Site icon Vistara News

Chandrayaan 3 : ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಮೊದಲ ಹಂತ ಯಶಸ್ವಿ

Chandrayan -3

ನವದೆಹಲಿ: ಶುಕ್ರವಾರ ಉಡಾವಣೆ ಮಾಡಿದ್ದ ಚಂದ್ರಯಾನ -3ರ ಬಾಹ್ಯಾಕಾಶ ನೌಕೆಯ ಮೊದಲ ಕಕ್ಷೆಯನ್ನು ಎತ್ತರಿಸುವ ಕಾರ್ಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೊ-ISRO) ವಿಜ್ಞಾನಿಗಳು ಶನಿವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಾಹ್ಯಾಕಾಶ ನೌಕೆಯ ಸ್ಥಿತಿಯು ಉತ್ತಮವಾಗಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದೆ. ಚಂದ್ರಯಾನ 3 ನೌಕೆ ಈಗ ಇರುವ ಕಕ್ಷೆಯು ಭೂಮಿಗೆ ಕನಿಷ್ಠ 173 ಕಿ.ಮೀ ಮತ್ತು ಗರಿಷ್ಠ 41,762 ಕಿ.ಮೀ ದೂರದಲ್ಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರಯಾನ -3 ಮಿಷನ್ ಕುರಿತ ಮಾಹಿತಿ; ಬಾಹ್ಯಾಕಾಶ ನೌಕೆಯ ಆರೋಗ್ಯ ಸಾಮಾನ್ಯವಾಗಿದೆ. ಬೆಂಗಳೂರಿನ ಇಸ್ರೋದ ಕೇಂದ್ರದ ಮೂಲಕ ಕಕ್ಷೆಯನ್ನು ಎತ್ತರಿಸುವ ಕಾರ್ಯವನ್ನು (ಅರ್ಥ್​ಬೌಂಡ್​ ಫೈರಿಂಗ್ -1) ಅನ್ನು ಯಶಸ್ವಿಯಾಗಿ ನಡೆಸಲಾಯಿತು. ಬಾಹ್ಯಾಕಾಶ ನೌಕೆ ಈಗ 41762 ಕಿ.ಮೀ x 173 ಕಿ.ಮೀ ಕಕ್ಷೆಯಲ್ಲಿದೆ ಎಂದು ಇಸ್ರೋ ಹೇಳಿದೆ.

ಜುಲೈ 14 ರಂದು ಇಸ್ರೋ ತನ್ನ ಚಂದ್ರ ಪರಿಶೋಧನಾ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದು ಚಂದ್ರನ ಮೇಲೆ ಇದುವರೆಗೆ ಅನ್ವೇಷಿಸದ ದಕ್ಷಿಣ ಧ್ರುವದ ಮೇಲೆ ಇಳಿಯುವ ಗುರಿಯನ್ನು ಹೊಂದಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ಸೇರಿ ಮೂರು ದೇಶಗಳು ಮಾತ್ರ ಇಲ್ಲಿಯವರೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವಲ್ಲಿ ಯಶಸ್ವಿಯಾಗಿವೆ.

ಆಗಸ್ಟ್‌ 23ರವರೆಗೆ ನಾವೇಕೆ ಕಾಯಬೇಕು?

ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ 3 ಮಿಷನ್‌ಅನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಮಿಷನ್‌ ಹೊತ್ತ ಲಾಂಚ್‌ ವೆಹಿಕಲ್‌ ಮಾರ್ಕ್‌ III (LVM 3) ರಾಕೆಟ್‌ ನಭಕ್ಕೆ ಹಾರಿದೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರ ಹಾಗೂ ಚಂದ್ರನ ಅಂಗಳದಲ್ಲಿ ಮಹತ್ವದ ಸಂಶೋಧನೆ ಮಾಡಬೇಕು ಎಂಬ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಂತಾಗಿದೆ.

ಸಾಫ್ಟ್‌ ಲ್ಯಾಂಡಿಂಗ್‌ ಆದರೆ ಸಕ್ಸೆಸ್‌

2019ರಲ್ಲಿ ಕೈಗೊಂಡ ಚಂದ್ರಯಾನ 2 ಉಡಾವಣೆ ಯಶಸ್ವಿಯಾದರೂ ಸಾಫ್ಟ್‌ ಲ್ಯಾಂಡಿಂಗ್‌ ಆಗದ ಕಾರಣ ಮಿಷನ್‌ ವಿಫಲವಾಯಿತು. ಹಾಗಾಗಿ, ಈ ಬಾರಿ ಇಸ್ರೊ ವಿಜ್ಞಾನಿಗಳು ಸಾಫ್ಟ್‌ ಲ್ಯಾಂಡಿಂಗ್‌ಅನ್ನು ಕೇಂದ್ರೀಕರಿಸಿ ಚಂದ್ರಯಾನ 3 ಮಿಷನ್‌ ಕೈಗೊಂಡಿದ್ದಾರೆ. ಹಾಗಾಗಿ, ಶುಕ್ರವಾರ ಉಡಾವಣೆಯಾದ ಚಂದ್ರಯಾನ 3 ಮಿಷನ್‌ನ ಲ್ಯಾಂಡರ್‌, ಆಗಸ್ಟ್‌ 23ರ ಸಂಜೆ 5.47ಕ್ಕೆ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ.

ಉಡಾವಣೆಯ ಕ್ಷಣಗಳು

ಹಾಗಾಗಿ, ಮಿಷನ್‌ ಯಶಸ್ವಿಯಾಗಿದೆ ಎಂಬುದನ್ನು ತಿಳಿಯಲು ನಾವು ಆಗಸ್ಟ್‌ 23ರವರೆಗೆ ಕಾಯಬೇಕಾಗುತ್ತದೆ. ಭೂಮಿಗಿಂತ ಚಂದ್ರನ ಅಂಗಳದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಸಾಫ್ಟ್‌ ಲ್ಯಾಂಡಿಂಗ್‌ ಸವಾಲಾಗಿದೆ.

ಇದನ್ನೂ ಓದಿ : Koppala News: ಇಸ್ರೋದ ಚಂದ್ರಯಾನ ಕಣ್ತುಂಬಿಕೊಂಡ ನೂರಾರು ಮಕ್ಕಳು

ಆಗಸ್ಟ್‌ 23ರಂದು ಭಾರತದ ಚಂದ್ರಯಾನ 3 ಮಿಷನ್‌ ಸಾಫ್ಟ್‌ ಲ್ಯಾಂಡಿಂಗ್‌ ಆದರೆ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ. ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಚಂದ್ರನ ಅಂಗಳದಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣೆ ಇರುವುದರಿಂದ ಸಾಫ್ಟ್‌ ಲ್ಯಾಂಡಿಂಗ್‌ ಸವಾಲಾಗಿದೆ. ಹಾಗಾಗಿ, ಈ ಬಾರಿ ಇಸ್ರೊ ವಿಜ್ಞಾನಿಗಳು ಸಾಫ್ಟ್‌ ಲ್ಯಾಂಡಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

Exit mobile version