Site icon Vistara News

Chandrayaan 3: ಚಂದಮಾಮನ ಅಂಗಳದಲ್ಲಿ ‘ರೋವರ್’ ಮಗುವಿನಾಟ! ಹುಷಾರ್, ಚಂದ್ರ ಕಂಪಿಸುತ್ತಿದೆ ಎಂದ ಲ್ಯಾಂಡರ್!

Pragyan Rover

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 (Chandrayaan 3) ಚಂದ್ರನ ದಕ್ಷಿಣ ಧ್ರುವದಲ್ಲಿ (South pole of Moon) ತನಗೆ ವಹಿಸಿರುವ ಕೆಲಸವನ್ನು ನಿರ್ವಹಿಸುತ್ತಿದೆ. ಲ್ಯಾಂಡರ್‌ (Vikram Lander) ಹಾಗೂ ಲ್ಯಾಂಡರ್‌ನಿಂದ ಹೊರ ಬಂದಿರುವ ರೋವರ್ (Pragyan Rover) ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ಮುಂದುವರಿಸಿವೆ. ಲ್ಯಾಂಡರ್ ಚಂದ್ರನ ಕಂಪನವನ್ನು ಗ್ರಹಿಸಿದ್ದು, ನೈಸರ್ಗಿಕವಾಗಿದೆ ಎಂದು ಮಾಹಿತಿ ನೀಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಹೇಳಿದೆ.

ಚಂದ್ರ ಕೂಡ ಕಂಪಿಸುತ್ತಿರುವುದು ಈಗಿನ ಮಾಹಿತಿಯಿಂದ ಗೊತ್ತಾಗಿದೆ. ಹಾಗಾಗಿ ಚಂದ್ರನಲ್ಲೂ ಬೃಹತ್ ಕಂಪನಗಳಾಗಬಹುದು. ಆದರೆ, ಈ ಕಂಪನಗಳ ಕರೆಕ್ಟ್ ಆಗಿರುವ ಸ್ವರೂಪದ ಬಗೆಗಿನ ತನಿಖೆ ಇನ್ನೂ ಮುಂದುವರಿದಿದೆ ಎಂದು ಇಸ್ರೋ ಹೇಳಿದೆ.

ಚಂದಮಾಮಾನ ಅಂಗಳದಲ್ಲಿ ರೋವರ್ ಮಗುವಿನಾಟ!

ಈ ಮಧ್ಯೆ, ಬೆಂಗಳೂರಿನ ಕಮಾಂಡ್ ಸೆಂಟರ್‌ನಿಂದಲೇ ಚಂದ್ರನ ಮೇಲ್ಮೈನಲ್ಲಿರುವ ಪ್ರಜ್ಞಾನ್ ರೋವರ್‌ ಅನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುವಂತೆ ಮಾಡಿರುವ ವಿಡಿಯೋವೊಂದನ್ನು ಇಸ್ರೋ ಷೇರ್ ಮಾಡಿಕೊಂಡಿದೆ. ಚಂದ್ರನ ಮೇಲ್ಮೈಯಲ್ಲಿ ಕುಳಿಗಳು ಮತ್ತು ಬಂಡೆಗಳನ್ನು ತಪ್ಪಿಸುವ ಮಾರ್ಗದ ಹುಡುಕಾಟದಲ್ಲಿ ರೋವರ್ ಅನ್ನು ಓಡಾಡಿಸಲಾಗಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ರೋ, ಚಂದಮಾಮನ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿದಾಡುತ್ತಿರುವಂತೆ ಮತ್ತು ತಾಯಿ ಅದನ್ನು ಪ್ರೀತಿಯಿಂದ ನೋಡುತ್ತಿರುವಂತೆ ಭಾಸವಾಗುತ್ತಿದೆ… ಎಂದು ಬರೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರನ ದಕ್ಷಿಣ ಧ್ರುವದಲ್ಲಿ ಕೆಮಿಕಲ್‌ ಪತ್ತೆಹಚ್ಚಿದ ಪ್ರಜ್ಞಾನ್‌ ರೋವರ್, ಮುಂದುವರಿದ ಅಧ್ಯಯನ

ಲ್ಯಾಂಡರ್‌ನ ಫೋಟೋ ಕ್ಲಿಕಿಸಿದ ರೋವರ್

ಚಂದ್ರನ ಅಂಗಳದಲ್ಲಿ ಅಧ್ಯಯನ (Chandrayaan 3) ನಡೆಸುತ್ತಿರುವ ಪ್ರಜ್ಞಾನ್‌ ರೋವರ್‌, ಗಂಧಕ, ಆಮ್ಲಜನಕ ಸೇರಿ ಹಲವು ಕೆಮಿಕಲ್‌ಗಳನ್ನು ಪತ್ತೆ ಹಚ್ಚಿದೆ. ಇದರ ಜತೆಗೆ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಒಂದು ವಾರದ ಬಳಿಕ ಪ್ರಜ್ಞಾನ್‌ ರೋವರ್‌ (Pragyan Rover), ವಿಕ್ರಮ್‌ ಲ್ಯಾಂಡರ್‌ನ (Vikram lander) ಫೋಟೊಗಳನ್ನು ಕಳುಹಿಸಿದೆ. ವಿಕ್ರಮ್‌ ಲ್ಯಾಂಡರ್‌ ಫೋಟೊಗಳನ್ನು ಇಸ್ರೋ (ISRO) ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

“ವಿಕ್ರಮ್‌ ಲ್ಯಾಂಡರ್‌ನ ಫೋಟೊವನ್ನು ಪ್ರಜ್ಞಾನ್‌ ರೋವರ್‌ ಕಳುಹಿಸಿದೆ. ಇದು ಇಂದು (ಆಗಸ್ಟ್‌ 30) ಬೆಳಗ್ಗೆ ತೆಗೆದ ಫೋಟೊ ಆಗಿದೆ. ರೋವರ್‌ನ ನ್ಯಾವಿಗೇಷನ್‌ ಕ್ಯಾಮೆರಾದಿಂದ (NavCam) ಫೋಟೊ ತೆಗೆಯಲಾಗಿದೆ. ಚಂದ್ರಯಾನ 3 ಮಿಷನ್‌ಗಾಗಿ ನ್ಯಾವಿಗೇಷನ್‌ ಕ್ಯಾಮೆರಾವನ್ನು ಲ್ಯಾಬೊರೇಟರಿ ಫಾರ್‌ ಎಲೆಕ್ಟ್ರೋ-ಆಫ್ಟಿಕ್ಸ್‌ ಸಿಸ್ಟಮ್ಸ್‌ (LEOS) ಅಭಿವೃದ್ಧಿಪಡಿಸಿದೆ” ಎಂದು ಇಸ್ರೋ ಮಾಹಿತಿ ನೀಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version