Site icon Vistara News

AK Antony | ಮೋದಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಹಿಂದುಗಳ ಬೆಂಬಲ ಅನಿವಾರ್ಯ ಎಂದ ಕೈ ನಾಯಕ ಎ.ಕೆ.ಆ್ಯಂಟನಿ

AK Antony On Hindus

ತಿರುವನಂತಪುರಂ: 2024ರ ಲೋಕಸಭೆ ಚುನಾವಣೆಗೆ ಸರ್ವ ಪಕ್ಷಗಳೂ ಸಜ್ಜಾಗುತ್ತಿವೆ. ಅದರಲ್ಲೂ, ಜಾತಿ, ಧರ್ಮದ ಲೆಕ್ಕಾಚಾರಗಳು ಶುರುವಾಗಿವೆ. ಇದರ ಭಾಗವಾಗಿಯೇ, ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರು ರಾಹುಲ್‌ ಗಾಂಧಿ ಅವರನ್ನು ಭಗವಾನ್‌ ಶ್ರೀರಾಮನಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ (AK Antony) ಅವರೂ ಹಿಂದುಗಳ ಮತ ಪ್ರಾಬಲ್ಯದ ಕುರಿತು ಮಾತನಾಡಿದ್ದಾರೆ.

“ನರೇಂದ್ರ ಮೋದಿ ಅವರ ಸರ್ಕಾರವನ್ನು ಸೋಲಿಸಲು ಕಾಂಗ್ರೆಸ್‌ಗೆ ಹಿಂದುಗಳ ಬೆಂಬಲ ಅತ್ಯಗತ್ಯವಾಗಿದೆ. ಇದರ ದೃಷ್ಟಿಯಿಂದ ನಾವು ಬಹುಸಂಖ್ಯಾತರ ವಿಶ್ವಾಸವನ್ನು ಗಳಿಸಲೇಬೇಕಿದೆ. ಕೇವಲ ಅಲ್ಪಸಂಖ್ಯಾತರ ಬೆಂಬಲದಿಂದ ಕಾಂಗ್ರೆಸ್‌ ಗೆಲುವು ಸಾಧಿಸಲು ಸಾಧ್ಯವಿಲ್ಲ. ಮೋದಿ ಅವರನ್ನು ಸೋಲಿಸಲು ಹಿಂದುಗಳ ವಿಶ್ವಾಸ ಗಳಿಸುವುದು ಅತ್ಯವಶ್ಯ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸಲ್ಮಾನ್‌ ಖುರ್ಷಿದ್‌ ಅವರು ರಾಹುಲ್‌ ಗಾಂಧಿ ಅವರನ್ನು ರಾಮನಿಗೆ ಹೋಲಿಸಿದರು. “ರಾಹುಲ್‌ ಗಾಂಧಿ ಅವರಲ್ಲಿ ಒಬ್ಬ ಯೋಗಿಗೆ ಇರುವ ದೃಢತೆ, ಶ್ರದ್ಧೆ ಇದೆ. ಅವರಲ್ಲೊಬ್ಬ ಶ್ರೀರಾಮನೂ ಇದ್ದಾನೆ” ಎಂದು ಹೇಳಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ | Congress BJP Spar | ರಾಹುಲ್‌ ಗಾಂಧಿಯನ್ನು ರಾಮನಿಗೆ ಹೋಲಿಸಿದ ಕಾಂಗ್ರೆಸ್‌, ಹಿಂದುಗಳ ಭಾವನೆಗಳಿಗೆ ಅವಮಾನ ಎಂದ ಬಿಜೆಪಿ

Exit mobile version