ಹೊಸ ಬೈಕ್ ಖರೀದಿಸಿದ ಬಳಿಕ, ಅದಕ್ಕೆ ಪೂಜೆ ಮಾಡುವ ಸಲುವಾಗಿ ಪವಿತ್ರ ಗಂಗಾಜಲ ತರಲು, ಗಂಗಾನದಿಗೆ ಹೋಗಿದ್ದ 14ವರ್ಷದ ಬಾಲಕನನ್ನು ಮೊಸಳೆ ನುಂಗಿದೆ. ಆ ಹುಡುಗನನ್ನು ನುಂಗಿದ ಮೊಸಳೆಯನ್ನು, ಸ್ಥಳೀಯರೆಲ್ಲ ಸೇರಿ ಬಡಿಗೆಯಲ್ಲಿ ಹೊಡೆದು, ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ. ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ್ ದಿಯಾರಾ ಹಳ್ಳಿಯವನಾಗಿದ್ದ ಈ ಹುಡುಗನ ಹೆಸರು ಅಂಕಿತ್ ಕುಮಾರ್. 5ನೇ ತರಗತಿ ವಿದ್ಯಾರ್ಥಿ. ಇವನ ಮನೆಯಲ್ಲಿ ಮಂಗಳವಾರ ಹೊಸ ಬೈಕ್ ಖರೀದಿ ಮಾಡಿದ್ದರು. ಹೀಗಾಗಿ ಮನೆಯವರೆಲ್ಲ ಸೇರಿ ಗಂಗಾನದಿಯಲ್ಲಿ ಸ್ನಾನ ಮಾಡಿ, ಸ್ವಲ್ಪ ಗಂಗಾಜಲವನ್ನು ತೆಗೆದುಕೊಂಡು ಹೋಗಿ ಹೊಸ ಬೈಕ್ಗೆ ಪೂಜೆ ಮಾಡಲು ನಿರ್ಧರಿಸಿದ್ದರು. ಅದರಂತೆ ಅಂಕಿತ್ ಮತ್ತು ಅವನ ಅಪ್ಪ-ಅಮ್ಮ, ಅಜ್ಜ ಮತ್ತು ಕುಟುಂಬದ ಇತರ ಸದಸ್ಯರು ಬಂದು ನದಿಯಲ್ಲಿ ಸ್ನಾನ ಮಾಡುತ್ತಿದ್ದರು.
ಹೀಗೆ ಅಂಕಿತ್ ತನ್ನ ಕುಟುಂಬದವರ ಜತೆ ಗಂಗಾಸ್ನಾನ ಮಾಡುತ್ತಿದ್ದಾಗಲೇ ಅವನ ಮೇಲೆ ಮೊಸಳೆ ದಾಳಿ ಮಾಡಿದೆ. ಅವನನ್ನು ಎಳೆದುಕೊಂಡು ನೀರಿನೊಳಗೆ ಹೋಗಿ, ಜೀವಂತವಾಗಿ ನುಂಗಿದೆ. ಇದನ್ನು ನೋಡಿದ ಅಂಕಿತ್ ಕುಮಾರ್ ಪಾಲಕರು, ಸ್ಥಳದಲ್ಲಿ ಇದ್ದ ಇತರರು ದೊಡ್ಡದಾಗಿ ಕೂಗಿಕೊಂಡಿದ್ದಾರೆ. ಸುತ್ತಮುತ್ತಲೂ ಇರುವ ಜನರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಮೃತ ಬಾಲಕನ ಕುಟುಂಬದವರು, ಜಾಗದಲ್ಲಿ ಸೇರಿದ್ದ ಇತರರೆಲ್ಲ ಸೇರಿ ಆ ಮೊಸಳೆಯನ್ನು ಹುಡುಕಿ ನೀರಿನಿಂದ ಹೊರಗೆ ಎಳೆದಿದ್ದಾರೆ. ಅಷ್ಟೇ ಅಲ್ಲ, ಬಡಿಗೆ, ಕಬ್ಬಿಣದ ರಾಡ್ಗಳಿಂದ ಬಡಿದು ಕೊಂದಿದ್ದಾರೆ.
ಸರೀಸೃಪ ಸಾಯುವವರೆಗೂ ಒಬ್ಬರಾದ ಮೇಲೊಬ್ಬರಂತೆ ಹೊಡೆದಿದ್ದಾರೆ. ಕೊನೆಗೂ ಆ ಮೊಸಳೆ ನೋವು ತಾಳಲಾರದೆ ಮೃತಪಟ್ಟಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಮೊಮ್ಮಗನ ಸಾವಿನ ನೋವಿನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಂಕಿತ್ ಅಜ್ಜ ‘ಮೊಸಳೆ ಅಂಕಿತ್ನನ್ನು ಹಿಡಿದು ಎಳೆದು ತಿಂದಿತ್ತು. ಆದರೆ ಬಳಿಕ ಅವನ ಮೃತದೇಹ ಭಯಾನಕ ಸ್ಥಿತಿಯಲ್ಲಿ ಸಿಕ್ಕಿದೆ. ಆದರೆ ಮೊಸಳೆಯನ್ನು ಹತ್ಯೆಗೈಯ್ಯಲಾಗಿದೆ’ ಎಂದು ತಿಳಿಸಿದ್ದಾರೆ.
While bathing in the Ganga in Vaishali, crocodile attacked, child died, villagers caught crocodile Gokulpur incident of Bidupur police station #Bihar pic.twitter.com/1iCiqlXxF1
— Siraj Noorani (@sirajnoorani) June 13, 2023