ಚೆನ್ನೈ: ಚೀನಾದಲ್ಲಿ ಭೀಕರ ಪರಿಣಾಮ ಬೀರುತ್ತಿರುವ ಓಮಿಕ್ರಾನ್ ಉಪತಳಿ ಬಿಎಫ್.7 (Coronavirus) ನಿಧಾನವಾಗಿ ಭಾರತದಲ್ಲೂ ಆತಂಕ ಹೆಚ್ಚಿಸುತ್ತಿದೆ. ಉತ್ತರ ಪ್ರದೇಶ, ಕೋಲ್ಕೊತಾಗೆ ವಿದೇಶದಿಂದ ಬಂದ ಮೂರ್ನಾಲ್ಕು ಜನರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ, ತಮಿಳುನಾಡಿನಲ್ಲಿ ಚೀನಾದಿಂದ ಬಂದ ತಾಯಿ ಹಾಗೂ ಮಗಳಿಗೆ ಸೋಂಕು ದೃಢಪಟ್ಟಿದೆ.
ಚೀನಾದಿಂದ ಶ್ರೀಲಂಕಾ ಮಾರ್ಗವಾಗಿ ತಮಿಳುನಾಡಿನ ಮದುರೈಗೆ ಬಂದ ಮಹಿಳೆ ಹಾಗೂ ಅವರ ಆರು ವರ್ಷದ ಪುತ್ರಿಗೆ ಕೊರೊನಾ ದೃಢಪಟ್ಟಿದೆ. ಇಬ್ಬರನ್ನೂ ಐಸೊಲೇಷನ್‌ನಲ್ಲಿ ಇರಿಸಲಾಗಿದ್ದು, ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಮದುರೈ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಚೀನಾದಲ್ಲಿ ನಿತ್ಯ ಕೋಟ್ಯಂತರ ಜನರಿಗೆ ಸೋಂಕು ದೃಢಪಡುತ್ತಿದ್ದು, ಭಾರತಕ್ಕೆ ಹೆಚ್ಚಿನ ಭೀತಿ ತಂದೊಡ್ಡಿದೆ. ಈಗಾಗಲೇ ವಿದೇಶದಿಂದ ಬರುವವರ ತಪಾಸಣೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹಾಗೆಯೇ, ಹಲವು ರಾಜ್ಯಗಳು ಕೂಡ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ.
ಇದನ್ನೂ ಓದಿ | Covid 19 In China | ಚೀನಾದಲ್ಲಿ ಲಕ್ಷಾಂತರ ಜನರ ಸಾವು? ʼವಿಸ್ತಾರʼಕ್ಕೆ ಕೊರೊನಾ ಕುರಿತು ಕನ್ನಡಿಗ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ