ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಗೆಲುವು ಸಾಧಿಸುವ ದೃಷ್ಟಿಯಿಂದ ಕಾಂಗ್ರೆಸ್ ಹಲವು ರಣತಂತ್ರಗಳನ್ನು ರೂಪಿಸಿದೆ. ಅದರಲ್ಲೂ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು (Congress Guarantee) ಘೋಷಿಸಿ, ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಉತ್ಸಾಹದಲ್ಲಿರುವ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನರಿಗೆ 25 ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಘರ್ ಘರ್ ಗ್ಯಾರಂಟಿ (Ghar Ghar Guarantee) ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಸುಮಾರು 25 ಭರವಸೆಗಳಿರುವ ಘರ್ ಘರ್ ಗ್ಯಾರಂಟಿ ಅಭಿಯಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಆರಂಭಿಸಿದ್ದಾರೆ. ಕಾಂಗ್ರೆಸ್ ಸುಮಾರು 8 ಭಾಷೆಗಳಲ್ಲಿ ಗ್ಯಾರಂಟಿ ಕಾರ್ಡ್ಗಳನ್ನು ಮುದ್ರಿಸಿದ್ದು, ಪಕ್ಷದ ಕಾರ್ಯಕರ್ತರು ದೇಶಾದ್ಯಂತ 8 ಕೋಟಿಗೂ ಅಧಿಕ ಕುಟುಂಬಗಳಿಗೆ ಕಾರ್ಡ್ಗಳನ್ನು ವಿತರಣೆ ಮಾಡಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ತಿಳಿಸಿದೆ. ಪ್ರಮುಖ ಐದು ಗ್ಯಾರಂಟಿಗನ್ನು ಘೋಷಣೆ ಮಾಡಿದ್ದು, ಒಂದೊಂದು ಗ್ಯಾರಂಟಿಯೂ ಐದೈದು ಭರವಸೆಗಳನ್ನು ಒಳಗೊಂಡಿದೆ. ಆ ಮೂಲಕ ಲೋಕಸಭೆ ಚುನಾವಣೆಯಲ್ಲೂ ಉಚಿತ ಗ್ಯಾರಂಟಿಗಳ ಮೂಲಕ ಜನರ ವಿಶ್ವಾಸ, ಮತ ಗಳಿಸಲು ಕಾಂಗ್ರೆಸ್ ಮುಂದಾಗಿದೆ.
Today @INCIndia President Mallikarjun @kharge ji launched the Ghar Ghar Guarantee Abhiyan from Northeast Delhi Parliamentary Constituency. Congress workers will be distributing these Guarantee Cards, printed in 14 different languages, to 8 crore families across India over the… pic.twitter.com/YpXGg9GvK6
— Jairam Ramesh (@Jairam_Ramesh) April 3, 2024
ಕಾಂಗ್ರೆಸ್ ಘೋಷಿಸಿದ 25 ಗ್ಯಾರಂಟಿಗಳು ಇಲ್ಲಿವೆ
1) ಯುವ ನ್ಯಾಯ
- ಶಿಕ್ಷಣ ಪಡೆದ ಯುವಜನತೆಗೆ ವಾರ್ಷಿಕ 1 ಲಕ್ಷ ರೂ. ಅಪ್ರೆಂಟಿಸ್ಶಿಪ್
- 30 ಲಕ್ಷ ಉದ್ಯೋಗ ಸೃಷ್ಟಿ
- ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
- ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
- ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್ ಫಂಡ್
2. ನಾರಿ ನ್ಯಾಯ
- ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು
- ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ
- ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ
- ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು
- ಮಹಿಳಾ ಕಾರ್ಮಿಕರ ಹಾಸ್ಟೆಲ್ಗಳನ್ನು ಎರಡು ಪಟ್ಟು ಹೆಚ್ಚಿಸುವುದು
3. ಕಿಸಾನ್ ನ್ಯಾಯ
- ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು
- ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ
- ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು
- ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು
- ಕೃಷಿ ಸಲಕರಣೆಗಳಿಗೆ ಜಿಎಸ್ಟಿಯಿಂದ ಮುಕ್ತಿ
4. ಶ್ರಮಿಕ ನ್ಯಾಯ
- ನರೇಗಾ ದಿನಗೂಲಿ ಕಾರ್ಮಕರ ದಿನಗೂಲಿ 400 ರೂ.ಗೆ ಏರಿಕೆ
- ಪ್ರತಿಯೊಬ್ಬರಿಗೂ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ
- ನರೇಗಾ ರೀತಿ ನಗರಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ
- ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ
- ಸರ್ಕಾರಿ ನೌಕರರಿಗೆ ರಕ್ಷಣೆ, ಪಾರದರ್ಶಕತೆಗೆ ಆದ್ಯತೆ
5. ಸಮಾನತೆಯ ನ್ಯಾಯ
- ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ದೇಶಾದ್ಯಂತ ಜಾತಿ ಗಣತಿ
- ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯ ಶೇ.50ರ ಮತಿ ತೆಗೆದುಹಾಕಲಾಗುವುದು
- ಎಸ್ಸಿ, ಎಸ್ಟಿಯವರಿಗೆ ವಿಶೇಷ ಬಜೆಟ್ ಮಂಡನೆ
- ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಜ್ಯಗಳನ್ನು 1 ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು
- ಎಸ್ಟಿ ಸಮುದಾಯದವರು ಜಾಸ್ತಿ ಇರುವ ಕಡೆ ಪಂಚಾಯತ್ ಎಕ್ಸ್ಟೆನ್ಶನ್ ಟು ಶೆಡ್ಯೂಲ್ಡ್ ಏರಿಯಾಸ್ ಆಕ್ಟ್ (PESA) ವಿಸ್ತರಣೆ
ಇದನ್ನೂ ಓದಿ: CM Siddaramaiah: 1977ರ ಬಳಿಕ ಮೈಸೂರಿನಲ್ಲಿ ಕಾಂಗ್ರೆಸ್ನಿಂದ ಒಕ್ಕಲಿಗರೊಬ್ಬರು ಗೆಲ್ಲಲಿದ್ದಾರೆ: ಸಿಎಂ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ