ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ)ಯು ಮುಂದಿನ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ-3 (Chandrayaan-3) ಉಡ್ಡಯನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂತರ್‌ಗ್ರಹೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಚಂದ್ರಯಾನ-3 ಹೆಚ್ಚಿನ ನೆರವು ನೀಡಲಿದೆ ಎಂಬುದು ಇಸ್ರೋದ ಅಭಿಪ್ರಾಯವಾಗಿದೆ. ಈಗಾಗಲೇ ಭಾರತವು ಎರಡು ಚಂದ್ರಯಾನಗಳನ್ನು ಕೈಗೊಂಡಿದೆ. ಈ ಪೈಕಿ 2019ರಲ್ಲಿ ಕೈಗೊಂಡ ಚಂದ್ರಯಾನ-2 ವಿಫಲವಾಗಿತ್ತು.
ಚಂದ್ರಯಾನ 3(ಸಿ-3) ಮುಂದಿನ ವರ್ಷ ಜೂನ್ ತಿಂಗಳಲ್ಲಿ ನಡೆಯಲಿದೆ. ಲಾಂಚ್ ವೆಹಿಕಲ್ ಮಾರ್ಕ್-3(ಎಲ್‌ವಿಎಂ3) ಮೂಲಕ ಚಂದ್ರಯಾನ ಉಡ್ಡಯನಗೊಳ್ಳಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಚೇರ್ಮನ್ ಎಸ್ ಸೋಮನಾಥ ಅವರು ತಿಳಿಸಿದ್ದಾರೆ. ಅಬಾರ್ಟ್ ಮಿಷನ್ ಮೊದಲ ಟೆಸ್ಟ್ ಫ್ಲೈಟ್ ಬಳಿಕ, 2024ರಲ್ಲಿ ಇಸ್ರೋ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಆದರೆ, ಇದಕ್ಕೂ ಮೊದಲು ಅಬಾರ್ಟ್ ಮಿಷನ್‌ಗಳನ್ನು ಯಶಸ್ವಿಗೊಳಿಸಬೇಕಿದೆ. (ಅಬಾರ್ಟ್ ಮಿಷನ್ ಎಂದರೆ- ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ ಕೈಗೊಳ್ಳಲಾಗುವ ಪರೀಕ್ಷೆ. ಒಂದೊಮ್ಮೆ ಮಿಷನ್ ಫೇಲ್ ಆದರೆ, ಅದರಿಂದ ಸುರಕ್ಷಿತವಾಗಿ ಹೊರಗೆ ಬರುವುದು ಹೇಗೆ ಎಂಬುದನ್ನು ಗಗನಯಾತ್ರಿಗಳಿಗೆ ಹೇಳಿಕೊಡಲಾಗುತ್ತದೆ.)
2019ರಲ್ಲಿ ಭಾರತವು ಚಂದ್ರಯಾನ-2 ಕೈಗೊಂಡಿತ್ತು. ಆದರೆ, ಯಶಸ್ವಿಯಾಗಿ ಗುರಿ ತಲುಪಿದ ಉಪಗ್ರಹ ಚಂದ್ರನ ಮೇಲೆ ನಿರ್ದಿಷ್ಟ ಜಾಗದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಮಾಡುವುದರಲ್ಲಿ ಸಕ್ಸೆಸ್ ಆಗಲಿಲ್ಲ. ಹಾಗಾಗಿ, ಚಂದ್ರಯಾನ-2 ಫೇಲ್ ಆಯಿತು. ಇದೀಗ ಇಸ್ರೋ ಚಂದ್ರಯಾನ-3 ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ | NASA Artemis-1 | ನಾಸಾ ಚಂದ್ರಯಾನ ಸತತ 3ನೇ ಬಾರಿ ರದ್ದು, ಈ ಸಲ ಕಾರಣವೇನು?