ಲ ಎಂದು ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರು ಕಿಡಿ ಕಾರಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ (ಈಗ ಆ್ಯಪ್) ಪೋಸ್ಟ್ ಮಾಡಿರುವ ಮಮತಾ ಬ್ಯಾನರ್ಜಿ ಅವರು, ಚಂದ್ರಯಾನ-3 ಮಿಷನ್ ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ! ಇಸ್ರೋ ತಂಡವು ಭಾರತಕ್ಕೆ ಸೇರಿದೆ. ಅವರ ಕಠಿಣ ಪರಿಶ್ರಮವು ದೇಶದ ಪ್ರಗತಿಗೆ ಸಾಕ್ಷಿಯಾಗಿದೆ, ಇದು ಜನರು, ವಿಜ್ಞಾನಿಗಳು ಮತ್ತು ಅರ್ಥಶಾಸ್ತ್ರಜ್ಞರಿಂದ ಬಂದಿದೆಯೇ ಹೊರತು ಯಾವುದೇ ರಾಜಕೀಯ ಪಕ್ಷದಿಂದ ಅಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳವು ಸೇರಿದಂತೆ ದೇಶಾದ್ಯಂತ ವಿಜ್ಞಾನಿಗಳು ಬೃಹತ್ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಭಾರತದ ಚಂದ್ರನ ಅನ್ವೇಷಣೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಚಂದ್ರಯಾನ-3 ಮಿಷನ್, ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಹತ್ತಿರವಾಗಿರುವುದರಿಂದ, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಮತ್ತು ಅದರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಹುರಿದುಂಬಿಸಬೇಕು ಎಂದೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ಇತಿಹಾಸ ಸೃಷ್ಟಿಗೆ ಕ್ಷಣಗಣನೆ; ಲೈವ್‌ ವೀಕ್ಷಣೆ ಹೇಗೆ? ಮುಂದೇನಾಗುತ್ತದೆ?

ಚಂದ್ರಯಾನ-3 ಮಿಷನ್ ಭಾರತದ ಮೂರನೇ ಮೂನ್ ಮಿಷನ್ ಆಗಿದೆ. ನಾಳೆ ಅಂದರೆ, ಆಗಸ್ಟ್ 23ರಂದು ಸಂಜೆ ಸುಮಾರು 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಒಂದು ವೇಳೆ ಸಾಫ್ಟ್ ಲ್ಯಾಂಡಿಂಗ್‌ ಸಕ್ಸೆಸ್‌ವಾದ್ರೆ ಇಂಥ ಸಾಧನೆಯನ್ನು ಮಾಡಿದ ಅಮೆರಿಕ, ರಷ್ಯಾ, ಚೀನಾಗಳ ಸಾಲಿಗೆ ಭಾರತವು ಸೇರಲಿದೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version