Site icon Vistara News

China Made: ಚೀನಾ ಮೇಡ್‌ ಮೊಬೈಲ್‌ ಬಳಸಬೇಡಿ: ಸೇನಾಯೋಧರು, ಕುಟುಂಬಗಳಿಗೆ ಸೂಚನೆ

indian army

Jammu Kashmir: 5 terrorists killed in Kulgam as anti-terror operation enters Day 2

ನವ ದೆಹಲಿ: ದೇಶದ ರಕ್ಷಣಾ ಪಡೆಗಳ ಯೋಧರು ಮತ್ತು ಅವರ ಕುಟುಂಬದವರು ಚೀನಾ ಮೇಡ್‌ (china made) ಮೊಬೈಲ್‌ ಫೋನ್‌ಗಳನ್ನು ಬಳಸದೇ ಇರುವಂತೆ ಗುಪ್ತಚರ ಸಂಸ್ಥೆಗಳು ಸಲಹೆ ನೀಡಿವೆ.

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಚೀನಾದೊಂದಿಗೆ ಸದಾ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಚೀನಾದ ಹಲವು ಕುತಂತ್ರಾಂಶಗಳು ಭಾರತೀಯ ಮಿಲಿಟರಿ ನೆಲೆಗಳ ರಹಸ್ಯಗಳನ್ನು ಕದಿಯಲು ಉತ್ಸುಕವಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಸೂಚನೆ ಹೊರಡಿಸಲಾಗಿದೆ.

“ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬದವರು ಚೀನಾ ಮೇಡ್‌ ಮೊಬೈಲ್‌ಗಳನ್ನು (china made mobiles) ಬಳಸದಂತೆ ಹುಷಾರಾಗಿರಬೇಕು. ಇವುಗಳನ್ನು ಬಳಸಿದರೆ ದೇಶದ ರಹಸ್ಯಗಳನ್ನು ಬಯಲಿಗೊಡ್ಡುವ ಆತಂಕವಿದೆ. ಹೀಗಾಗಿ ಚೀನೀ ಸಾಧನಗಳನ್ನು ಬಳಸದಂತೆ ರಕ್ಷಣಾ ಯೋಧರನ್ನು ಎಚ್ಚರಿಸಬೇಕುʼʼ ಎಂದು ಪಡೆಗಳಿಗೆ ಸೂಚನೆ ನೀಡಲಾಗಿದೆ.

ಚೀನಾ ಮೂಲದ ಅನೇಕ ಮೊಬೈಲ್‌ಗಳಲ್ಲಿ ಸ್ಪೈವೇರ್, ಮಾಲ್‌ವೇರ್‌ಗಳು ಕಂಡುಬಂದಿವೆ. ಭಾರತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನೀ ಫೋನ್‌ಗಳೆಂದರೆ Vivo, Oppo, Xiaomi, One Plus, Honor, Real Me, ZTE, Gionee, ASUS ಮತ್ತು Infinix.

ಚೀನೀ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಭಾರತೀಯ ಮಿಲಿಟರಿ ಹಾಗೂ ಬೇಹುಗಾರಿಕೆ ಸಂಸ್ಥೆಗಳು ಹಿಂದಿನಿಂದಲೂ ಎಚ್ಚರಿಕೆಯಿಂದಿವೆ. ಬೇಹುಗಾರಿಕೆ ಹಾಗೂ ಮಿಲಿಟರಿ ಯೋಧರ ಮೊಬೈಲ್‌ಗಳಿಂದ ಚೀನೀ ಅಪ್ಲಿಕೇಶನ್‌ಗಳನ್ನು (china made apps) ಅಳಿಸಿಹಾಕಲಾಗಿದೆ. ಚೀನಾ ಮೂಲದ ಹಲವು ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಕೂಡ.

ಇದನ್ನೂ ಓದಿ: Make in India : ಸ್ಥಳೀಯ ಸಹಭಾಗಿತ್ವದಲ್ಲಿ ಆ್ಯಪಲ್‌ ಐಫೋನ್ ಉತ್ಪಾದನೆಗೆ ಚೀನಾದ 14 ಕಂಪನಿಗಳಿಗೆ ಅನುಮತಿ

Exit mobile version