ನವದೆಹಲಿ: ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸೈಬರ್ ಕ್ರೈಂ ತಡೆಗೆ ಎಷ್ಟೇ ನಿಯಮ ರೂಪಿಸಿದರೂ, ನಿಗಾ ಇರಿಸಿದರೂ ಹ್ಯಾಕಿಂಗ್ ಮಾತ್ರ ನಿಲ್ಲುತ್ತಿಲ್ಲ. ಹಾಗಾಗಿ, ಇಂದು ಯಾರ ವೈಯಕ್ತಿಕ ಮಾಹಿತಿಯೂ ಸುರಕ್ಷಿತವಲ್ಲ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಗೂಗಲ್ ಕ್ರೋಮ್ (Google Chrome) ವೆಬ್ ಬ್ರೌಸರ್‌ನ 250 ಕೋಟಿಗೂ ಅಧಿಕ ಜನರ ಮಾಹಿತಿ ಕಳ್ಳತನವಾಗಿದೆ (Google Chrome Data Breach) ಎಂದು ತಿಳಿದುಬಂದಿದೆ.
“ಗೂಗಲ್ ಕ್ರೋಮ್ ಹಾಗೂ ಕ್ರೋಮಿಯಮ್ ಬ್ರೌಸರ್‌ಗಳ 250 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿಯು ಅಪಾಯದಲ್ಲಿದೆ. ಬಳಕೆದಾರರ ಸೂಕ್ಷ್ಮ ಮಾಹಿತಿ, ದಾಖಲೆ, ಕ್ರಿಪ್ಟೋ ವ್ಯಾಲೆಟ್‌ಗಳು ಹಾಗೂ ಕ್ಲೌಡ್ ಪ್ರೊವೈಡರ್ ಕ್ರೆಡೆನ್ಶಿಯಲ್‌ಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ” ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ‘ಇಂಪರ್ವಾ ರೆಡ್’ (Imperva Red) ಮಾಹಿತಿ ನೀಡಿದೆ. ಇದು ಗೂಗಲ್ ಕ್ರೋಮ್ ಇತಿಹಾಸದಲ್ಲೇ ಬೃಹತ್ ಡೇಟಾ ಸೋರಿಕೆ ಪ್ರಕರಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೊಬೈಲ್, ಕಂಪ್ಯೂಟರ್ ಸುರಕ್ಷತೆ ಹೇಗೆ?
ಹ್ಯಾಕರ್‌ಗಳು ಸಿಮ್‌ಲಿಂಕ್ (SymLink Or Symbolic Link) ಮೂಲಕ ಬಳಕೆದಾರರ ಮಾಹಿತಿಯನ್ನು ಕದ್ದಿದ್ದಾರೆ ಎಂದು ಕಂಪನಿ ತಿಳಿಸಿದೆ. ಕ್ರೋಮಿಯಮ್ ವರ್ಷನ್ 107 ಹಾಗೂ ಕ್ರೋಮ್ ವರ್ಷನ್ 108ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದು, ಇವುಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುವ ಮೂಲಕ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಇಂಪರ್ವಾ ರೆಡ್ ಸಲಹೆ ನೀಡಿದೆ.
ಇದನ್ನೂ ಓದಿ | Android Security Leak | ಆ್ಯಂಡ್ರಾಯ್ಡ್ ಮೊಬೈಲ್‌ಗಳ ಮಾಹಿತಿ ಸೋರಿಕೆ, ಈ ಕಂಪನಿ ಮೊಬೈಲ್ ಬಳಕೆದಾರರೇ ಹುಷಾರ್!