Site icon Vistara News

IIT Mandi: ಹಿಮಾಚಲದ ಭೂಕುಸಿತ, ಮೇಘಸ್ಫೋಟಕ್ಕೆ ಜನ ಮಾಂಸ ತಿನ್ನುತ್ತಿರುವುದೇ ಕಾರಣವಂತೆ!

Laxmidhar Behera

ನವದೆಹಲಿ: ಜನರು ಮಾಂಸಾಹಾರ ಸೇವಿಸುತ್ತಿರುವುದರಿಂದ (People Eat Meat) ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೇಘ ಸ್ಫೋಟ (Cloudbursts) ಮತ್ತು ಭೂಕುಸಿತಗಳು (Landslides) ಸಂಭವಿಸುತ್ತಿವೆಯಂತೆ! ಹೌದು, ಐಐಟಿ ಮಂಡಿ ಡೈರೆಕ್ಟರ್ ಲಕ್ಷ್ಮೀಧರ್ ಬೆಹೆರಾ (IIT Mandi Director Laxmidhar Behera) ಅವರ ಪ್ರಕಾರ, ಹಿಮಾಚಲ ಪ್ರದೇಶದಲ್ಲಾಗುತ್ತಿರುವ ಭೂಕುಸಿತುಗಳು, ಮೇಘಸ್ಫೋಟಗಳು ಜನರು ಮಾಂಸಾಹಾರ ಸೇವಿಸುತ್ತಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಮಾಂಸಾಹಾರ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಕೂಡ ಮಾಡಿಸಿದ್ದಾರೆ. ಐಐಟಿ ಡೈರೆಕ್ಟರ್‌ ಅವರ ಈ ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿದೆ(Viral Video).

ಪ್ರಾಣಿಗಳನ್ನು ಕಡಿಯುವುದನ್ನು ನಿಲ್ಲಿಸುವುದಿಲ್ಲ. ನೀವು ಅಲ್ಲಿ ಪ್ರಾಣಿಗಳನ್ನು ಕಡಿಯುತ್ತಿದ್ದೀರಿ, ಅವು ಮುಗ್ಧ ಪ್ರಾಣಿಗಳು. ಪರಿಸರ ಮತ್ತು ಪ್ರಾಣಿಗಳ ನಡುವೆ ಸಂಬಂಧವಿದೆ. ಪರಿಸರ ನಾಶವಾದಂತೆ ಸಹಜೀವನ ಕೂಡ ನಶಿಸಲಿದೆ. ಇದು ಹೀಗೆಯೇ ಮುಂದುವರಿದರೆ ಹಿಮಾಚಲವು ಪ್ರದೇಶವು ಗಮನಾರ್ಹ ಕುಸಿತವನ್ನು ಕಾಣಬಹುದು ಎಂದು ಮಂಡಿ ಐಐಟಿ ಡೈರೆಕ್ಟರ್ ಲಕ್ಷ್ಮೀಧರ್ ಬೆಹೆರಾ ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ಹಲವು ಸಂಗತಿಗಳ ಮತ್ತೆ ಮತ್ತೆ ಸಂಭವಿಸುತ್ತಿವೆ. ಇವೆಲ್ಲವೂ ಪ್ರಾಣಿಗಳ ಮೇಲಿನ ಕ್ರೌರ್ಯದ ಪರಿಣಾಮಗಳಾಗಿವೆ; ಜನರು ಮಾಂಸವನ್ನು ತಿನ್ನುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಬೆಹೆರಾ ಅವರು ಹೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: Viral Video : ಕಾರಿನ ಸನ್​ರೂಫ್​ ಒಳಗಿಂದ ಅರೆ ನಗ್ನ ದೇಹ ಪ್ರದರ್ಶನ; ಪೊಲೀಸರು ಏನು ಮಾಡಿದ್ರು ನೋಡಿ!

ಒಬ್ಬ ಉತ್ತಮ ಪ್ರಜೆಯಾಗಲು ನೀವು ಏನು ಮಾಡಬೇಕು? ಮಾಂಸಾಹಾರವನ್ನು ತಿನ್ನಬಾರದು ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ, ಮಾಂಸ ತಿನ್ನದಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸುವುದನ್ನು ಕೂಡ ನೋಡಬಹುದು. ಈ ಕುರಿತು ಮಂಡಿ ಐಐಟಿ ಡೈರೆಕ್ಟರ್ ಲಕ್ಷ್ಮೀಧರ್ ಬೆಹೆರಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ನೆಟ್ಟಿಗರು ಮಾತ್ರ ಸಿಕ್ಕಾಪಟ್ಟೆ ಟೀಕಿಸಿದ್ದಾರೆ.

ಇದರೊಂದಿಗೆ ಕುಸಿತ ಪೂರ್ಣಗೊಂಡಿತು. 70 ವರ್ಷಗಳಲ್ಲಿ ಇಲ್ಲಿವರೆಗೆ ಒಂದಿಷ್ಟು ನಿರ್ಮಾಣ ಮಾಡಲಾದ ವ್ಯವಸ್ಥೆಯನ್ನು ಈ ಮೌಢ್ಯವನ್ನು ತುಂಬಿಕೊಂಡಿರುವ ಮೂರ್ಖರು ಸಂಪೂರ್ಣವಾಗಿ ನಾಶ ಮಾಡುತ್ತಾರೆ ಎಂದು ಐಐಟಿ ದಿಲ್ಲಿಯ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಸಂದೀಪ್ ಮಾನಧಾನೆ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version