ನವದೆಹಲಿ: ಚಂದ್ರಯಾನ ನೌಕೆಯು 100 ಕಿಮೀ ವೃತ್ತಾಕಾರದ ಕಕ್ಷೆಯಿಂದ ಚಂದ್ರನ ಹತ್ತಿರಕ್ಕೆ ಚಲಿಸುತ್ತಿದ್ದಂತೆ ಚಂದ್ರಯಾನ-3 ಮಿಷನ್‌ನ (Chandrayyan 3) ಅತ್ಯಂತ ನಿರ್ಣಾಯಕ ಹಂತದ ಪ್ರಕ್ರಿಯೆ (critical phase) ಆರಂಭವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ್ ಸೋಮವಾರ ಹೇಳಿದ್ದಾರೆ(Isro chief S Somanath). ಚಂದ್ರಯಾನ-3 ನೌಕೆಯ ಕಕ್ಷೆಯನ್ನು ನಿರ್ಧರಿಸುವ ಪ್ರಕ್ರಿಯೆಯು ಆಗಸ್ಟ್ 9 ಮತ್ತು 17ರ ನಡುವೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಚಂದ್ರಯಾನ-3 ಮಿಷನ್ ಈವರೆಗೂ ಉತ್ತಮವಾಗಿ ನಡೆದಕೊಂಡು ಹೋಗುತ್ತಿದೆ. ಚಂದ್ರಯಾನ-3 ನೌಕೆಯನ್ನು ಹೊತ್ತ ರಾಕೆಟ್ ಅನ್ನು ಜುಲೈ 14ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಈಗ ಚಂದ್ರನ ಸುತ್ತ 170 ಕಿಮೀ 4,313 ಕಿಮೀ ದೀರ್ಘವೃತ್ತದ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಹೇಳಿದ್ದಾರೆ.
ಮುಂದಿನ ನಿರ್ಣಾಯಕ ಹಂತವು ಹಲವು ಮ್ಯಾನವೋರಿಂಗ್ ಕಾಣಲಿದ್ದು, ನೌಕೆಯು ಮತ್ತಷ್ಟು ಚಂದ್ರನ ಹತ್ತಿರಕ್ಕೆ ಹೋಗಲಿದೆ. ಅಂತಿಮವಾಗಿ ನೌಕೆಯಿಂದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. 100 ಕಿಮೀ ವರೆಗೆ ನಾವು ಯಾವುದೇ ತೊಂದರೆಯನ್ನು ಕಾಣುವುದಿಲ್ಲ. ಸಮಸ್ಯೆಗಳು ಭೂಮಿಯಿಂದ ನಿಖರವಾಗಿ ಲ್ಯಾಂಡರ್ನ ಸ್ಥಾನವನ್ನು ಅಂದಾಜು ಮಾಡುವುದರಲ್ಲಿ ಮಾತ್ರವೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಾಪನವು ಬಹಳ ನಿರ್ಣಾಯಕ ಅಳತೆಯಾಗಿದ್ದು, ನಾವು ಇದನ್ನು ಕಕ್ಷೆಯ ನಿರ್ಣಯ ಪ್ರಕ್ರಿಯೆ ಎಂದು ಕರೆಯುತ್ತೇವೆ. ಇದು ಪ್ರಕ್ರಿಯೆ ಸರಿಯಾಗಿದ್ದರೆ, ಉಳಿದ ಪ್ರಕ್ರಿಯೆಗಳನ್ನು ಸುಲಭವಾಗಿ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.
ಚಂದ್ರನನ್ನು ಹತ್ತಿರದಿಂದ ನೋಡ್ತೀರಾ? ಬಾಹ್ಯಾಕಾಶ ನೌಕೆ ಸೆರೆಹಿಡಿದ ಚಿತ್ರಗಳು ಇಲ್ಲಿವೆ
ಮಹತ್ವಾಕಾಂಕ್ಷಿ ಚಂದ್ರಯಾನ -3 ಯೋಜನೆಯ ಬಾಹ್ಯಾಕಾಶ ನೌಕೆಯು ಚಂದ್ರನ ಸಮೀಪ ಹೋಗುತ್ತಿದ್ದು, ಭಾನುವಾರ ತಾನು ತೆಗೆದ ಮೊದಲ ಚಿತ್ರಗಳನ್ನು ಹಂಚಿಕೊಂಡಿದೆ. ಆ ಚಿತ್ರಗಳು ಅದ್ಭುತವಾಗಿ ಕಾಣುತ್ತಿದ್ದು ಭಾರತೀಯರ ಕೌತುಕ ಹೆಚ್ಚಾಗಿದೆ. ಮಹತ್ವಾಕಾಂಕ್ಷೆಯ ಚಂದ್ರಯಾನ -3 ಮಿಷನ್ನ ಬಾಹ್ಯಾಕಾಶ ನೌಕೆ ಶನಿವಾರ ಚಂದ್ರನ ಕಕ್ಷೆಯನ್ನು ಪ್ರವೇಶಿತ್ತು. ನೌಕೆ ಕಳುಹಿಸಿ ವೀಡಿಯೊ ಕ್ಲಿಪ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದೆ. ಚಂದ್ರನ ಮೇಲ್ಮೈಯಲ್ಲಿ ಸೇಫ್ ಲ್ಯಾಂಡ್ ಮಾಡಲು 20 ದಿನಗಳಿಗಿಂತ ಕಡಿಮೆ ಉಳಿದಿದೆ. ಏತನ್ಮಧ್ಯೆ ಕ್ರಾಫ್ಟ್ ಚಂದ್ರನ ಕುಳಿಗಳ ಸಂಕೀರ್ಣ ವಿವರಗಳ ಒಂದು ನೋಟವನ್ನು ಕಳುಹಿಸಿದೆ.
ಚಂದ್ರಯಾನ -3 ಭಾರತದ ಮೂರನೇ ಮಾನವರಹಿತ ಚಂದ್ರಯಾನ ಮಿಷನ್ ಆಗಿದೆ. ಇಲ್ಲಿಯವರೆಗೆ ಒಟ್ಟು ದೂರದ ಮೂರನೇ ಎರಡು ಭಾಗವನ್ನು ಕ್ರಮಿಸಿದ್ದು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ‘ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಿದ್ದೇನೆ’ ಎಂಬುದಾಗಿ ಚಂದ್ರಯಾನ -3 ಅನ್ನು ಚಂದ್ರನ ಹತ್ತಿರಕ್ಕೆ ತಂದ ಸಂದರ್ಭವನ್ನು ಇಸ್ರೊ ಬಣ್ಣಿಸಿತ್ತು. ಜುಲೈ 14 ರಂದು ಉಡಾವಣೆಯಾದ ಮೂರು ವಾರಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ಅದನ್ನು ಎತ್ತುವ ಪ್ರಯತ್ನದಲ್ಲಿ ನೌಕೆ ಐದುಕ್ಕೂ ಹೆಚ್ಚು ಚಲನೆಗಳನ್ನು ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ನೌಕೆಯ ಕೊನೆ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಪೂರ್ಣ! ಮುಂದಿನ ಹಂತಕ್ಕೆ ಇಸ್ರೋ ಸಿದ್ಧತೆ
ರಾತ್ರಿ 11 ಗಂಟೆಗೆ ಮತ್ತೊಂದು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ರೋವರ್ ಪ್ರಜ್ಞಾನ್ ಅನ್ನು ಹೊತ್ತ ಲ್ಯಾಂಡಿಂಗ್ ಮಾಡ್ಯೂಲ್ ವಿಕ್ರಮ್ ತನ್ನ ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡಲಿದೆ. ಅದಕ್ಕೂ ಮೂದಲು ಮೂರು ಕಾರ್ಯಾಚರಣೆಗಳು ನಡೆಯಲಿದೆ. ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೊದಲು ಇದನ್ನು ಕಕ್ಷೆಯಿಂದ ತೆಗೆದುಹಾಕಲಾಗುತ್ತದೆ. ಚಂದ್ರನ ಕಕ್ಷೆಗೆ ನೌಕೆಯ ಸೇರ್ಪಡೆಯು ಇಸ್ರೊದ ಮಹತ್ವಾಕಾಂಕ್ಷೆಯ 600 ಕೋಟಿ ರೂ.ಗಳ ಕಾರ್ಯಾಚರಣೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ವಿಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.