ನವದೆಹಲಿ: ಭಾರತದಲ್ಲಿ ಕೋವಿಡ್-19 (Covid-19) ಸಾಂಕ್ರಾಮಿಕ ಪರಿಸ್ಥಿತಿ ಅಂತ್ಯವಾಗುತ್ತ ಬಂತಾ? ಹೌದು, 2020 ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ಕನಿಷ್ಠ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ! ಜನವರಿ 17, ಸೋಮವಾರ ಒಟ್ಟು 89 ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ಜತೆಗೆ, ಸಕ್ರಿಯ ಪ್ರಕರಣಗಳು 2,035ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಒಟ್ಟು ಈವರೆಗೆ 4.46 ಕೋಟಿ ಕೋವಿಡ್ ಪ್ರಕರಣಗಳಾಗಿವೆ. ಸಾವಿನ ಸಂಖ್ಯೆ 5,30,726. ಕಳೆದ 24 ಗಂಟೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕೇವಲ 84. ಹಾಗಾಗಿ, ಬಹುಶಃ ಭಾರತದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವ ಸಾಧ್ಯತೆಗಳಿವೆ. ಇಷ್ಟಾಗಿಯೂ, ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೋವಿಡ್ ಇನ್ನೂ ಭಯಾನಕ ಸ್ಥಿತಿಯಲ್ಲೇ ಇದೆ. ಹಾಗಾಗಿ, ಎಚ್ಚರಿಕೆ ಅಗತ್ಯ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,48,472 ಕ್ಕೆ ಏರಿದೆ. ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಮಾರ್ಚ್ 2020ರ ಬಳಿಕ ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಸೋಮವಾರ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಜತೆಗೆ, ಸಕ್ರಿಯ ಪ್ರಕಣಗಳು ಸಂಖ್ಯೆ ಕೇವಲ 10. ಯಾವುದೇ ಕೋವಿಡ್ ಸಂಬಂಧಿ ಸಾವು ಸಂಭವಿಸಿಲ್ಲ.
ಇದನ್ನೂ ಓದಿ | Covid updates | ಕೋವಿಡ್ ಪರಿಸ್ಥಿತಿ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವಂತೆ ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯ