1. ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಜಾತಿಗಣತಿ, ಮಹಿಳೆಯರಿಗೆ ಒಬಿಸಿ ಮೀಸಲು
2024ರಲ್ಲಿ ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೆ ಬಂದರೆ, ಮಹಿಳಾ ಮೀಸಲಾತಿಯನ್ನು (Women reservation bill) ಇತರ ಹಿಂದುಳಿದ ವರ್ಗಕ್ಕೂ (OBC women) ವಿಸ್ತರಿಸಲಾಗುವುದು, ದೇಶಾದ್ಯಂತ ಜಾತಿಯಾಧರಿತ ಜನಗಣತಿಯನ್ನು (nationwide caste-based Census) ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಖರ್ಗೆ ಅವರು, ನಾವು 2024 ರಲ್ಲಿ ಅಧಿಕಾರಕ್ಕೆ ಬಂದಾಗ ಒಬಿಸಿ ಮಹಿಳೆಯರಿಗೆ ಮೀಸಲಾತಿಯನ್ನು ವಿಸ್ತರಿಸುವುದು ಸೇರಿದಂತೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ನಾವು ಸಂಕಲ್ಪ ಮಾಡುತ್ತೇವೆ. ಪರಿಣಾಮಕಾರಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳಿಗೆ ನಿರ್ಣಾಯಕವಾದ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿಯನ್ನು ಸಹ ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಾತಿಗಣತಿಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪಕ್ಷವು ಸೂಚಿಸಿದೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
2. ರಾಜ್ಯದ ಜಾತಿಗಣತಿ ವರದಿ ಬಿಡುಗಡೆಗೆ ರಾಹುಲ್ ಸೂಚನೆ, ಸಿದ್ದರಾಮಯ್ಯ ಒಪ್ಪಿಗೆ
ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಜಾತಿ ಗಣತಿ (Caste Census) ನಡೆಸಬೇಕು, ಈಗಾಗಲೇ ನಡೆಸಿದ್ದರೆ ಬಿಹಾರ ಮಾದರಿಯಲ್ಲಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ (CWC Meeting) ನಿರ್ಧರಿಸಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ಗಾಜಾ ಪಟ್ಟಿ ಸೀಜ್; ಆಹಾರ, ಇಂಧನ ಪೂರೈಕೆ ಕಟ್ ಮಾಡಿದ ಇಸ್ರೇಲ್! ಮೃತರ ಸಂಖ್ಯೆ 1300ಕ್ಕೆ ಏರಿಕೆ
ನವದೆಹಲಿ: ಹಮಾಸ್ ಬಂಡುಕೋರರು (Hamas Terrorists) ಮತ್ತು ಇಸ್ರೇಲ್ (Israel) ನಡುವಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ(1300 people Dead). ಅಲ್ಲದೇ, ಆಹಾರ ಮತ್ತು ಇಂಧನ ಪೂರೈಕೆ ನಿಷೇಧಿಸುವುದು ಸೇರಿದಂತೆ ಗಾಜಾದ ಮೇಲೆ “ಸಂಪೂರ್ಣ ದಿಗ್ಬಂಧನ” (Complete Siege On Gaza) ವಿಧಿಸುವುದಾಗಿ ಇಸ್ರೇಲ್ ಸೋಮವಾರ ಹೇಳಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದ್ದು, ಸಂಪೂರ್ಣ ಕತ್ತಲೆ ಆವರಿಸಿದೆ. ಈ ಮಧ್ಯೆ, ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವಿನ ಯುದ್ಧವು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘರ್ಷದಲ್ಲಿ ಅಮೆರಿಕದ 9 ಪ್ರಜೆಗಳು ಮೃತಪಟ್ಟಿದ್ದಾರೆ (American Citizens) ಎಂದ ಅಮೆರಿಕ ಖಚಿತಪಡಿಸಿದೆ. ಅ.7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಏಕಕಾಲದಲ್ಲಿ 5000 ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಈಗ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾಗಿದ್ದಾರೆ(Israel Palestine War). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಗಳನ್ನೂ ಓದಿ: Israel Palestine War: ಗಾಜಾಪಟ್ಟಿ ನಿರ್ನಾಮವೇ ಇಸ್ರೇಲ್ ಗುರಿ; ಬಾಂಬಿಟ್ಟು ಮಸೀದಿ ಉಡೀಸ್!
Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!
Israel Palestine War : ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಸಾವಿರಾರು ಕರಾವಳಿಗರು, ಹೇಗಿದೆ ಪರಿಸ್ಥಿತಿ?
4. 5 ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆ; ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Election 2023) ಚುನಾವಣೆ ಆಯೋಗವು ದಿನಾಂಕ ಘೋಷಿಸಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಹಾಗೂ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ ಆಯೋಗವು ಸುದ್ದಿಗೋಷ್ಠಿ ಮೂಲಕ ದಿನಾಂಕ ಘೋಷಿಸಿದೆ. ಡಿಸೆಂಬರ್ 3ರಂದು ಐದೂ ರಾಜ್ಯಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಛತ್ತೀಸ್‌ಗಢದಲ್ಲಿ ಮಾತ್ರ ಎರಡು ಹಂತಗಳಲ್ಲಿ ಮತದಾನ ನಡೆದರೆ, ಉಳಿದ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢದಲ್ಲಿ ಆಪ್ ಸ್ಪರ್ಧೆ! ಇಂಡಿಯಾ ಕೂಟದಲ್ಲಿ ಬಿರುಕು!
5. ಹಿಂದೂ ವಿರೋಧಿ ಹೇಳಿಕೆ; ಪಾಕ್ನ ಸುಂದರಿ ಆ್ಯಂಕರ್ಳನ್ನು ಒದ್ದೋಡಿಸಿದ ಭಾರತ
ಬೆಂಗಳೂರು: ಪಾಕಿಸ್ತಾನದ ಟಿವಿ ನಿರೂಪಕಿ ಝೈನಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಪರಿಣಾಮವಾಗಿ ಅವರು ನಡೆಯುತ್ತಿರುವ ಐಸಿಸಿ ವಿಶ್ವಕಪ್ (ICC World Cup 2023) ಅನ್ನು ಕವರ್ ಮಾಡಲು ಸಾಧ್ಯವಾಗುವುದಿಲ್ಲ. ಅವರು ಈ ಹಿಂದೆ ಮಾಡಿದ್ದ ಭಾರತದ ವಿರುದ್ಧ ಮತ್ತು ಹಿಂದೂ ವಿರೋಧಿ ಹೇಳಿಕೆಗಳು ಮನ್ನೆಲೆಗೆ ಬಂದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಟಿವಿ ಸುಂದರಿಯನ್ನು ಭಾರತದಿಂದ ಗಡೀಪಾರು ಮಾಡಲಾಗಿದ್ದು, ಪ್ರಸ್ತುತ ದುಬೈನಲ್ಲಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ದಸರಾದಲ್ಲಿ ಉರ್ದು ಕವಿಗೋಷ್ಠಿ; ಟಿಪ್ಪು ಸಂಸ್ಕೃತಿ ವೈಭವೀಕರಣ ಎಂದ ಸುನಿಲ್ ಕುಮಾರ್
ಬೆಂಗಳೂರು: ಅಕ್ಟೋಬರ್ 15ರಿಂದ 24ರವರೆಗೆ ನಡೆಯಲಿರುವ ಮೈಸೂರು ದಸರಾ (Mysore Dasara) ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ (Urdu Kavigoshti) ಆಯೋಜಿಸಿರುವುದು ಆಕ್ಷೇಪಕ್ಕೆ ಒಳಗಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮಾಜಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar) ಅವರು ಸರ್ಕಾರದ ನಡೆಯನ್ನು ಖಂಡಿಸಿದ್ದು, ಇದು ಟಿಪ್ಪು ಸಂಸ್ಕೃತಿಯ ವೈಭವೀಕರಣದ ಪ್ರಯತ್ನ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7 . ತಮಿಳುನಾಡು ಕುತಂತ್ರ; ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ಸ್ಟಾಲಿನ್ ನಿರ್ಣಯ!
ಚೆನ್ನೈ: ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ರಾಜ್ಯ ಸರ್ಕಾರವು ತಮಿಳುನಾಡಿಗೆ ಹೇರಳವಾಗಿ ಕಾವೇರಿ ನದಿ ನೀರು (Cauvery Dispute) ಹರಿಸಿದೆ. ಸಾಕಷ್ಟು ನೀರು ಪಡೆದಿದ್ದರೂ ತಮಿಳುನಾಡು ಸರ್ಕಾರವು ಮತ್ತೊಂದು ಕುತಂತ್ರದ ನಡೆ ಅನುಸರಿಸಿದೆ. ಕಾವೇರಿ ನದಿ ನೀರು ಹರಿಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ (Central Government) ನಿರ್ದೇಶನ ನೀಡಬೇಕು ಎಂಬುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಮುಖ್ಯಮಂತ್ರಿಯ ನಿಲುವಳಿಗೆ ಸರ್ವಪಕ್ಷಗಳೂ ಬೆಂಬಲ ಸೂಚಿಸಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಪಾಕ್ ವಿರುದ್ಧ ಕೇಸರಿ ಜೆರ್ಸಿಯಲ್ಲಿ ಆಡಲ್ಲ; ಬಿಸಿಸಿಐ ಸ್ಪಷ್ಟನೆ
ಮುಂಬಯಿ: ಪಾಕಿಸ್ತಾನ(IND vs PAK) ವಿರುದ್ಧ ಅಕ್ಟೋಬರ್ 14ರಂದು ನಡೆಯುವ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಕೇಸರಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯನ್ನು ಬಿಸಿಸಿಐ(BCCI) ತಳ್ಳಿಹಾಕಿದೆ. ಈ ರೀತಿಯ ಯಾವುದೇ ಯೋಜನೆಯನ್ನು ನಾವು ರೂಪಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಅಮೆರಿಕದ ಕ್ಲೌಡಿಯಾ ಗೋಲ್ಡಿನ್‌ಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ
ಸ್ಟಾಕ್‌ಹೋಮ್: ಅಮೆರಿಕದ ಅರ್ಥಶಾಸ್ತ್ರ (American Economist) ಇತಿಹಾಸಗಾರ್ತಿ ಮತ್ತು ಕಾರ್ಮಿಕ ಆರ್ಥಿಕ ತಜ್ಞೆ ಕ್ಲೌಡಿಯಾ ಗೋಲ್ಡಿನ್(Claudia Goldin) ಅವರಿಗೆ 2023ರ ಸಾಲಿನ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು (Nobel Economics Prize 2023) ಘೋಷಣೆ ಮಾಡಲಾಗಿದೆ. ಮಹಿಳಾ ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸಿದ್ದಕ್ಕಾಗಿ ಗೋಲ್ಡಿನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವಿಡೀಶ್ ಅಕಾಡೆಮಿ (Swedish Academy) ಹೇಳಿದೆ(Nobel Prize 2023). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲ ಎಂದ ಪ್ರದೀಪ್ ಈಶ್ವರ್; ಡೈಲಾಗ್‌ಬಾಜಿ ಶುರು!
ಬೆಂಗಳೂರು: ಸಾಕಷ್ಟು ಕುತೂಹಲಗಳೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್ 10(BBK Season 10) ಅ.8ರಿಂದ ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್ ಈ ಬಾರಿ ಎದುರಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹ್ಯಾಪಿ ಬಿಗ್ ಬಾಸ್ ಕೂಡ. ಮೊದಲ ದಿನವೇ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಸಖತ್ ಥ್ರಿಲ್ ಆಗಿದ್ದಾರೆ. ʻನಾವೆಲ್ಲ ಕಾಂಪೀಟ್ ಮಾಡ್ತಾ ಇರೋದು ಒಬ್ಬ MLA ಜತೆʼ ಎಂದು ಸ್ಪರ್ಧಿಗಳು ಸಖತ್ ಖುಷ್ ಆಗಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರೋಮೊ ಔಟ್ ಆಗಿದ್ದು ʻʻಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲʼʼಎಂಬ ಮಸ್ತ್ ಡೈಲಾಗ್ ಹೊಡೆದಿದ್ದಾರೆ ಶಾಸಕ ಪ್ರದೀಪ್ ಈಶ್ವರ್. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.