Site icon Vistara News

ಚುನಾವಣೆ ಪ್ರಚಾರಕ್ಕೂ ಪಕ್ಷಗಳಿಂದ ‘ಕಾಂಡೋಮ್‌’ ಬಳಕೆ; ಹೇಗೆ ಅಂತೀರಾ? Video ನೋಡಿ

Condom Packets

Condoms branded with party symbols new political campaign tool in Andhra Pradesh

ಹೈದರಾಬಾದ್:‌ ದೇಶದ ಯಾವುದೇ ರಾಜಕೀಯ ಪಕ್ಷಗಳ ಚುನಾವಣೆ ಪ್ರಚಾರ ಹೇಗಿರುತ್ತದೆ? ಆಯಾ ಪಕ್ಷಗಳ ನಾಯಕರು ಬೃಹತ್‌ ರ‍್ಯಾಲಿ, ರೋಡ್‌ ಶೋ, ಸಮಾವೇಶಗಳನ್ನು ನಡೆಸಿ ಅಬ್ಬರದ ಭಾಷಣ ಮಾಡುತ್ತಾರೆ. ಮನೆ ಮನೆಗೆ ತೆರಳಿ ಭರಪೂರ ಭರವಸೆ ನೀಡಲಾಗುತ್ತದೆ. ಹಣ-ಹೆಂಡ ಹಂಚುವವರೂ ಇದ್ದಾರೆ. ಉಚಿತ ಗ್ಯಾರಂಟಿಗಳ ಮೂಲಕ ಮತದಾರರ ಮನವೊಲಿಸಲು ಯತ್ನಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಕೈಗೊಳ್ಳಲಾಗುತ್ತದೆ. ಆದರೆ, ಆಂಧ್ರಪ್ರದೇಶದಲ್ಲಿ (Andhra Pradesh) ಚುನಾವಣೆ ಪ್ರಚಾರಕ್ಕಾಗಿ (Election Campaign) ರಾಜಕೀಯ ಪಕ್ಷಗಳು ಕಾಂಡೋಮ್‌ ಪ್ಯಾಕೆಟ್‌ಗಳನ್ನು (Condom Packets) ಬಳಸುತ್ತಿವೆ. ಇದರ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ಅಬ್ಬರ ಜಾಸ್ತಿಯಾಗುತ್ತಿದೆ. ಹಾಗಾಗಿ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಹಾಗೂ ತೆಲುಗು ದೇಶಂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕಾಂಡೋಮ್‌ ಪ್ಯಾಕೆಟ್‌ಗಳ ಮೇಲೆ ಪಕ್ಷಗಳ ಚಿಹ್ನೆಗಳನ್ನು ಮುದ್ರಿಸಿ, ಜನರಿಗೆ ಹಂಚುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ, ಕಾಂಡೋಮ್‌ ಪ್ಯಾಕೆಟ್‌ಗಳ ಹಂಚಿಕೆ ಮಾಡುವ ವಿಡಿಯೊ ಕೂಡ ವೈರಲ್‌ ಆಗಿದೆ. ಪಕ್ಷಗಳ ಇಂತಹ ಕೀಳು ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡೂ ಪಕ್ಷಗಳ ನಾಯಕರು ಜನರ ಮನೆಮನೆಗೆ ತೆರಳಿ ಕಾಂಡೋಮ್‌ಗಳನ್ನು ವಿತರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಯುವಕರು, ಇತ್ತೀಚೆಗಷ್ಟೇ ಮದುವೆಯಾದವರು ಸೇರಿ ಹಲವರನ್ನು ಗುರುತಿಸಿ, ಅವರಿಗೆ ಪಕ್ಷಗಳ ಚಿಹ್ನೆಗಳಿರುವ ಹಲವು ಬ್ರ್ಯಾಂಡ್‌ಗಳ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆಗಲೇ, ಆಂಧ್ರಪ್ರದೇಶದಲ್ಲಿ ಹಲವು ರೀತಿಯಲ್ಲಿ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ.

ಇದನ್ನೂ ಓದಿ: ST Somashekhar : ಕಾಂಗ್ರೆಸ್‌ MLC ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ನಿಜ, ಏನೀಗ ಎಂದ ಸೋಮಶೇಖರ್‌

ಪರಸ್ಪರ ಕೆಸರೆರಚಾಟ

ಸಾರ್ವಜನಿಕರರಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳು ಇರುವ ಕಾಂಡೋಮ್ ಪ್ಯಾಕೆಟ್‌ಗಳನ್ನು ಹಂಚುತ್ತಿರುವ ಕುರಿತು ವೈಎಸ್‌ಆರ್‌ಸಿಪಿ ಹಾಗೂ ಟಿಡಿಪಿ ಮಧ್ಯೆ ಕೆಸರೆರಚಾಟ ಶುರುವಾಗಿದೆ. ಟಿಡಿಪಿ ಚಿಹ್ನೆ ಇರುವ ಕಾಂಡೋಮ್‌ ಪ್ಯಾಕೆಟ್‌ ಹಂಚುವ ವಿಡಿಯೊ ಶೇರ್‌ ಮಾಡಿರುವ ವೈಎಸ್‌ಆರ್‌ಸಿಪಿ, “ಟಿಡಿಪಿ ಇನ್ನೂ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತದೆ? ಕಾಂಡೋಮ್‌ ಪ್ಯಾಕೆಟ್‌ಗಳ ಹಂಚಿಕೆಗೆ ನಿಲ್ಲಿಸುತ್ತೀರೋ ಅಥವಾ ಜನರಿಗೆ ವಯಾಗ್ರಗಳನ್ನೂ ಹಂಚುತ್ತೀರೋ” ಎಂದು ಕುಟುಕಿದೆ. ಇದಕ್ಕೆ ಟಿಡಿಪಿಯು, ವೈಎಸ್‌ಆರ್‌ಸಿಪಿ ಲೋಗೊ ಇರುವ ಕಾಂಡೋಮ್‌ ಪ್ಯಾಕೆಟ್‌ ಹಂಚಿಕೆಯ ವಿಡಿಯೊವನ್ನು ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version