Site icon Vistara News

Chandrayaan 3: ನಾಲ್ಕು ಮೀಟರ್ ದೊಡ್ಡ ಕುಳಿಯೊಳಗೇ ಬೀಳುತ್ತಿತ್ತು ಪ್ರಜ್ಞಾನ್ ರೋವರ್! ಆದರೆ…

Rover on Moon

ಬೆಂಗಳೂರು, ಕರ್ನಾಟಕ: ಚಂದ್ರಯಾನ-3 (Chandrayaan 3) ಪ್ರಜ್ಞಾನ್ ರೋವರ್‌ಗೆ (Pragyana Rover) ವಹಿಸಲಾದ ವೈಜ್ಞಾನಿಕ ಸಂಶೋಧನೆಗಳನ್ನು ಅದು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅಗತ್ಯ ಡೇಟಾಗಳನ್ನು ಚಂದ್ರನಿಂದ ಭೂಮಿಗೆ (Moon to Earth) ಕಳುಹಿಸುತ್ತಿದೆ. ಈ ಮಧ್ಯೆ, ಪ್ರಜ್ಞಾನ್ ರೋವರ್ ದೊಡ್ಡ ಅವಘಡದಿಂದ ಪಾರಾಗಿದೆ. ಆಗಸ್ಟ್ 27ರಂದು ದೊಡ್ಡ ಕುಳಿಯೊಳಗೆ ರೋವರ್ ಬೀಳುವುದನ್ನು ತಪ್ಪಿಸಲಾಗಿದೆ. ಪ್ರಜ್ಞಾನ್ ರೋವರ್ ಸಾಗುತ್ತಿದ್ದ ಹಾಗೆ, ತಾನಿದ್ದ ಮೂರು ಮೀಟರ್ ದೂರದಲ್ಲಿ 4 ಮೀಟರ್ ವ್ಯಾಸದ ಕುಳಿ (4 meter diameter crater) ಇರುವುದನ್ನು ಪತ್ತೆ ಹಚ್ಚಿತು. ಬಳಿಕ, ರೋವರ್ ಹೋಗುತ್ತಿದ್ದ ಮಾರ್ಗವನ್ನು ಬದಲಿಸಲಾಯಿತು. ಈಗ ಪ್ರಜ್ಞಾನ್ ರೋವರ್ ಸುರಕ್ಷಿತ ಮಾರ್ಗದಲ್ಲಿದ್ದು, ತನ್ನ ಎಂದಿನ ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ.

ಲ್ಯಾಂಡರ್‌ನಿಂದ ರೋವರ್ ಹೊರ ಬಂದ ಕ್ಷಣಗಳೇ ಅದ್ಭುತ

ಚಂದ್ರಯಾನ 3 (Chandrayaan 3) ನೌಕೆಯ ಲ್ಯಾಂಡರ್ (Vkrama Lander) ಚಂದ್ರನ ದಕ್ಷಿಣ ಧ್ರುವ (South Pole) ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದೆ ನಂತರ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯುತ್ತಿವೆ. ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿರುವ ಪ್ರಜ್ಞಾನ್ ರೋವರ್ (pragyan rover) ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದ್ದು, ಅದಕ್ಕೆ ವಹಿಸಲಾದ ಕೆಲಸವನ್ನು ಮಾಡುತ್ತಿದೆ ಎಂದು ಇಸ್ರೋ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ. ಈಗಾಗಲೇ ವಿಕ್ರಮ್ ಲ್ಯಾಂಡರ್‌ನಿಂದ ರ್ಯಾಂಪ್ ಮೂಲಕ ಪ್ರಜ್ಞಾನ್ ರೋವರ್ ಹೊರ ಬರುತ್ತಿರುವ ವಿಡಿಯೋ (Rover Video) ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಜತೆಗಿದೆ. ಅಲ್ಲದೇ, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವಾಗ ಸೆರೆ ಹಿಡಿದ ವಿಡಿಯೋ ಅದ್ಭುತವಾಗಿದೆ(Viral Video).

ಎಲ್ಲಾ ಯೋಜಿತ ರೋವರ್ ಚಲನೆಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ರೋವರ್ ಪೇಲೋಡ್‌ಗಳು LIBS ಮತ್ತು APXS ಅನ್ನು ಆನ್ ಮಾಡಲಾಗಿದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲಾ ಪೇಲೋಡ್‌ಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಇಸ್ರೋ ಎಕ್ಸ್‌ ವೇದಿಕೆಯಲ್ಲಿ ಟ್ವೀಟ್ ಮಾಡಿದೆ.

ಲ್ಯಾಂಡರ್‌ನಿಂದ ಹೊರ ಬಂದ ರೋವರ್

ವಿಕ್ರಮ್ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಹೊರ ಬರುವ ವಿಡಿಯೋವನ್ನು ಇಸ್ರೋ ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿದೆ. ಪ್ರಜ್ಞಾನ್ ರೋವರ್ ವಿಕ್ರಮ್‌ ಲ್ಯಾಟರ್‌ನಿಂದ ನಿಧಾನವಾಗಿ ಹೊರಗೆ ಬಂದು, ಚಂದ್ರನ ಮೇಲ್ಮೈನಲ್ಲಿ ಇಳಿಯುತ್ತದೆ. ಈ ಕ್ಷಣಗಳನ್ನು ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದು ಭೂಮಿಗೆ ರವಾನಿಸಿದೆ.

ಈ ಸುದ್ದಿಯನ್ನೂ ಓದಿ: Japan Moon Mission: ಚಂದ್ರಯಾನದಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದ ಜಪಾನ್! ಕಾರಣ ಏನು?

ಡೂಡಲ್ ಮೂಲಕ ಚಂದ್ರಯಾನ 3 ಸಕ್ಸೆಸ್ ಸೆಲೆಬ್ರೇಟ್ ಮಾಡಿದ ಗೂಗಲ್!

ಭಾರತ (India Moon Mission) ಕೈಗೊಂಡ ಚಂದ್ರಯಾನ-3 (Chandrayaan 3) ಮಿಷನ್‌ಗೆ ಜಗತ್ತಿನ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಭಾರತೀಯರಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಮಧ್ಯೆ, ಟೆಕ್ ದೈತ್ಯ ಗೂಗಲ್(Google), ತನ್ನ ಸರ್ಚ್‌ ಎಂಜಿನ್‌ನಲ್ಲಿ (Search Engine) ಚಂದ್ರಯಾನ-3 ಯಶಸ್ಸಿನ ಪ್ರತಿ ಬಿಂಬಿಸುವ ಆ್ಯನಿಮೇಷನ್ ಡೂಡಲ್‌ (Doodle) ಮಾಡುವ ಮೂಲಕ, ಇಸ್ರೋಗೆ (ISRO) ಗೌರವ ಸಲ್ಲಿಸಿದೆ. ಗೂಗಲ್ ಆಗಾಗ, ಭಾರತೀಯ ಗಣ್ಯರು, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳನ್ನು ಇದೇ ರೀತಿ ಸೆಲೆಬ್ರೆಟ್ ಮಾಡುತ್ತದೆ.

Exit mobile version