Site icon Vistara News

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Narendra modi

ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ವಿತರಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ಮಾಡಿದ ಆರೋಪಕ್ಕೆ ಕೈಪಕ್ಷ ಭಾನುವಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಪ್ರಧಾನಿ ತಮ್ಮ ಸುಳ್ಳುಗಳ ಮೂಲಕ ಹಿಂದೂ-ಮುಸ್ಲಿಮರನ್ನು ಮತ್ತೆ ವಿಭಜಿಸುತ್ತಿದ್ದಾರೆ ಎಂದು ಹೇಳಿದೆ.

ರಾಜಸ್ಥಾನದ ಬನ್​ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮನಸ್ಥಿತಿಯನ್ನು ‘ನಗರ ನಕ್ಸಲ್’ ಎಂದು ಕರೆದಿದ್ದಾರೆ. “ಕಾಂಗ್ರೆಸ್ ಪ್ರಣಾಳಿಕೆಯು ತಾಯಂದಿರು ಮತ್ತು ಸಹೋದರಿಯರು ಚಿನ್ನಕ್ಕೆ ಸಮ ಎಂದಿದೆ. ಅವರಿಗೆ ಆಸ್ತಿಯನ್ನು ವಿತರಿಸುತ್ತೇವೆ ಎಂದು ಹೇಳಿದೆ. ಆದರೆ ಅವರು ಅದನ್ನು ಯಾರಿಗೆ ವಿತರಿಸುತ್ತಾರೆ ಗೊತ್ತೇ? ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಲಾಗಿತ್ತು ಎಂಬುದಾಗಿ ಮೋದಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ರೀತಿಯ ಯಾವುದೇ ಅಂಶಗಳು ಇಲ್ಲ ಎಂದು ಹೇಳಿದೆ.

ಮೊದಲ ಹಂತದ ಮತದಾನದ ನಂತರ ನರೇಂದ್ರ ಮೋದಿಯವರ ಸುಳ್ಳುಗಳ ಪ್ರಮಾಣ ಜಾಸ್ತಿಯಾಗಿದೆ. ಮಾತಿನ ಗುಣಮಟ್ಟ ಹೆಚ್ಚಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ನುಸುಳುಕೋರರಿಗೆ ಸಂಪತ್ತು

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ಹೇಳಿದೆ. ಯಾರಿಗೆ? ಈ ಹಿಂದೆ, ಅವರ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು ಹೇಳಿದ್ದರು. ಇದರರ್ಥ ಅವರು ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಒಳನುಸುಳುವವರಿಗೆ ವಿತರಿಸುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಒಪ್ಪುತ್ತೀರಾ?” ಎಂದು ಮೋದಿ ಕೇಳಿದ್ದರು.

ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್​​ ಅವರ ಹೇಳಿಕೆಯೊಂದು 2006 ವಿವಾದಕ್ಕೆ ಕಾರಣವಾಗಿತ್ತು. ಆ ವೇಳೆ ಪಿಎಂಒ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲಗಳಲ್ಲಿ ಸಮಾನವಾಗಿ ಭಾಗವಹಿಸಲು ಸಶಕ್ತರಾಗಿದ್ದಾರೆ ಸಿಂಗ್ ತಮ್ಮ ಹೇಳಿಕೆ ನೀಡಿದ್ದರು. ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಕುರಿತು ಮನಮೋಹನ್ ಸಿಂಗ್ ಅವರ ಉಲ್ಲೇಖವು ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರು ಮತ್ತು ಮಕ್ಕಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಆದ್ಯತೆಯ ಕ್ಷೇತ್ರಗಳನ್ನು ಉಲ್ಲೇಖಿಸಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಆ ಬಳಿಕ ಹೇಳಿಕೆ ನೀಡಿತ್ತು. ಆ ಹೇಳಿಕೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಬನ್ಸ್ವಾರಾದಲ್ಲಿ ನರೇಂದ್ರ ಮೋದಿಯವರ ರ್ಯಾಲಿಯ ನಂತರ ಈ ಹೇಳಿಕೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರದ ಪ್ರಮುಖ ವಿಷಯವಾಯಿತು.

ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದೂ ಅಥವಾ ಮುಸ್ಲಿಂ ಎಂಬ ಪದಗಳ ಉಲ್ಲೇಖ ಎಲ್ಲರಿಯೂ ಇಲ್ಲ. ಇಲ್ಲ. “ನಾವು ನ್ಯಾಯದ ಬಗ್ಗೆ ಮಾತನಾಡಿದ್ದೇವೆ. ಯುವಕರು, ಬುಡಕಟ್ಟು ಜನಾಂಗದವರು, ಕಾರ್ಮಿಕರು, ಮಹಿಳೆಯರಿಗೆ ನ್ಯಾಯ … ನಾವು ಅಂತಹ ಯಾವುದೇ ವಿಭಜಕ ಪದವನ್ನು ಬಳಸಿದ್ದೇವೆಯೇ ಎಂದು ಕಂಡುಹಿಡಿಯಲು ಜನರು ಇಂದು ನಮ್ಮ ಪ್ರಣಾಳಿಕೆಯನ್ನು ಓದುತ್ತಿದ್ದಾರೆ. ಅದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು… ಕಾಂಗ್ರೆಸ್ ಅಂತಹ ಯಾವುದೇ ಪದಗಳನ್ನು ಬಳಸಿಲ್ಲ ಎಂದು ಅವರು ಅರಿತುಕೊಳ್ಳುತ್ತಿದ್ದಾರೆ. ನಮ್ಮ ಪ್ರಣಾಳಿಕೆಗಾಗಲೀ, ನಮ್ಮ ಮನಸ್ಸನ್ನಾಗಲೀ, ಸಂವಿಧಾನಕ್ಕಾಗಲೀ, ಸಮಾಜಕ್ಕಾಗಲೀ ಇಂತಹ ಪದಗಳಿಗೆ ಸ್ಥಾನವಿಲ್ಲ” ಎಂದು ಪವನ್ ಖೇರಾ ಹೇಳಿದರು.

Exit mobile version