Site icon Vistara News

Sabarimala: ₹310 ಕೋಟಿ ಆದಾಯ ಇದ್ದರೂ ಶಬರಿಮಲೆಯಲ್ಲಿ ಅವ್ಯವಸ್ಥೆ! ಶುಚಿತ್ವಕ್ಕೆ ಹೈಕೋರ್ಟ್‌ ಆದೇಶ

sabari mala

ತಿರುವನಂತಪುರಂ: ಕೇರಳದ ಅತ್ಯಧಿಕ ಆದಾಯದ ದೇವಸ್ಥಾನಗಳಲ್ಲಿ ಒಂದಾದ ಶಬರಿಮಲೆಯಲ್ಲಿ (Sabarimala Ayyappa Temple) ಶುಚಿತ್ವವಿಲ್ಲ ಎಂಬುದನ್ನು ಹೈಕೋರ್ಟ್‌ ಗಮನಿಸಿದ್ದು, ಶುಚಿತ್ವವನ್ನು ಕಾಪಾಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಪ್ರಕರಣ ಸಂಬಂಧ ಮಂಗಳವಾರ ರಾಜ್ಯದ ಎಡಿಜಿಪಿ ವಿಚಾರಣೆ ಎದುರಿಸಿದರು.

ಇತ್ತೀಚೆಗೆ ಕರ್ನಾಟಕದಿಂದ ತೆರಳಿದ್ದ ಹಲವು ಅಯ್ಯಪ್ಪ ಭಕ್ತರು ಕೂಡ ಶಬರಿಮಲೆಯಲ್ಲಿ ಉಂಟಾದ ಅವ್ಯವಸ್ಥೆ, ಗೊಂದಲದ ಬಗ್ಗೆ ದೂರಿಕೊಂಡಿದ್ದರು. ಕಳೆದ ವರ್ಷ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 310 ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದಿತ್ತು. ಕರ್ನಾಟಕದಿಂದ ಅತ್ಯಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಅಯ್ಯಪ್ಪ ವ್ರತಧಾರಿ ಕನ್ನಿಸ್ವಾಮಿಗಳು ತೆರಳುತ್ತಾರೆ. ಆದರೆ ಇಲ್ಲಿನ ಪೊಲೀಸರು ಹಾಗೂ ಅರ್ಚಕರು ಮತ್ತಿತರ ಸಿಬ್ಬಂದಿ ಕರ್ನಾಟಕದವರನ್ನು ಅನಾದರದಿಂದ ಕಾಣುತ್ತಾರೆ ಎಂದು ದೂರಿದ್ದಾರೆ.

ಇಬ್ಬರು ವಕೀಲರು ಸಲ್ಲಿಸಿರುವ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದ ಇಬ್ಬರು ವಕೀಲರು ಈ ವೇಳೆ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಅದರ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ದೇವಾಲಯದಲ್ಲಿ ಒದಗಿಸಲಾಗಿಲ್ಲ. ಜೊತೆಗೆ ಇಲ್ಲಿನ ವಿಶ್ರಾಂತಿ ಗೃಹಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಅಲ್ಲದೇ ಇಲ್ಲಿನ ದೇವರ ದರ್ಶನಕ್ಕೆ ಹೋಗುವ ಸರತಿ ಸಾಲು ಪದ್ಧತಿ ಸರಿಯಿಲ್ಲ ಎಂದು ಹೇಳಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹೇಳಿದೆ. ಅಲ್ಲದೆ ಸರತಿ ಸಾಲಿನಲ್ಲಿ ಉಂಟಾಗುವ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸುವಂತೆ ಸೂಚಿಸಿದೆ. ಒಂದು ವೇಳೆ ಶಬರಿಮಲೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಉಂಟಾದರೆ, ಭಕ್ತಾದಿಗಳಿಗೆ ಬೇಕಾದ ಸೂಕ್ತ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಹೈಕೋರ್ಟ್ ಹೇಳಿದೆ.

ಪ್ರಕರಣವನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ. ಶಬರಿಮಲೆ ಭೇಟಿ ವೇಳೆ ಅಯ್ಯಪ್ಪ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ನಡೆಸಲು ವಕೀಲರ ತಂಡವನ್ನು ನೇಮಿಸಲು ಚಿಂತನೆ ನಡೆಸಿದೆ. ಕಳೆದ ವರ್ಷ ಶಬರಿಮಲೆಯಲ್ಲಿ ಈ ರೀತಿ ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿರಲಿಲ್ಲ. ಇದೀಗ ಸುಮಾರು 5000ದಿಂದ 10000 ಜನರು ಯಾವುದೇ ಬುಕಿಂಗ್ ಇಲ್ಲದೆ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿತು. ಇದಕ್ಕೆ ಪ್ರ ತಿಕ್ರಿಯಿಸಿದ ಪೊಲೀಸರು, ಸನ್ನಿಧಾನಕ್ಕೆ ಬರುವ ಎಲ್ಲ ಅಕ್ರಮ ರಸ್ತೆಗಳನ್ನು ಮುಚ್ಚಲಾಗಿದೆ. ಅಲ್ಲದೆ ಭಕ್ತರಿಗಾಗಿ ದರ್ಶನದ ಸಮಯವನ್ನು 1 ಗಂಟೆ ಹೆಚ್ಚಳ ಮಾಡಲಾಗಿದೆ. ಸದ್ಯ ಶಬರಿಮಲೆಯಲ್ಲಿ ನೂಕುನುಗ್ಗಲಿನ ಪರಿಸ್ಥಿತಿ ಇಲ್ಲ ಎಂದು ವಿವರಿದ್ದಾರೆ.

ಶಬರಿಮಲೆ ಭದ್ರತಾ ಉಸ್ತುವಾರಿಯಾಗಿರುವ ಎಡಿಜಿಪಿ ಮಂಗಳವಾರ ಖುದ್ದಾಗಿ ಪ್ರ ಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ಶಬರಿಮಲೆಯಲ್ಲಿ ಉಂಟಾಗುತ್ತಿರುವ ನೂಕುನುಗ್ಗಲು ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ: Shabarimale Bus : ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Exit mobile version