Site icon Vistara News

Chandrayaan 3: ಚಂದ್ರಯಾನ 3 ನೌಕೆಯ ಕೊನೆ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಪೂರ್ಣ! ಮುಂದಿನ ಹಂತಕ್ಕೆ ಇಸ್ರೋ ಸಿದ್ಧತೆ

Chandrayaan 3

Chandrayaan-3 Completes Lunar-bound Manoeuvre, Separation Today: What's next?

ನವದೆಹಲಿ: ಚಂದ್ರಯಾನ-3 (Chandrayaan 3) ನೌಕೆಯ (Spacecraft) ಕೊನೆಯ ಮತ್ತು ಐದನೆಯ ಭೂ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯನ್ನು (earth orbit-raising manoeuvre) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯಶಸ್ವಿಯಾಗಿ ಪೂರೈಸಿದೆ. ಮುಂದಿನ ಹಂತದಲ್ಲಿ ಇಸ್ರೋ, ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ (Moon Orbit) ಸೇರಿಸುವ ಕೆಲಸವನ್ನು ಮಾಡಲಿದೆ. ಈ ಪ್ರಕ್ರಿಯೆಯಲ್ಲಿ ಚಂದ್ರನ ಗುರುತ್ವಾಕರ್ಷಣೆಯು ನಿಧಾನವಾಗಿ ತನ್ನ ನೌಕೆಯನ್ನು ಚಂದ್ರನ ಕಕ್ಷೆಗೆ ಎಳೆದುಕೊಳ್ಳಲಿದೆ. ಬಳಿಕ ಚಂದ್ರಯಾನ-3 ನೌಕೆಯು ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಮಾಡಲಿದೆ.

ಚಂದ್ರಯಾನ-3 ಕುರಿತು ಇಸ್ರೋ ಟ್ವೀಟ್

ಬೆಂಗಳೂರಿನ ISTRAC/ISRO ಕೇಂದ್ರದಿಂದ ಚಂದ್ರಯಾನ-3 ನೌಕೆಯ ಕೊನೆಯ ಕಕ್ಷೆ ಎತ್ತರಿಸುವ ಪ್ರಕ್ರಿಯಿಯನ್ನು ಪೂರ್ಣಗೊಳಿಸಲಾಗಿದೆ. ಬಾಹ್ಯಾಕಾಶ ನೌಕೆಯು 127609 ಕಿಮೀ x 236 ಕಿಮೀ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಈ ಹಂತವನ್ನು ಸಾಧಿಸಿದ ಕಕ್ಷೆಯನ್ನು ವೀಕ್ಷಣೆಯ ನಂತರ ದೃಢೀಕರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಟ್ವೀಟ್ ಮಾಡಿದೆ. ಮುಂದಿನ ಫೈರಿಂಗ್ ಆದ ಟ್ರಾನ್ಸ್‌ಲೂನಾರ್ ಇಂಜೆಕ್ಷನ್ (TLI) ಅನ್ನು ಆಗಸ್ಟ್ 1 ರಂದು ಮಧ್ಯರಾತ್ರಿ 12 ಮತ್ತು ಬೆಳಿಗ್ಗೆ 1 ಗಂಟೆಯ ನಡುವೆ ನಡೆಸಲಾಗುವುದು ಇಸ್ರೋ ಹೇಳಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ ನೌಕೆಯ 4ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಸಕ್ಸೆಸ್, ಚಂದಿರನ ಅಂಗಳಕ್ಕೆ ಮತ್ತಷ್ಟು ಹತ್ತಿರ!

ಚಂದ್ರಯಾನ-3, ಇದು ಭಾರತದ ಮೂರನೇ ಚಂದ್ರನ ಯೋಜನೆಯಾಗಿದೆ. ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸ್ಟೇಷನ್ ಮೂಲಕ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಆಗಸ್ಟ್ 23 ರಂದು ಲ್ಯಾಂಡ್ ಮಾಡುವ ಸಾಧ್ಯತೆಗಳಿವೆ. ಚಂದ್ರಯಾನ-3 ಮಿಷನ್ ಮೂಲಕ ಭಾರತವು ಎಲೈಟ್ ಗುಂಪುಗಳ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಈಗಾಗಲೇ ಅಮೆರಿಕ, ಈ ಹಿಂದಿನ ಸೋವಿಯತ್ ಯೂನಿಯನ್ ಹಾಗೂ ಚೀನಾ ಈ ಸಾಧನೆಯನ್ನು ಮಾಡಿದ ರಾಷ್ಟ್ರಗಳಾಗಿವೆ. ಭಾರತವು ಈ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version