Site icon Vistara News

Supreme Court: ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ಶಾಶ್ವತವಾಗಿ ಚುನಾವಣೆ ಸ್ಪರ್ಧೆಗೆ ಅನರ್ಹ ಆಗ್ಬೇಕು!

8 votes cast in Chandigarh mayoral election were Valid Says Supreme Court

ನವದೆಹಲಿ: ನೈತಿಕ ಭ್ರಷ್ಟತೆಯನ್ನೂ (moral turpitude) ಒಳಗೊಂಡಿರುವ ಇತರ ಅಪರಾಧಗಳಿಗೆ ಶಿಕ್ಷೆಗೊಳಗಾದ ಚುನಾಯಿತ ಪ್ರತಿನಿಧಿಗಳನ್ನು (Elected representative) ಪ್ರಸ್ತುತ ಆರು ವರ್ಷಗಳಲ್ಲದೇ ಜೀವಿತಾವಧಿಗಾಗಿ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಬೇಕು (disqualified from contesting election) ಎಂದು ಹಿರಿಯ ವಕೀಲ ವಿಜಯ್ ಹಂಸಾರಿಯಾ ಅವರು ತಮ್ಮ ವರದಿಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಸಂಸದರು, ಶಾಸಕರ ವಿರುದ್ದ ಕ್ರಿಮಿನಲ್ ಕೇಸ್‌ಗಳಿಗೆ ಸಂಬಂಧಿಸಿದಂತೆ ಅವರು ಸುಪ್ರೀಂ ಕೋರ್ಟ್‌ಗೆ ಅಮಿಕಸ್ ಕ್ಯೂರಿಯಾಗಿದ್ದಾರೆ(amicus curiae of Supreme Court).

ಸಂಸದರು ಮತ್ತು ಶಾಸಕರು ಜನರ ಸಾರ್ವಭೌಮ ಇಚ್ಛೆಯನ್ನು ಪ್ರತಿನಿಧಿಸುತ್ತಾರೆ. ಅಂಥವರು ಒಂದೊಮ್ಮೆ ನೈತಿಕ ಭ್ರಷ್ಟತೆಯನ್ನು ಒಳಗೊಂಡ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾದರೆ ಅವರನ್ನು ಶಾಶ್ವತವಾಗಿ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಅಮಿಕಸ್ ಕ್ಯೂರಿಯಾಗಿರುವ ವಿಜಯ್ ಹಂಸಾರಿಯಾ ಹೇಳಿದ್ದು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ಮುಂದೆ ಈ ವರದಿ ಬರಲಿದೆ.

ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾದ ಉದ್ಯೋಗಿಗಳನ್ನು ವಜಾಗೊಳಿಸಲು ಒದಗಿಸುವ ನಾಗರಿಕ ಸೇವಕರಿಗೆ ಸಂಬಂಧಿಸಿದ ನಿಯಮಗಳನ್ನು ಮತ್ತು ಅಂತಹ ಅಪರಾಧಗಳಿಗೆ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಯನ್ನು ಸ್ಪಷ್ಟವಾಗಿ ಅನರ್ಹಗೊಳಿಸುವ ಕೇಂದ್ರೀಯ ಜಾಗೃತ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಗಳಂತಹ ಶಾಸನಬದ್ಧ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನುಗಳು ಇರುವ ಬಗ್ಗೆ ಹಂಸಾರಿಯಾ ಅವರು ಜನಪ್ರತಿನಿಧಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದಾರೆ.

ಒಂದೊಮ್ಮೆ ಅಪರಾಧಗಳಿಗಾಗಿ ಶಿಕ್ಷೆಗೊಳಗಾಗಿರುವ ವ್ಯಕ್ತಿಗಳು ಶಾಶ್ವತ ಅನರ್ಹತೆಯನ್ನು ಅನುಭವಿಸದೇ ಹೋದರೆ ಅವರು ಮತ್ತೆ ನಿರ್ದಿಷ್ಟ ಸಮಯದ ಬಳಿಕೆ ಸಾಂವಿಧಾನಿಕ ಉನ್ನತ ಸಂಸ್ಥೆಗಳನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅಂಥ ಕಾನೂನಿನಲ್ಲಿ ಕಚೇರಿಯನ್ನು ಹೊಂದಿರುವ ವ್ಯಕ್ತಿಗಿಂತಲೂ(ಅಧಿಕಾರಿಗಳು) ಜನಪ್ರತಿನಿಧಿಗಳು ಹೆಚ್ಚು ಪವಿತ್ರ ಹಾಗೂ ನಿಯಮಗಳನ್ನು ಕಾಪಾಡುವಂತವರಾಗಿರಬೇಕು ಎಂದು ತಮ್ಮ ವರದಿಯಲ್ಲಿ ಹಂಸಾರಿಯಾ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court: ಬೆರಳ ತುದಿಯಲ್ಲಿ ಕೇಸ್‌ ಮಾಹಿತಿ; ಜುಡಿಷಿಯಲ್‌ ಡೇಟಾ ಗ್ರಿಡ್‌ ವ್ಯಾಪ್ತಿಗೆ ಸುಪ್ರೀಂ, ಏನಿದು?

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಶಾಸನಬದ್ಧ ಹುದ್ದೆಯಿಂದ ಅನರ್ಹಗೊಳಿಸಲು ಕಾನೂನು ರಚಿಸುವ ಯಾವುದೇ ಸಂಬಂಧವಿಲ್ಲ. ಆದರೆ ಕಾನೂನು ಮಾಡುವ ವ್ಯಕ್ತಿಯು ಸೀಮಿತ ಅವಧಿಗೆ ಮಾತ್ರ ಅನರ್ಹತೆಗೆ ಒಳಗಾಗುತ್ತಾನೆ. ಇದೇ ವೇಳೆ, ಅದೇ ಕಾನೂನಿನ ಪರಿಣಾಮ ಮತ್ತೊಬ್ಬ(ಅಧಿಕಾರಿಗಳು) ಅನರ್ಹತೆಯನ್ನು ಅನುಭವಿಸಬೇಕಾಗುತ್ತೆದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದಿಲ್ಲಿಯ ಭಾರತೀಯ ಜನತಾ ಪಕ್ಷದ ನಾಯಕಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಹಂಸಾರಿಯಾ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಅವರಿಗೆ ಸುಪ್ರೀಂ ಕೋರ್ಟ್‌ಗೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version