Site icon Vistara News

G20 Summit 2023: ಕೆಲವೇ ಕ್ಷಣಗಳಲ್ಲಿ ಜಿ20 ಶೃಂಗಸಭೆಗೆ ಚಾಲನೆ; ಇಂದು ಏನೆಲ್ಲ ನಡೆಯಲಿದೆ?

G20 Summit 2023

ನವದೆಹಲಿ: ಜಗತ್ತಿನ ಗಮನ ಸೆಳೆದಿರುವ ಜಿ20 ಶೃಂಗಸಭೆಗೆ (G20 Summit 2023) ಕೆಲವೇ ಕ್ಷಣಗಳಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಯುವ ಭಾರತ ಮಂಟಪಕ್ಕೆ ಆಗಮಿಸಿದ್ದು, ಜಾಗತಿಕ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಹಾಗಾದರೆ, ಶನಿವಾರ (ಸೆಪ್ಟೆಂಬರ್‌ 9) ಏನೆಲ್ಲ ನಡೆಯಲಿದೆ? ಯಾವ ಸಭೆಗಳು ನಡೆಯಲಿವೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ಬೆಳಗ್ಗೆ 9.30 – 10.30: ಭಾರತ ಮಂಟಪದಲ್ಲಿ ವಿವಿಧ ಮುಖ್ಯಸ್ಥರ ಆಗಮನ – ಹಂತ-2 ರ “ಟ್ರೀ ಆಫ್ ಲೈಫ್ ಫೋಯರ್” ನಲ್ಲಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಪ್ರಧಾನ ಮಂತ್ರಿಯವರ ಫೋಟೋ ಸೆಷನ್ – ಲೆವೆಲ್-2 ನಾಯಕರ ಲಾಂಜ್‌ನಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಸಭೆ

ಭಾರತ ಮಂಟಪಕ್ಕೆ ಆಗಮಿಸಿದ ಮೋದಿ

ಬೆಳಗ್ಗೆ 10.30 – 1.30: ಮೊದಲ ಅಧಿವೇಶನ: ಭಾರತ ಮಂಟಪದ ಲೆವೆಲ್-2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಭೂಮಿ” ವಿಷಯದ ಕುರಿತು ಸಭೆ – ನಂತರ ಊಟದ ವಿರಾಮ

ಮಧ್ಯಾಹ್ನ ಗಂಟೆ. 1.30 – 3: ಭಾರತ ಮಂಟಪದ ಹಂತ-ಒಂದರಲ್ಲಿ ದ್ವಿಪಕ್ಷೀಯ ಚರ್ಚೆಗಳು

3-4.45 ಮಧ್ಯಾಹ್ನ: ಎರಡನೇ ಸೆಷನ್: ಹಂತ – 2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಕುಟುಂಬ” ಕುರಿತು ಚರ್ಚೆ

ನಂತರ ಹೋಟೆಲ್‌ಗೆ ವಾಸ್ತವ್ಯಕ್ಕೆ ವಾಪಸ್ ಆಗಲಿರುವ ಅತಿಥಿಗಳು

-ರಾತ್ರಿ 7.00-8.00: ರಾಷ್ಟ್ರಪತಿ ಆಹ್ವಾನ ನೀಡಿರುವ ಔತಣಕೂಟಕ್ಕೆ ಮುಖ್ಯಸ್ಥರ ಆಗಮನ – ಫೋಟೋ ಸೆಷನ್

-ರಾತ್ರಿ 8.00-9.15 : ಭೋಜನ ಹಾಗೂ ಚರ್ಚೆ

-ರಾತ್ರಿ 9.10-9.45 : ಭಾರತ್ ಮಂಡಪಂ ಹಂತ – 2ಲಾಂಜ್ ನಲ್ಲಿ ನಾಯಕರು ಮತ್ತು ಪ್ರತಿನಿಧಿಗಳ ಸಭೆ

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆ ಶನಿವಾರದ ಇಡೀ ದಿನದ ಕಾರ್ಯಕ್ರಮ ಪಟ್ಟಿ ಇಲ್ಲಿದೆ…

Exit mobile version