Site icon Vistara News

Fact Check: ಜಿ20 ಸಭೆಗೂ ಮುನ್ನ ಮೋದಿಯ ಬೃಹತ್‌ ಕಟೌಟ್‌ ಫೋಟೊ ವೈರಲ್;‌ ಈ ಸುದ್ದಿ ನಿಜವೇ?

Narendra Modi Hording

Congress's dig over hoarding featuring Narendra Modi; Fact Check Says This Is Fake News

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಜಿ 20 ಶೃಂಗಸಭೆಗೆ ಒಂದು ದಿನ ಮಾತ್ರ ಬಾಕಿ ಇದೆ. ಜಾಗತಿಕ ಗಣ್ಯರು ದೆಹಲಿಗೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್‌ ಫೋಟೊ ಇರುವ ಹೋರ್ಡಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ತೀವ್ರ ವಾಕ್ಸಮರ ಶುರುವಾಗಿದೆ. ಹಾಗಾದರೆ, ಜಿ 20 ಸಭೆಗಾಗಿಯೇ ಹೋರ್ಡಿಂಗ್‌ ಅಳವಡಿಸಲಾಗಿದೆಯೇ? ಕಾಂಗ್ರೆಸ್‌ ಆರೋಪ ಏನು? ಆ ಫೋಟೊ ಯಾವಾಗಿನದು ಎಂಬುದರ ಫ್ಯಾಕ್ಟ್‌ ಚೆಕ್‌ (Fact Check) ಇಲ್ಲಿದೆ.

ಕಾಂಗ್ರೆಸ್‌ ಆರೋಪವೇನು?

ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಅವರು ನರೇಂದ್ರ ಮೋದಿ ಹೋರ್ಡಿಂಗ್‌ನ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. “ಜಗತ್ತಿನಲ್ಲೇ ಜನಪ್ರಿಯ ನಾಯಕ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು” ಎಂದು ಬರೆದಿರುವ ಫೋಟೊವನ್ನು ಶೇರ್‌ ಮಾಡಿದ್ದರು. ವಿಜಯ್‌ ಗೋಯಲ್‌ ಅವರು ಅಭಿನಂದನೆ ಸಲ್ಲಿಸಿರುವ ಫೋಟೊ ಶೇರ್‌ ಮಾಡುವ ಜತೆಗೆ ಟೀಕೆ ವ್ಯಕ್ತಪಡಿಸಿದ್ದರು.

ಪವನ್‌ ಖೇರಾ ಹಂಚಿಕೊಂಡಿದ್ದ ಫೋಟೊ

“ಇದು ಅತಿಥಿಗಳನ್ನು ಸ್ವಾಗತಿಸುವ ಪರಿಯೇ” ಎಂದು ಬಿಜೆಪಿ ನಾಯಕ ವಿಜಯ್‌ ಗೋಯಲ್‌ ಅವರಿಗೆ ಪವನ್‌ ಖೇರಾ ಚಾಟಿ ಬೀಸಿದ್ದರು. ಆದರೆ, ಇದಕ್ಕೆ ತಿರುಗೇಟು ನೀಡಿದ ವಿಜಯ್‌ ಗೋಯಲ್‌, “ಇದು ನಕಲಿ ಸುದ್ದಿ. ಅಂತಹ ಯಾವುದೇ ಹೋರ್ಡಿಂಗ್‌ ಹಾಕಿಲ್ಲ. ಭಾರತವು ಜಿ 20 ಸಭೆಯನ್ನು ಆಯೋಜಿಸುತ್ತಿರುವ ಮಹತ್ವದ ಸಂಗತಿಯಲ್ಲಾದರೂ ಕಾಂಗ್ರೆಸ್‌ ರಾಜಕೀಯ ಬಿಡಬೇಕು” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: G20 Summit 2023: ಸಂಚಾರ ನಿರ್ಬಂಧ, ಯುದ್ಧವಿಮಾನ ನಿಯೋಜನೆ; ಜಿ 20 ಸಭೆಗೆ ದೆಹಲಿ ಸನ್ನದ್ಧ

ವಾಸ್ತವಾಂಶ ಏನು?

ಪವನ್‌ ಖೇರಾ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ಹಂಚಿಕೊಂಡಿರುವ ಫೋಟೊ ಕುರಿತು ಫ್ಯಾಕ್ಟ್‌ಚೆಕ್‌ ಘಟಕ ಪಿಐಬಿ ಪರಿಶೀಲನೆ ನಡೆಸಿದಾಗ ಇದು ನಕಲಿ ಸುದ್ದಿ ಎಂಬುದು ಬಯಲಾಗಿದೆ. ಮಾರ್ನಿಂಗ್‌ ಕನ್ಸಲ್ಟ್‌ ಎಂಬ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಮೋದಿ ಜಗತ್ತಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಬಳಿಕ ಅಳವಡಿಸಿದ ಹೋರ್ಡಿಂಗ್‌ ಅದಾಗಿದೆ. ಜಿ 20 ಸಭೆ ಹಿನ್ನೆಲೆಯಲ್ಲಿ ಅಳವಡಿಸಿದ ಫೋಟೊ ಅದಲ್ಲ ಎಂಬುದಾಗಿ ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ.

ಇದಾದ ಬಳಿಕ ಪವನ್‌ ಖೇರಾ ಅವರು ಟ್ವೀಟ್‌ ಡಿಲೀಡ್‌ ಮಾಡಿದ್ದಾರೆ. ಪವನ್‌ ಖೇರಾ ಅವರು ಫೋಟೊ ಹಂಚಿಕೊಳ್ಳುತ್ತಲೇ ಬಿಜೆಪಿಯ ಹಲವು ನಾಯಕರು ಕೂಡ ಇದು ಸುಳ್ಳು ಸುದ್ದಿ ಎಂದು ತಿರುಗೇಟು ನೀಡಿದ್ದರು.

Exit mobile version