ನವ ದೆಹಲಿ: ಕೋವಿಡ್ ಲಸಿಕೆ (COVID-19 vaccine) ನೀಡಿಕೆಯಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ. ಭಾನುವಾರ ಇದುವರೆಗೆ ನೀಡಿದ ಡೋಸ್‌ನ ಸಂಖ್ಯೆ ೨೦೦ ಕೋಟಿ ದಾಟಿದೆ. ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ಆರಂಭಿಸಿ 18 ತಿಂಗಳು ಪೂರೈಸುವುದರೊಳಗೆ ೨೦೦ ಕೋಟಿ ಡೋಸ್ ನೀಡಿರುವುದು ದಾಖಲೆಯಾಗಿದೆ.
2021ರ ಜನವರಿ 16ರಂದು ಕೋವಿಡ್ ಲಸಿಕಾ ಅಭಿಯಾನ ಆರಂಭಿಸಲಾಗಿತ್ತು. ಈವರೆಗೆ ನೀಡಲಾದ ಒಟ್ಟು 200
ಕೋಟಿ ಡೋಸ್‌ನಲ್ಲಿ ಮೊದಲ ಡೋಸ್ ಪಡೆದವರ ಸಂಖ್ಯೆ 1,01,90,81,339 ಆಗಿದ್ದರೆ, ಎರಡನೇ ಡೋಸ್ ಪಡೆದವರ ಸಂಖ್ಯೆ 92,59,56,597 ಆಗಿದೆ.
52,63,253 ಡೋಸ್‌ಗಳನ್ನು ಕೋವಿನ್ ವೆಬ್‌ಸೈಟ್‌ನಲ್ಲಿ ನೋಂದಾಯಿಸದೇ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಭಾನುವಾರ ಮಧ್ಯಾಹ್ನ ೨ ಗಂಟೆಯ ವೇಳೆಗೆ ದೇಶದಲ್ಲಿ ನೀಡಲಾದ ಕೋವಿಡ್ ಲಸಿಕೆಯ ಡೋಸ್‌ಗಳ ಸಂಖ್ಯೆ 2,00,01,86,582 ಆಗಿದೆ. ಕೋವಿಡ್ ವೆಬ್‌ಸೈಟ್‌ನಲ್ಲಿ ಈ ಲೆಕ್ಕಾಚಾರವಿದೆ. ವೆಬ್‌ಸೈಟ್: https://dashboard.cowin.gov.in
ಸರ್ಕಾರದ ಮಾಹಿತಿ ಪ್ರಕಾರ ದೇಶದ ಶೇ. ೯೮ ರಷ್ಟು ವಯಸ್ಕರರು ಕನಿಷ್ಠವೆಂದರೂ ಒಂಡು ಡೋಸ್ ಪಡೆದಿದ್ದಾರೆ. ಶೇ.೯೦ರಷ್ಟು ಜನರು ಎರಡು ಡೋಸ್ ಪಡೆದಾಗಿದೆ. ಕಳೆದ ಜನವರಿಯಿಂದ ೧೫ರಿಂದ ೧೮ ವರ್ಷದವರಿಗೆ ಡೋಸ್ ನೀಡಲಾಗುತ್ತಿದ್ದು, ಈಗಾಗಲೇ ಶೇ. ೮೨ ಯುವಜನರು ಡೋಸ್ ಪಡೆದಿದ್ದಾರೆ.
ಆಂಧ್ರಪದೇಶ, ಅಂಡಮಾನ್ ನಿಕೋಬರ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಚಂಡೀಗಢ, ತೆಲಂಗಾಣ ಮತ್ತು ಗೋವಾ ಲಸಿಕೆ ನೀಡಿಕೆಯಲ್ಲಿ ಅಗ್ರಸ್ಥಾನ ಪಡೆದಿವೆ. ಲಸಿಕೆ ಪಡೆಯಲು ಅರ್ಹರಾಗಿರುವ ೧೨ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ.
ಇದನ್ನೂ ಓದಿ| ಕೋವಿಡ್ ಲಸಿಕೆಯ 75 ದಿನಗಳ ಉಚಿತ ಬೂಸ್ಟರ್ ಡೋಸ್ ಅಭಿಯಾನ ಇಂದಿನಿಂದ ಆರಂಭ