ಕಟಕ್, ಒಡಿಶಾ: ವಿವಾಹದ ಭರವಸೆಯ (marriage promise) ಮೇಲೆ ಪರಸ್ಪರ ಒಪ್ಪಿತ ದೈಹಿಕ ಸಂಬಂಧ (Consensual Sex) ಏರ್ಪಟ್ಟು, ಬಳಿಕ ಕೆಲವು ಕಾರಣಗಳಿಂದ ಭರವಸೆ ಈಡೇರಿದೆ ಹೋದರೆ, ಅಂಥ ಲೈಂಗಿಕ ಸಂಬಂಧವನ್ನು ‘ಅತ್ಯಾಚಾರ’ (Rape) ಎಂದು ಪರಿಗಣಿಸಲಾಗುವುದಿಲ್ಲ ಎಂದು ಒರಿಸ್ಸಾ ಹೈಕೋರ್ಟ್ (Orissa High Court) ಹೇಳಿದೆ. ಭುವನೇಶ್ವರ ಮೂಲದ ವ್ಯಕ್ತಿಯೊಬ್ಬರ ವಿರುದ್ಧದ ಅತ್ಯಾಚಾರದ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆದರೆ, ಭುವನೇಶ್ವರ ವ್ಯಕ್ತಿಯ ವಿರುದ್ಧ ಅರ್ಜಿದಾರರು ಹೊರಿಸಿರುವ ಮೋಸದ ಆರೋಪವು ತನಿಖೆಗೆ ಮುಕ್ತವಾಗಿದೆ ಎಂದು ಒರಿಸ್ಸಾ ಹೈಕೋರ್ಟ್ ಜಸ್ಟೀಸ್ ಆರ್ ಕೆ ಪಟ್ಟನಾಯಿಕ್ ಅವರು ಹೇಳಿದ್ದಾರೆ.
ಸದುದ್ದೇಶದಿಂದ ಮಾಡಿದ ಭರವಸೆಯ ಉಲ್ಲಂಘನೆ ಹಾಗೂ ಅದನ್ನೂ ಪೂರೈಸಲಾಗದಿರುವುದು ಮತ್ತು ಮದುವೆಯ ಸುಳ್ಳು ಭರವಸೆಯ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಒಂದೊಮ್ಮೆ ಸದುದ್ದೇಶದಿಂದ ಮಾಡಿದ ಭರವಸೆಯ ವೇಳೆಯ ಯಾವುದೇ ಲೈಂಗಿಕ ಸಂಬಂಧವನ್ನು ಸೆಕ್ಷನ್ 376 ಐಪಿಸಿ ಅಡಿಯಲ್ಲಿ ಅಪರಾಧ ಎನ್ನಲಾಗುವುದಿಲ್ಲ. ಆದರೆ ಆ ನಂತರದ ವಿಷಯದಲ್ಲಿ ಅದು ಮದುವೆಯ ಭರವಸೆ ಸುಳ್ಳು ಅಥವಾ ನಕಲಿ ಎಂಬುದನ್ನು ಆಧರಿಸಿದೆ ಎಂದು ಜುಲೈ 3ರಂದು ನೀಡಿದ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: High court observation : 5 ವರ್ಷ ಸಹಮತದ ಸಂಬಂಧ ಇಟ್ಕೊಂಡು ನಂತ್ರ ರೇಪ್ ಅಂದ್ರೆ ಆಗುತ್ತಾ?; ಹೈಕೋರ್ಟ್ ಪ್ರಶ್ನೆ
ಸಂತ್ರಸ್ತ ಮಹಿಳೆಗೆ ವಿವಾಹದ ಆಶ್ವಾಸನೆ ಮೇರೆಗೆ ಪರಸ್ಪರ ಇಬ್ಬರು ದೈಹಿಕ ಸಂಬಂಧವನ್ನು ಹೊಂದಿದ್ದು, ಕೆಲವು ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬರದಿದ್ದರೆ, ಭರವಸೆಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳುವ ಮೂಲಕ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ಈ ಪ್ರಕರಣ ತೀರ್ಪಿನಲ್ಲಿ ಗಮನಿಸಲಾಗಿದೆ ಎಂದು ಪೀಠ ಹೇಳಿದೆ.