Site icon Vistara News

Chandrayaan 3: ಚಂದ್ರಯಾನ 3 ಲ್ಯಾಂಡಿಂಗ್‌ ನೋಡಬೇಕೆ? ಇಷ್ಟು ಹೊತ್ತಿಗೆ ಇಲ್ಲಿ ಬನ್ನಿ!

Countdown For Chandrayaan 3

Chandrayaan 3: Countdown For Soft landing; How watch live? What will happen next?

ಹೊಸದಿಲ್ಲಿ: ಭಾರತದ ಐತಿಹಾಸಿಕ ಬಾಹ್ಯಾಕಾಶ ಸಾಹಸವಾದ ಚಂದ್ರಯಾನ 3 (Chandrayaan 3), ಇಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರನ ದಕ್ಷಿಣ ಧ್ರುವದಲ್ಲಿ (south pole) ಸಾಫ್ಟ್ ಲ್ಯಾಂಡಿಂಗ್ (soft landing) ಮಾಡಲಿದೆ. ವಿಕ್ರಮ್ ಲ್ಯಾಂಡರ್ (Vikram Lander) ಮತ್ತು ರೋವರ್ ಚಂದಿರನ ನೆಲಸ್ಪರ್ಶ ಮಾಡುವ ಲೈವ್‌ ಅನ್ನು ನೀವು ಈ ಕೆಳಗಿನ ತಾಣಗಳಲ್ಲಿ ವೀಕ್ಷಿಸಬಹುದು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಐತಿಹಾಸಿಕ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಲಿದೆ. ಇದನ್ನು ಸಂಜೆ 5:27ರಿಂದ ಇಲ್ಲಿ ನೋಡಬಹುದು:

ಭಾರತದ ಈ ಐತಿಹಾಸಿಕ ಕ್ಷಣಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿವೆ. ಲ್ಯಾಂಡರ್ ಮಾಡ್ಯೂಲ್- ವಿಕ್ರಮ್ ಲ್ಯಾಂಡರ್- ಲ್ಯಾಂಡಿಂಗ್‌ಗಾಗಿ ಚಂದ್ರನ ಮೇಲ್ಮೈಯಲ್ಲಿ ಸರಿಯಾದ ಸ್ಥಳವನ್ನು ಪತ್ತೆಹಚ್ಚುತ್ತಿವೆ. ಎಲ್ಲವೂ ಯೋಜನೆಯ ಪ್ರಕಾರ ಯಶಸ್ವಿಯಾಗಿ ನಡೆದರೆ, ಭಾರತವು ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಲಿದೆ.

ಜುಲೈ 14ರಂದು ISRO ಸಂಸ್ಥೆಯು LVM3 M4 l ವೆಹಿಕಲ್‌ ಮೂಲಕ ಚಂದ್ರಯಾನ ನೌಕೆಯನ್ನು ಉಡಾಯಿಸಿತ್ತು. ಆಗಸ್ಟ್‌ 5ರಂದು ಅದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ನಂತರ ಚಂದ್ರನ ಕಕ್ಷೆಯಲ್ಲಿ ಐದು ಸುತ್ತು ಬಂದಿತ್ತು. ಆಗಸ್ಟ್ 17ರಂದು ನೌಕೆಯ ಪ್ರೊಪಲ್ಷನ್ ಸಿಸ್ಟಮ್‌ನಿಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಬೇರ್ಪಟ್ಟಿತ್ತು. ಆ.18ರಂದು ಮಾಡ್ಯೂಲ್‌ ಚಂದ್ರನ ಅತಿ ಹತ್ತಿರದ ಕಕ್ಷೆಗೆ (30 ಕಿಮೀ) ಇಳಿದಿತ್ತು.

ಇದನ್ನೂ ಓದಿ: Chandrayaan 3 Live Updates: ಚಂದ್ರಯಾನ 3ರ ಲ್ಯಾಂಡಿಂಗ್‌ ಕ್ಷಣಕ್ಷಣದ ಸುದ್ದಿಗಳು; ದ. ಆಫ್ರಿಕದಿಂದಲೇ ಲೈವ್‌ ವೀಕ್ಷಿಸಲಿರುವ ಮೋದಿ

Exit mobile version