ಕಾಕಿನಾಡ(ಆಂಧ್ರಪ್ರದೇಶ): ಹೊರಗೆ ಕಾಲಿಟ್ಟರೆ ಕೊರೊನಾ ಸೋಂಕು (coronavirus) ತಗಲುತ್ತದೆ ಎಂದು ಹೆದರಿ, ಎರಡು ವರ್ಷಗಳಿಂದ ಮನೆಯಲ್ಲೇ ತಮ್ಮಷ್ಟಕ್ಕೇ ತಾವೇ ಬಂದಿಯಾಗಿದ್ದ ತಾಯಿ-ಮಗಳನ್ನು ಆಂಧ್ರಪ್ರದೇಶದಲ್ಲಿ (Andhra Pradesh) ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. 46 ವರ್ಷದ ತಾಯಿ ಹಾಗೂ 21 ವರ್ಷದ ಮಗಳು ಮನೆಯಿಂದ ಆಚೆ ಕಾಲಿಡುತ್ತಿರಲಿಲ್ಲ, ತಮ್ಮನ್ನು ಭೇಟಿಯಾಗಲು ಯಾರಿಗೂ ಅವಕಾಶವನ್ನೂ ನೀಡುತ್ತಿರಲಿಲ್ಲ. ಇದರಿಂದಾಗಿ ಅವರ ಆರೋಗ್ಯ ಹಾಳಾಗುತ್ತಿತ್ತು. ಅಂತಿಮವಾಗಿ ಅಧಿಕಾರಿಗಳು ಅವರನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಕಿನಾಡ ಜಿಲ್ಲೆಯ ಸಣ್ಣ ಹಳ್ಳಿಯ ಮನೆಯೊಂದರಲ್ಲಿ ಬಂದಿಯಾಗಿದ್ದ ತಾಯಿ-ಮಗಳಿಬ್ಬರು ಮಾನಸಿಕವಾಗಿಯೂ ಕೊಂಚ ಅಸ್ಥಿರಗೊಂಡಿದ್ದರು ಎನ್ನಲಾಗಿದೆ. ಇದರ ಮಧ್ಯೆ, ಕೊರೊನಾ ಸೊಂಕಿನಿಂದ ತಪ್ಪಿಸಿಕೊಳ್ಳಲು ಅವರಿಬ್ಬರು ಮನೆಯಲ್ಲೇ ಬಂದಿಯಾಗಿದ್ದರು. ಆದರೆ, ದಿನದಿಂದ ದಿನಕ್ಕೆ ಆರೋಗ್ಯ ಹಾಳಾಗುತ್ತಿತ್ತು. ಇದನ್ನು ಮನಗಂಡ ತಾಯಿಯ ಸಂಗಾತಿಯು ಪೊಲೀಸರು ಹಾಗೂ ಆಸ್ಪತ್ರೆಗೆ ಮಾಹಿತಿ ನೀಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆಸ್ಪತ್ರೆಯ ಅಧಿಕಾರಿಗಳಿಗೆ, ತಾಯಿ-ಮಗಳಿಬ್ಬರೂ ಮನೆಯೊಳಗೆ ಪ್ರವೇಶಿಸಲು ನೀಡಲು ನಿರಾಕರಿಸಿದರು. ನಾಲ್ಕಾರು ತಾಸು ಅವರೊಂದಿಗೆ ಮಾತುಕತೆ ನಡೆಸಿ, ಆರೋಗ್ಯ ಹಾಳಾಗುತ್ತಿರುವ ಬಗ್ಗೆ ತಿಳಿಸಿ ಹೇಳಿದ ಬಳಿಕ ಮನೆಯೊಳಗೆ ಅಧಿಕಾರಿಗಳಿಗೆ ಪ್ರವೇಶಿಸಲು ಸಹಕರಿಸಿದರು. ಬಳಿಕ ಅಧಿಕಾರಿಗಳು ಮಗಳು-ತಾಯಿಯನ್ನು ಸರ್ಕಾರಿ ಆಸ್ಪತ್ರೆ ಕರೆದುಕೊಂಡು, ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಹಾಗೆಯೇ ಅವರಿಗೆ ಆಪ್ತ ಸಮಾಲೋಚನೆ ಕೂಡ ನೀಡಲಾಗುತ್ತಿದೆ.
ಇದನ್ನೂ ಓದಿ | Coronavirus | ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆ ವಿತರಣೆ ಇಂದಿನಿಂದ ಆರಂಭ