ಮುಂಬೈ: ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ(Rashmika Mandanna), ಕತ್ರಿನಾ ಕೈಫ್ (Katrian Kaif) ಮತ್ತು ಕಾಜೋಲ್ (Kajo) ಅವರ ಡೀಪ್‌ಫೇಕ್ ವಿಡಿಯೋಗಳು (Deepfake Video) ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಹೊತ್ತಿನಲ್ಲೇ, ಮತ್ತೊಬ್ಬ ನಟಿ ಆಲಿಯಾ ಭಟ್ (Alia Bhatt) ಅವರ ಡೀಫ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಆಲಿಯಾ ಭಟ್ ಅವರ ಮುಖವನ್ನು ಇನ್ನೊಬ್ಬ ಮಹಿಳೆಯ ಮುಖಕ್ಕೆ ಎಡಿಟ್ ಮಾಡಲಾಗಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್ ವಿಡಿಯೋ ಭಾರೀ ಗದ್ದಲ್ಲಕ್ಕೆ ಕಾರಣವಾಗಿತ್ತು. ಈ ವಿಡಿಯೋ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಈ ಡೀಪ್ಫೇಕ್ ವಿಡಿಯೋಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು, ಭಾರತದಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ಸೋಷಿಯಲ್ ಮೀಡಿಯಾ ಕಂಪನಿಗಳ ಜತೆ ಮಾತುಕತೆ ನಡೆಸಿ, ಡೀಪ್‌ಫೇಕ್ ವಿಡಿಯೋ ಪ್ರಸರಣಕ್ಕೆ ಈ ಕಂಪನಿಗಳನ್ನೇ ಜವಾಬ್ದಾರರನ್ನಾಗಿಸಿದೆ(Viral Video).
ಡೀಪ್‌ಫೇಕ್ ವಿಡಿಯೋದ ಹೊಸ ಶಿಕಾರಿಯಾಗಿರುವ ಆಲಿಯಾ ಭಟ್ ಅವರ ಮುಖವನ್ನು, ಕ್ಯಾಮೆರಾದ ಮುಂದೆ ಒಂದಿಷ್ಟು ಅಶ್ಲೀಲ ಸನ್ನೆಗಳನ್ನು ಮಾಡುತ್ತಿರುವ ಬೇರೆ ಹೆಂಗಸಿನ ಮುಖಕ್ಕೆ ಡೀಪ್‌ಫೇಕ್ ಮಾಡಲಾಗಿದೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಡೀಪ್‌ಫೇಕ್ ವಿಡಿಯೋ ಬಗ್ಗೆ ನಟಿ ಆಲಿಯಾ ಭಟ್ ಅವರನ್ನು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಅವರು, ಭಾನುವಾರ ನಡೆದ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ 2023ರ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಆಲಿಯಾ ಭಟ್ ಅವರ ಡೀಪ್‌ಫೇಕ್ ವಿಡಿಯೋ ಟ್ವೀಟ್
This #deepfake video of Alia Bhatt has gone viral in which #AliaBhatt seems to be a victim. These sites should be banned because it will defame anyone. So I request the government to ban such sites. And strictest action should be taken against whoever posted such edited video. pic.twitter.com/TynmlJEU6P
— Kavya 🥀💌 (@Kavvyia) November 27, 2023
ಡೀಪ್‌ಫೇಕ್ ವಿಡಿಯೋ ತಡೆಯುವುದು ಸೋಷಿಯಲ್ ಮೀಡಿಯಾಗಳ ಜವಾಬ್ದಾರಿ
ನಟಿ ರಶ್ಮಿಕಾ ಮಂದಣ್ಣ (rashmika mandanna) ಅವರು ಡೀಪ್‌ಫೇಕ್ ವಿಡಿಯೋ (Deepfake Video) ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಡೀಪ್‍ಫೇಕ್ ಕುರಿತು ಸಾಕಷ್ಟು ಚರ್ಚೆಗಳು ಶುರವಾಗಿವೆ. ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆಯ ಬಗ್ಗೆ ಆತಂಕಗಳ ವ್ಯಕ್ತವಾಗಿವೆ. ಈ ಡೀಪ್ಫೇಕ್ ವಿಡಿಯೋಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು (Central Government) ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳು (Social Media) ಕಂಪನಿಗಳ ಜತೆ ಸಭೆ ನಡೆಸಿದೆ. ನವೆಂಬರ್ 24ರಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆಗೆ ಕೇಂದ್ರ ಸರ್ಕಾರವು ಸಭೆ ನಡೆಸಿದೆ. ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳನ್ನು ಬಳಸಿಕೊಂಡು ಡೀಪ್‌ಫೇಕ್ ಮತ್ತು ಮತ್ತು ಅಂಥ ನಕಲಿ ವಿಡಿಯೋಗಳ ಪ್ರಸರಣ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಲಾಗುವುದು ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.
ಇಂಟರ್ನೆಟ್ ಸುರಕ್ಷತೆ ಮತ್ತು ಡೀಪ್‌ಫೇಕ್ ವಿಡಿಯೋ ಪ್ರಸರಣವನ್ನು ತಡೆಯುವುದು ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯಾಗಿದೆ. ಹಾಗಾಗಿ, ಭಾರತೀಯ ಕಾನೂನಿಗೆ ಅನುಗುಣವಾಗಿ ವೇದಿಕೆಗಳು ತಮ್ಮ ಕಂಟೆಂಟ್ ಅನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.
ನವೆಂಬರ್ 24ರಂದು ನಾವು ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆ ಸಭೆ ನಡೆಸಿದ್ದೇವೆ. ಇಂಟರ್ನೆಟ್ ಸುರಕ್ಷತೆಯನ್ನು ಕೈಗೊಳ್ಳುವುದು ಮತ್ತು ಡೀಪ್‌ಫೇಕ್ ವಿಡಿಯೋಗಳ ಪ್ರಸರಣವನ್ನು ತಡೆಯುವುು ವೇದಿಕೆಗಳ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ತಿಳಿಸಿದ್ದೇವೆ. ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ಈ ಹೊಣೆಗಾರಿಕೆ ಆಯಾ ವೇದಿಕೆಗಳದ್ದೇ ಆಗಿರುತ್ತದೆ. ಒಂದೊಮ್ಮೆ, ಡೀಪ್‌ಫೇಕ್ ವಿಡಿಯೋಗಳನ್ನು ಕಿತ್ತುಹಾಕಲು ವಿಫಲರಾದರೆ, ಅಂಥ ವೇದಿಕೆಗಳ ವಿರುದ್ಧ ವಿಚಾರಣೆ ಮತ್ತು ಡೀಪ್‌ಫೇಕ್ ವಿಡಿಯೋ ರಿಮೂವ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ, ಆನ್‌ಲೈನ್ ವೇದಿಕೆಗಲ್ಲಿ ಡೀಪ್‌ಫೇಕ್ ವಿಡಿಯೋಗಳ ಕುರಿತು ತನಿಖೆ ನಡೆಸುವ ಬಗ್ಗೆ ವಿಶೇಷ ಅಧಿಕಾರಿಗೆ ಜವಾಬ್ದಾರಿಯನ್ನು ಸರ್ಕಾರ ವಹಿಸಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆನ್‌ಲೈನ್‌ನಲ್ಲಿ ಫೇಕ್ ಕಂಟೆಂಟ್ ಎಫ್ಐಆರ್ ದಾಖಲಿಸುವುದು ಸೇರಿದಂತೆ ಈ ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರಿಯು ನಾಗರಿಕರೆ ನೆರವು ಒದಗಿಸಲಿದ್ದಾರೆ ಎಂದು ಹೇಳಲಾಗಿತ್ತು.
ಈ ಸುದ್ದಿಯನ್ನೂ ಓದಿ: Rashmika Mandanna: ವೈರಲ್ ಆಯ್ತು ರಶ್ಮಿಕಾಳ ಮತ್ತೊಂದು ಡೀಪ್‌ಫೇಕ್ ವಿಡಿಯೋ!