ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳಲ್ಲಿ (Covid 19 Updates) ಹೆಚ್ಚಾಗುತ್ತಿವೆ. ಪರಿಣಾಮ ಜನರೂ ತೀವ್ರ ಆತಂಕಿತರಾಗಿದ್ದಾರೆ. ಆದರೆ, ತಜ್ಞರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಕರಣಗಳು ಹೆಚ್ಚುತ್ತಿದ್ದರೂ ತೊಂದರೆ ಇಲ್ಲ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಳವಾಗುತ್ತಿಲ್ಲ. ಹಾಗಾಗಿ, ಕೋವಿಡ್ ಹೊಸ ಅಲೆ ಅಲ್ಲ ಎಂದು ಹಿರಿಯ ತಜ್ಞರೊಬ್ಬರು ಹೇಳಿದ್ದಾರೆ.
ಈಗ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು, ವೈರಸ್‌ನ ಓಮಿಕ್ರಾನ್ ರೂಪಾಂತರದಿಂದ ಉಂಟಾಗುವ ಮೂರನೇ ತರಂಗದ ಭಾಗವಾಗಿದೆ. ಕೇಂದ್ರ ಸರ್ಕಾರವು ಕೇಂದ್ರವು ಪರಿಸ್ಥಿತಿಯ ಮೇಲೆ ನಿಗಾ ಇಡಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ದಾಖಲಾದ ಸೋಂಕುಗಳು ಪ್ರಕರಣಗಳು ಸೌಮ್ಯವಾಗಿವೆ. ರೋಗಿಗಳು ನಾಲ್ಕರಿಂದ ಐದು ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ. ಗಂಭೀರವಾದ ಅನಾರೋಗ್ಯದ ಸಾಧ್ಯತೆಗಳು ಕಡಿಮೆ ಎಂದು ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಭಾರತದ ಕೋವಿಡ್ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ ಎನ್ ಕೆ ಅರೋರಾ ಅವರು ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಈಗ ಗಮನಿಸಬೇಕಾದ ಸಂಗತಿ ಏನೆಂದರೆ, ಕೋವಿಡ್ ಸೋಂಕು ಹೆಚ್ಚುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕಡಿಮೆ. ಸಾವಿನ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ವೈರಸ್‌ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ ಗಂಭೀರ ಕಾಯಿಲೆಗೆ ಕಾರಣವಾಗುತ್ತಿಲ್ಲ ಎಂದು ಅವರು ವಿಶ್ಲೇಷಣೆ ಮಾಡಿದರು.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಮತ್ತು ಸಾಯುತ್ತಿರುವವರ ಪೈಕಿ ಹೆಚ್ಚಿನವ ವಯ್ಸಸಾದವರಾಗಿದ್ದಾರೆ. ಇಲ್ಲವೇ ಸಂಕೀರ್ಣ ಕಾಯಿಲೆಗಳ ಇತಿಹಾಸವನ್ನು ಹೊಂದಿದವರಾಗಿದ್ದಾರೆ. ಕೋವಿಡ್‌ನಿಂದಾಗಿಯೇ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿರುವುದು ಕಂಡು ಬರುತ್ತಿಲ್ಲ. ಸೋಂಕು ಪ್ರಮಾಣ ಹೆಚ್ಚಾಗಿದೆ ಮತ್ತು ಇದು ಸ್ವಲ್ಪ ಕಾಲ ಹಾಗೆಯೇ ಇರಲಿದೆ. ಅಂಥ ತೊಂದರೆ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Yellow Fever: ಕೋವಿಡ್ ಬೆನ್ನಲ್ಲೇ ಶುರುವಾಯ್ತು ಹಳದಿ ಜ್ವರದ ವೈರಸ್ ಭೀತಿ, ವಿದೇಶ ಪ್ರವಾಸಿಗಳಿಗೆ ಲಸಿಕೆ ಕಡ್ಡಾಯ
ಒಮಿಕ್ರಾನ್ ಮತ್ತು ಎಕ್ಸ್‌ಬಿಬಿ.1.16 ಉಪ-ತಳಿಯಂದಾಗಿ ಪ್ರಕರಣಗಳು ಹೆಚ್ಚಿವೆ. ಈ ಉಪ ತಳಿಯೇ ಮತ್ತೆ ಅನೇಕ ಉಪ ತಳಿಗಳನ್ನು ಹೊಂದಿದೆ. ಕಳೆದ 15 ತಿಂಗಳಲ್ಲಿ ಸುಮಾರು 450 ವೆರಿಯಂಟ್‌ಗಳು ಕಂಡು ಬಂದಿವೆ ಎಂದು ಡಾ. ಅರೋರಾ ಅವರು ಹೇಳಿದರು.