ಬೆಂಗಳೂರು: ಪಾನೀಯ ಪ್ರಿಯರಿಗೆ ಮತ್ತಷ್ಟು ಮುದ ನೀಡುವ ನಿಟ್ಟಿನಲ್ಲಿ ಕೋಕಾ-ಕೋಲಾ ಇಂಡಿಯಾ (Coca cola India) ಇದೇ ಮೊದಲ ಬಾರಿಗೆ ಸಿದ್ಧವಾದ ಚಹಾವನ್ನು ಪರಿಚಯಿಸುತ್ತಿದೆ. ಹಾನೆಸ್ಟ್ ಟೀ (Honest Tea) ಹೆಸರಿನ ಈ ಬ್ರ್ಯಾಂಡ್‌ನ ಮಾಲೀಕ ಸಂಸ್ಥೆ ಹಾನೆಸ್ಟ್ ಇಂಕ್ ಆಗಿದೆ. ಇದು ಕೋಕಾ-ಕೋಲಾದ ಅಂಗಸಂಸ್ಥೆಯಾಗಿದೆ. ಹಾನೆಸ್ಟ್ ಟೀ ರೀಫ್ರೆಶ್, ಆರ್ಗ್ಯಾನಿಕ್ ಗ್ರೀನ್ ಟೀ ಪೇಯವಾಗಿದೆ. ಈ ಆರ್ಗ್ಯಾನಿಕ್ ಟೀಯನ್ನು (organic tea) ಮಕೈಬಾರಿ ಟೀ ಎಸ್ಟೇಟ್ (makaibari tea estate) ಎಂದೇ ಖ್ಯಾತವಾಗಿರುವ ಲಕ್ಷ್ಮಿ ಟೀನಿಂದ (Lakshmi Tea) ತಯಾರಿಸಲಾಗಿದೆ.
ಹಿಮಾಲಯದ ಮಕೈಬಾರಿ ಒಂದು ಅತ್ಯಂತ ಹಳೆಯದಾದ ಸಾವಯವ ಡಾರ್ಜಲಿಂಗ್ ಟೀ ಪ್ಲಾಂಟೇಶನ್ ಆಗಿದೆ. ಈ ಮಕೈಬಾರಿಯಲ್ಲಿನ ಟೀ ಎಲೆಗಳನ್ನು ಬಯೋಡೈನಾಮಿಕ್ ಕೃಷಿ ವಾತಾವರಣದಲ್ಲಿ ಚಂದಿರನ ಬೆಳಕಿನಲ್ಲಿ ಕೈಯಿಂದಲೇ ಬಿಡಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಕೋಲ್ಕೊತಾದ ಮೂಲದ ಲಕ್ಷ್ಮಿ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ರುದ್ರ ಚಟರ್ಜಿ ಅವರು, “ಡಾರ್ಜಲಿಂಗ್ ನಲ್ಲಿ ಮಕೈಬಾರಿಗಿಂತ ಹೆಸರುವಾಸಿಯಾದ ಮತ್ತೊಂದು ಟೀ ಎಸ್ಟೇಟ್ ಇಲ್ಲ. ಜಪಾನ್ ಅಥವಾ ಇಂಗ್ಲೆಂಡ್ ಗಿಂತಲೂ ರುಚಿಕರವಾದ ಟೀ ಇಲ್ಲಿದೆ. ಮತ್ತೊಂದು ಹೆಮ್ಮೆ ಎಂದರೆ ಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಕಾಲ್ಪನಿಕ ಪತ್ತೇದಾರಿ ಪಾತ್ರವಾದ ಫೆಲುಡಾಗೆ ಇದೇ ಚಹಾ ಆಯ್ಕೆಯಾಗಿರುವುದು’’ ಎಂದು ತಿಳಿಸಿದರು.
ಈ ಹೊಸ ಉತ್ಪನ್ನದ ಬಿಡುಗಡೆ ಬಗ್ಗೆ ಮಾತನಾಡಿದ ಕೋಕಾ-ಕೋಲಾ ಇಂಡಿಯಾದ ಸವತ್ ವೆಸ್ಟ್ ಏಷ್ಯಾದ ಹೈಡ್ರೇಶನ್, ಕಾಫಿ ಅಂಡ್ ಟೀ ವಿಭಾಗದ ಮಾರುಕಟ್ಟೆ ನಿರ್ದೇಶಕ ಕಾರ್ತೀಕ್ ಸುಬ್ರಮಣ್ಯನ್ ಅವರು, `ನಾವು ನಮ್ಮ ಹೊಸ ರೆಡಿ-ಟು-ಡ್ರಿಂಕ್ ಐಸ್ಡ್ ಗ್ರೀನ್ ಟೀಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಕ್ಕೆ ಅತೀವ ಸಂತಸವೆನಿಸುತ್ತಿದೆ. ಹಾನೆಸ್ಟ್ ಟೀಯೊಂದಿಗೆ ನಾವು ಗ್ರಾಹಕರಿಗೆ ಗ್ರೀನ್ ಟೀಯ ರುಚಿಯ ಅನನ್ಯವಾದ ಅನುಭವವನ್ನು ನೀಡುತ್ತಿದ್ದೇವೆ. ಪ್ರಯಾಣದಲ್ಲಿರಲಿ ಅಥವಾ ವಿಶ್ರಾಂತಿ ಪಡೆಯುತ್ತಿರಲಿ ಅಲ್ಲಿ
ಹಾನೆಸ್ಟ್ ಟೀ’ ಅವರಿಗೆ ಉತ್ತಮವಾದ ಪರಿಪೂರ್ಣ ಸಂಗಾತಿಯಾಗಲಿದೆ’’ ಎಂದರು.
ಈ ಹಾನೆಸ್ಟ್ ಟೀ ಎರಡು ಸ್ವಾದಗಳಲ್ಲಿ ಲಭ್ಯವಿದೆ. ಲೆಮನ್-ತುಳಸಿ ಮತ್ತು ಮಾವಿನಹಣ್ಣು ಸ್ವಾದಗಳು. ಇವುಗಳು ಗ್ರಾಹಕರ ರುಚಿಯ ದಾಹವನ್ನು ನೀಗಿಸಲಿವೆ. ಇಂದಿನ ಆಧುನಿಕ ಜಗತ್ತಿನ ಮಹಿಳೆಯರು ಮತ್ತು ಪುರುಷರಿಗೆ ಸಮತೋಲಿತ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಇದು ಅತ್ಯುತ್ತಮ ಪೇಯವಾಗಿದೆ. ಇದು ಸುಮಧುರವಾದ ಕ್ಷಣವನ್ನು ನೀಡುತ್ತದೆ. ಪ್ರಕೃತಿಯ ಸಾಮರಸ್ಯದಿಂದ ಬೆಳೆದ ಸಾವಯವ ಗ್ರೀನ್ ಟೀನೊಂದಿಗೆ ಈ ಚಹಾವನ್ನು ತಯಾರಿಸಲಾಗಿದೆ. ಹಾನೆಸ್ಟ್ ಟೀ ಕೇವಲ ಉತ್ತಮ ರುಚಿಯನ್ನಷ್ಟೇ ಅಲ್ಲ, ಉತ್ತಮ ಗುಣಮಟ್ಟದ ಚಹಾ ಎಲೆಗಳಿಂದ ತಯಾರಿಸಿದ ಟೀ ಆಗಿದೆ.
ಈ ಹಾನೆಸ್ಟ್ ಟೀಯನ್ನು ವಿಶೇಷವಾಗಿ ಬೆಂಗಳೂರು, ಮುಂಬೈ, ಹೈದ್ರಾಬಾದ್, ಚೆನ್ನೈ ಮತ್ತು ಪುಣೆ ನಗರಗಳ ಇ-ಕಾಮರ್ಸ್ ನಲ್ಲಿ ಬಿಡುಗಡೆ ಮಾಡಿದೆ. ಈ ಚಹಾದ ಬೆಲೆ 50 ರೂಪಾಯಿಗಳಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾನೆಸ್ಟ್ ಟೀಯ ಇನ್‌ಸ್ಟಾಗ್ರಾಂ ಪೇಜ್ @honestteaindia ಗೆ ಭೇಟಿ ನೀಡಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Quit Caffeine: ಕಾಫಿ, ಚಹಾಕ್ಕಿಂತ ನಮ್ಮನ್ನು ಚುರುಕಾಗಿಡಬಲ್ಲ ಆಹಾರಗಳ್ಯಾವುವು ಗೊತ್ತೇ?