ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಇದೇ ಮಾದರಿಯಲ್ಲಿ ಪ್ರಣಾಳಿಕೆ ಘೋಷಿಸಿದೆ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಹಣಕಾಸು ನೆರವು ಸೇರಿ ಪಂಚ ನ್ಯಾಯಗಳ ತತ್ವದಲ್ಲಿ ಕಾಂಗ್ರೆಸ್ ಪ್ರಾಣಾಳಿಕೆ ಬಿಡುಗಡೆ ಮಾಡಿದೆ. ಒಂದೊಂದು ನ್ಯಾಯ ತತ್ವವೂ ಐದೈದು ಭರವಸೆ ಹೊಂದಿದೆ. ಅಲ್ಲಿಗೆ ಕಾಂಗ್ರೆಸ್ 25 ಭರವಸೆಗಳನ್ನು ನೀಡಿದಂತಾಗಿದೆ.
ಪಂಚ ನ್ಯಾಯ ತತ್ವದಲ್ಲಿ ಯುವಕರಿಗಾಗಿ ಯುವ ನ್ಯಾಯ, ಮಹಿಳೆಯರಿಗೆ ನಾರಿ ನ್ಯಾಯ, ರೈತರಿಗಾಗಿ ಕಿಸಾನ್ ನ್ಯಾಯ, ಕಾರ್ಮಿಕರಿಗಾಗಿ ಶ್ರಮಿಕ್ ನ್ಯಾಯ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯ ನೀಡುವ ಹಿಸ್ಸೇದಾರಿ ನ್ಯಾಯ ಎಂಬ ಐದು ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
1) ಯುವ ನ್ಯಾಯ
- ಶಿಕ್ಷಣ ಪಡೆದ ಯುವಜನತೆಗೆ ವಾರ್ಷಿಕ 1 ಲಕ್ಷ ರೂ. ಅಪ್ರೆಂಟಿಸ್ಶಿಪ್
- 30 ಲಕ್ಷ ಉದ್ಯೋಗ ಸೃಷ್ಟಿ
- ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
- ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
- ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್ ಫಂಡ್
#WATCH | Congress Party releases its manifesto for the 2024 Lok Sabha elections, at AICC headquarters in Delhi.
— ANI (@ANI) April 5, 2024
#LokSabhaElections2024 pic.twitter.com/lNZETTLDLY
2. ನಾರಿ ನ್ಯಾಯ
- ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು
- ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ
- ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ
- ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು
- ಮಹಿಳಾ ಕಾರ್ಮಿಕರ ಹಾಸ್ಟೆಲ್ಗಳನ್ನು ಎರಡು ಪಟ್ಟು ಹೆಚ್ಚಿಸುವುದು
3. ಕಿಸಾನ್ ನ್ಯಾಯ
- ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು
- ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ
- ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು
- ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು
- ಕೃಷಿ ಸಲಕರಣೆಗಳಿಗೆ ಜಿಎಸ್ಟಿಯಿಂದ ಮುಕ್ತಿ
4. ಶ್ರಮಿಕ ನ್ಯಾಯ
- ನರೇಗಾ ದಿನಗೂಲಿ ಕಾರ್ಮಕರ ದಿನಗೂಲಿ 400 ರೂ.ಗೆ ಏರಿಕೆ
- ಪ್ರತಿಯೊಬ್ಬರಿಗೂ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ
- ನರೇಗಾ ರೀತಿ ನಗರಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ
- ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ
- ಸರ್ಕಾರಿ ನೌಕರರಿಗೆ ರಕ್ಷಣೆ, ಪಾರದರ್ಶಕತೆಗೆ ಆದ್ಯತೆ
ಇದನ್ನೂ ಓದಿ: BJP Manifesto: ಪ್ರಣಾಳಿಕೆ ತಯಾರಿಸಲು ಸಮಿತಿ ರಚಿಸಿದ ಬಿಜೆಪಿ; ಯಾರೆಲ್ಲ ಇದ್ದಾರೆ?
5. ಸಮಾನತೆಯ ನ್ಯಾಯ
- ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ದೇಶಾದ್ಯಂತ ಜಾತಿ ಗಣತಿ
- ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯ ಶೇ.50ರ ಮತಿ ತೆಗೆದುಹಾಕಲಾಗುವುದು
- ಎಸ್ಸಿ, ಎಸ್ಟಿಯವರಿಗೆ ವಿಶೇಷ ಬಜೆಟ್ ಮಂಡನೆ
- ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಜ್ಯಗಳನ್ನು 1 ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು
- ಎಸ್ಟಿ ಸಮುದಾಯದವರು ಜಾಸ್ತಿ ಇರುವ ಕಡೆ ಪಂಚಾಯತ್ ಎಕ್ಸ್ಟೆನ್ಶನ್ ಟು ಶೆಡ್ಯೂಲ್ಡ್ ಏರಿಯಾಸ್ ಆಕ್ಟ್ (PESA) ವಿಸ್ತರಣೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ