Site icon Vistara News

Vijay Antony: ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್‌ ಆ್ಯಂಟೊನಿ ಪುತ್ರಿ ಆತ್ಮಹತ್ಯೆ; 16ರ ಹುಡುಗಿಗೆ ಏನಾಯ್ತು?

vijay daughter death

ಚೆನ್ನೈ: ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ (Tamil actor, Composer) ವಿಜಯ್‌ ಆ್ಯಂಟೊನಿ (Vijay Antony) ಅವರ 16ರ ವರ್ಷದ ಮಗಳು (16 year old daughter) ಆತ್ಮಹತ್ಯೆ (suicide Case) ಮಾಡಿಕೊಂಡಿದ್ದಾಳೆ. ನಿರ್ಮಾಪಕರಾಗಿಯೂ ಹೆಸರು ಮಾಡಿರುವ ವಿಜಯ್‌ ಅವರ ಮಗಳು ಮೀರಾ ಚೆನ್ನೈಯ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಮಂಗಳವಾರ ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಮೀರಾ ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಚೆನ್ನೈನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಹುಡುಗಿ ಆಟ ಪಾಠಗಳಲ್ಲಿ ಮುಂದಿದ್ದರೂ ಆಕೆಯನ್ನು ಖಿನ್ನತೆ ಕಾಡುತ್ತಿತ್ತು ಎನ್ನಲಾಗಿದೆ. ಇದೇ ಆಕೆಯ ಸಾವಿಗೆ ಕಾರಣವಾಯಿತು ಎನ್ನುವುದು ಪ್ರಾಥಮಿಕ ವರದಿ.

ಸಂಗೀಗ ನಿರ್ದೇಶಕರಾಗಿರುವ ವಿಜಯ್‌ ಅವರು ಹಲವು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಮುಂದಿನ ಚಿತ್ರ ರಥಂ ಬಿಡುಗಡೆಯ ತರಾತುರಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ಚೆನ್ನೈಯಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮ ಭಾರಿ ಜನಪ್ರಿಯತೆ ಪಡೆದು ಹಿಟ್‌ ಆಗಿತ್ತು.

ಇಂಥ ಕಲಾವಿದನ ಬದುಕಿಗೆ ಈಗ ಬರಸಿಡಿಲೇ ಬಡಿದಿದೆ. ಮಂಗಳವಾರ ಮುಂಜಾನೆ ವಿಜಯ್‌ ಮತ್ತು ಇತರರು ಬೆಳಗ್ಗೆ ಮೂರು ಗಂಟೆಗೆ ಏನೋ ಸದ್ದು ಬಂತು ಎಂದು ಎದ್ದು ನೋಡಿದಾಗ ಕೋಣೆಯಲ್ಲಿ ಮೀರಾ ನೇಣು ಹಾಕಿಕೊಂಡಿದ್ದಳು. ಮೈಕೈಯಲ್ಲಿ ಚಲನೆ ಕಂಡುಬಂದಾಗಲೇ ಅವರು ಆಕೆಯನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ನೇಣು ಬಲವಾಗಿ ಬಿಗಿದಿದ್ದರಿಂದ ಆಗಲೇ ಉಸಿರು ನಿಂತಿತ್ತು.

ಇದನ್ನೂ ಓದಿ: Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು

ವಿಜಯ್‌ ಆಂಟೊನಿ ಮತ್ತು ಪತ್ನಿ ಫಾತಿಮಾ

ವಿಜಯ್‌ ಅವರು ಅವರು ಹಲವಾರು ವರ್ಷಗಳಿಂದ ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ. ಪಿಚ್ಚಕ್ಕಾರನ್‌ ಸಿನಿಮಾ ಅವರಿಗೆ ಹೊಸ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಅವರೊಬ್ಬ ನಿರ್ಮಾಪಕನಾಗಿ ನಟನಾಗಿ, ಚಿತ್ರಸಾಹಿತಿಯಾಗಿ, ಸಂಕಲನಕಾರನಾಗಿ, ಆಡಿಯೋ ಎಂಜಿನಿಯರ್‌ ಮತ್ತು ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: World Suicide Prevention Day | ಮನವ ತಿನ್ನುವ ಚಿಂತೆ ಬದುಕು ಮುಗಿಸದಿರಲು ಹೀಗೆ ಮಾಡಿ

ಕೆಲವು ವರ್ಷಗಳ ಹಿಂದೆ ಫಾತಿಮಾ ಅವರನ್ನು ಮದುವೆಯಾಗಿರುವ ವಿಜಯ್‌ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳು. ಪುಟ್ಟ ಸಂಸಾರ, ದೊಡ್ಡ ಸಾಧನೆಯ ನಡುವೆ ಪ್ರೊಡಕ್ಷನ್‌ ಹೌಸ್‌ ಕಟ್ಟಿಕೊಂಡಿದ್ದ ಅವರ ಬದುಕಿನಲ್ಲಿ ಈಗ ದೊಡ್ಡ ಆಘಾತವಾಗಿದೆ.

Exit mobile version