ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಾಗಾಗಿ, ಅಬ್ಬರದ ಪ್ರಚಾರದ ಜತೆಗೆ ಪ್ರತಿಸ್ಪರ್ಧಿಗಳು ಹಾಗೂ ಪಕ್ಷಗಳ ವಿರುದ್ಧ ದಾಳಿ, ವ್ಯಂಗ್ಯ, ಆಕ್ರೋಶ, ಅಣಕಗಳು ಶುರುವಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಕ್ರಿಕೆಟ್ ಪರಿಭಾಷೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕುರಿತು ವ್ಯಂಗ್ಯವಾಡಿದ್ದಾರೆ.
“ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಆಪ್ ಸ್ಪರ್ಧೆಯು ಅನೌಪಚಾರಿಕವಾಗಿದೆ. ಕ್ರಿಕೆಟ್ ಪರಿಭಾಷೆಯಲ್ಲಿಯೇ ಹೇಳುವುದಾದರೆ ಹಿಮಾಚಲ ಪ್ರದೇಶದ ರಾಜಕೀಯ ಪಿಚ್‌ನಲ್ಲಿ ಕಾಂಗ್ರೆಸ್ ವೈಡ್ ಇದ್ದಂತೆ, ಆಮ್ ಆದ್ಮಿ ಪಕ್ಷವು ನೋ ಬಾಲ್ ಇದ್ದಂತೆ. ಆದರೆ ಬಿಜೆಪಿ ಮಾತ್ರ ಗುಡ್ ಲೆಂತ್ ಬಾಲ್” ಎಂದು ರಾಜ್ಯದಲ್ಲಿ ನಡೆಸಿದ ಚುನಾವಣೆ ರ‍್ಯಾಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷಗಳು ಹತ್ತಾರು ಭರವಸೆಗಳ ಮೂಲಕ ಜನರನ್ನು ಸೆಳೆಯಲು ಯತ್ನಿಸುತ್ತಿವೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಹಾಗೂ ಆಪ್ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅತ್ತ ಬಿಜೆಪಿಯು, ಏಕರೂಪ ನಾಗರಿಕ ಸಂಹಿತೆ ಸೇರಿ ಜನರಿಗೆ ಹತ್ತಾರು ಭರವಸೆ ನೀಡಿದೆ.
ಇದನ್ನೂ ಓದಿ | Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?