Site icon Vistara News

OpenAI Bankruptcy: ಎಲ್ಲರ ಉದ್ಯೋಗ ಕಸಿಯಲಿದೆ ಎಂದ ಚಾಟ್‌ಜಿಪಿಟಿಯೇ ದಿವಾಳಿ; ವರದಿ ಹೇಳೋದೇನು?

Openai Staff demands board Resign

ನವದೆಹಲಿ: ಅದು 2022ರ ನವೆಂಬರ್.‌ ಓಪನ್‌ಎಐ (OpenAI) ಕಂಪನಿಯು ಚಾಟ್‌ಜಿಪಿಟಿ (ChatGPT) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ ಬಾಟ್‌ (Chat Bot) ಆರಂಭಿಸಿದ್ದು ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿ ಆರಂಭವಾದಾಗ ಜಗತ್ತಿನ ಕಂಪನಿಗಳೆಲ್ಲ ಇದೇ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತವೆ. ಮುಂದೊಂದು ದಿನ ಮನುಷ್ಯರಿಗೆ ಉದ್ಯೋಗವೇ ಇರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಚಾಟ್‌ಜಿಪಿಟಿ ಮಾತೃ ಸಂಸ್ಥೆಯಾದ ಓಪನ್‌ಎಐ ಕಂಪನಿಯೇ 2024ರಲ್ಲಿ ದಿವಾಳಿಯಾಗಲಿದೆ (OpenAI Bankruptcy) ಎಂದು ವರದಿಯೊಂದು ತಿಳಿಸಿದೆ.

ಹೌದು, ಓಪನ್‌ಎಐ ಕಂಪನಿಯು 2024ರ ಅಂತ್ಯದ ವೇಳೆಗೆ ದಿವಾಳಿಯಾಗಲಿದೆ ಎಂದು ಅನಾಲಿಟಿಕ್ಸ್‌ ಇಂಡಿಯಾ ಮ್ಯಾಗಜಿನ್‌ (Analytics India Magazine) ವರದಿ ತಿಳಿಸಿದೆ. ಚಾಟ್‌ಜಿಪಿಟಿಯ ನಿರ್ವಹಣೆಗೆ ಪ್ರತಿನಿತ್ಯ 5.8 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಕಂಪನಿಯು ಇತ್ತೀಚೆಗೆ ನಷ್ಟ ಅನುಭವಿಸುತ್ತಿದೆ. ಇದೇ ರೀತಿ ಮುಂದುವರಿದರೆ 2024ರ ಅಂತ್ಯದ ವೇಳೆಗೆ ಕಂಪನಿ ದಿವಾಳಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ChatGPT To Bankrupt

ಚಾಟ್‌ಜಿಪಿಟಿ ನಿರ್ವಹಣೆಯ ವೆಚ್ಚ ಸರಿದೂಗಿಸುವ ಜತೆಗೆ ಇತ್ತೀಚೆಗೆ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆಯೂ ಕುಸಿದಿದೆ. ಸಿಮಿಲರ್‌ವೆಬ್‌ ವರದಿ ಪ್ರಕಾರ ಜುಲೈನಲ್ಲಿ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆಯು ಶೇ.9.7ರಷ್ಟು ಕುಸಿದಿದೆ. ಹಾಗೆಯೇ, ಜೂನ್‌ ತಿಂಗಳಲ್ಲಿ ಶೇ.9.7ರಷ್ಟು ಕುಸಿದಿದೆ. ಸದ್ಯ, 150 ಕೋಟಿ ಜನ ಚಾಟ್‌ಜಿಪಿಟಿಯನ್ನು ಬಳಸುತ್ತಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲೂ ಇದೇ ರೀತಿಯ ಇಳಿಕೆಯಾದರೆ ಕಂಪನಿ ಮುನ್ನಡೆಯುವುದು ಕಷ್ಟ ಎನ್ನಲಾಗುತ್ತಿದೆ.

ಇದನ್ನೂ ಓದಿ: ChatGPT : ಚಾಟ್‌ಜಿಪಿಟಿ, ಎಐ ಪರಿಣಾಮ 70% ಭಾರತೀಯ ಕಾರ್ಮಿಕರಿಗೆ ನಿರುದ್ಯೋಗ ಭೀತಿ, ಮೈಕ್ರೊಸಾಫ್ಟ್‌ ಸಮೀಕ್ಷೆ ಹೇಳಿದ್ದೇನು?

ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್‌ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್‌ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಮಾನವ ಸಂಪನ್ಮೂಲ ಕುಸಿಯುತ್ತದೆ, ಉದ್ಯೋಗ ಕಸಿಯುತ್ತದೆ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಓಪನ್‌ಎಐ ಕಂಪನಿ ಪರಿಸ್ಥಿತಿ ದುಸ್ತರವಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.

Exit mobile version