ಪ್ರಧಾನಿ ನರೇಂದ್ರ ಮೋದಿ ಯುಎಸ್ ಭೇಟಿಗೆ (PM Modi US Visit) ಹೊರಟ ಬೆನ್ನಲ್ಲೇ ಅತ್ತ ಚೀನಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಅಲ್ಲಿನ ಸರ್ಕಾರಿ ನಿಯಂತ್ರಿತ ಮಾಧ್ಯಮ ಗ್ಲೋಬಲ್ ಟೈಮ್ಸ್ ಪ್ರಧಾನಿ ಮೋದಿ ಅಮೆರಿಕ ಭೇಟಿ ಬಗ್ಗೆ ವರದಿ ಮಾಡಿದೆ. ಅಷ್ಟೇ ಅಲ್ಲ ‘ಯುಎಸ್ ತನ್ನ ಸ್ವಾರ್ಥಕ್ಕಾಗಿ ಭಾರತವನ್ನು ಬಳಸಿಕೊಳ್ಳುತ್ತಿದೆ. ಭಾರತವನ್ನು ಮುಂದೆ ಬಿಟ್ಟು, ಚೀನಾದ ಆರ್ಥಿಕತೆಯನ್ನು ಕುಗ್ಗಿಸುವ ಕೀಳುಮಟ್ಟದ ಪ್ರಯತ್ನ ನಡೆಸುತ್ತಿದೆ’ ಎಂದು ಹೇಳಿದೆ.
‘ಯುಎಸ್ನ ಭೌಗೋಳಿಕ ರಾಜಕೀಯ ಲೆಕ್ಕಾಚಾರಗಳು ಭಾರತ ಮತ್ತು ಯುಎಸ್ ನಡುವಿನ ಆರ್ಥಿಕ ಮತ್ತು ವ್ಯಾಪಾರವನ್ನು ವೃದ್ಧಿಸುವ ರೀತಿಯಲ್ಲಿ ಇವೆ. ಆದರೆ ಯುಎಸ್ ಲೆಕ್ಕಾಚಾರ ಕೆಲಸ ಮಾಡುವುದಿಲ್ಲ ಖಂಡಿತ ವಿಫಲವಾಗುತ್ತದೆ’ ಎಂದು ಚೀನಾದ ಉನ್ನತ ರಾಯಭಾರಿ ವಾಂಗ್ ಯಿ ಅವರು ನೀಡಿದ ಹೇಳಿಕೆಯನ್ನೂ ಕೂಡ ಈ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೆ ಏರಿದ ಮೇಲೆ ಇದು 6ನೇ ಬಾರಿಗೆ ಯುಎಸ್ಗೆ ಭೇಟಿ ಕೊಡುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅಲ್ಲಿನ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಯುಎಸ್ಗೆ ಹೋಗುತ್ತಿದ್ದಾರೆ. ಭಾರತಕ್ಕೆ ಹತ್ತಿರವಾಗುವ ಮೂಲಕ ಚೀನಾದ ಆರ್ಥಿಕತೆಯನ್ನು ಕಳೆಗಟ್ಟಿಸಲು ಪ್ರಯತ್ನ ಮಾಡುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: PM Modi US Visit: ಭಾರತದಿಂದ ಹೊರಟ ಪ್ರಧಾನಿ ಮೋದಿ; ಯುಎಸ್ ಜತೆಗಿನ ಸ್ನೇಹ ಇನ್ನಷ್ಟು ಬಲಪಡಿಸುವ ವಿಶ್ವಾಸ
ಯುಎಸ್ನ ಯುಎಸ್ನ ಭೌಗೋಳಿಕ ರಾಜಕೀಯವನ್ನು ಲೆಕ್ಕಾಚಾರವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಖಂಡಿತವಾಗಿಯೂ ಇಂಡಿಯಾವನ್ನು ಬಳಸಿಕೊಂಡು ಚೀನಾ ಆರ್ಥಿಕ ಅಭಿವೃದ್ಧಿಗೆ ತಡೆ ನೀಡುವುದೇ ಆಗಿದೆ. ಇದು ಭಾರತದ ಕೆಲವು ಸಮಾನ ಮನಸ್ಕರು, ಆರ್ಥಿಕ ತಜ್ಞರೂ ಇದೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜಾಗತಿಕವಾಗಿ ಚೀನಾದ ಪೂರೈಕೆ ಸರಪಳಿ ಅದೆಷ್ಟು ಬಲಿಷ್ಠವಾಗಿದೆ ಎಂದರೆ, ಇದನ್ನು ಭಾರತವನ್ನಾಗಲಿ, ಇತರ ದೇಶಗಳಾಗಲಿ ಬದಲಿಸಲು, ಚೀನಾ ಸದ್ಯ ಇರುವ ಸ್ಥಾನದಲ್ಲಿ ಇನ್ಯಾವುದೇ ದೇಶಗಳೂ ನಿಲ್ಲಲಾಗದು. ಹೀಗೆ ಯುಎಸ್ ಹೇಳಿದಂತೆ ಕೇಳಿದರೆ ಭಾರತಕ್ಕೇ ತೊಂದರೆ. ಭಾರತ ಯುಎಸ್ ಸ್ನೇಹದಿಂದ ದೂರವೇ ಇದ್ದರೆ ಒಳ್ಳೆಯದು ಎಂದು ಚೀನಾ ಹೇಳಿದೆ.