ನವದೆಹಲಿ: ಜಿ20 ಶೃಂಗಸಭೆಯನ್ನು (G20 Summit 2023) ಯಶಸ್ವಿಯಾಗಿ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ವಿಷಯದಲ್ಲಿ ಬಾಲಿವುಡ್ ನಟ, ನಟಿಯರೂ ಹಿಂದೆ ಬಿದ್ದಿಲ್ಲ. ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಅವರು ಪ್ರಧಾನಿಯನ್ನು ಮೆಚ್ಚಿ ಟ್ವೀಟ್ ಮಾಡಿದ ಬೆನ್ನಲ್ಲೇ ಆಲಿಯಾ ಭಟ್ (Alia Bhatt) ಅವರು ಪ್ರಧಾನಿಯನ್ನು ಹೊಗಳಿದ್ದರು. ಅವರಾದ ಬಳಿಕ ದೀಪಿಕಾ ಪಡುಕೋಣೆ (Deepika Padukone) ಮತ್ತು ಅವರ ಗಂಡ, ನಟ ರಣವೀರ್ ಸಿಂಗ್ (Ranveer Singh) ಕೂಡ ಪ್ರಧಾನಿಯನ್ನು ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ದೆಹಲಿಯ ಜಿ 20 ಶೃಂಗಸಭೆಯ ಸ್ಥಳದಲ್ಲಿ ವಿವಿಧ ಧ್ವಜಗಳ ಫೋಟೋ ಜೊತೆಗೆ, ದೀಪಿಕಾ ಪಡುಕೋಣೆ ಅವರು, “ಗ್ರೌಂಡ್ ಬ್ರೇಕಿಂಗ್ ಜಿ 20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಅಭಿನಂದನೆಗಳು! ನಮ್ಮ ರಾಷ್ಟ್ರದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಗಮನಾರ್ಹ ಸಾಧನೆಯಾಗಿದೆ.” ಎಂದು ಹೇಳಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರ ಪೋಸ್ಟ್
ರಣವೀರ್ ಸಿಂಗ್ ಕೂಡ ಪ್ರಧಾನಿಯನ್ನು ಅಭಿನಂದಿಸುವಲ್ಲಿ ಹಿಂದಿ ಬಿದ್ದಿಲ್ಲ. “ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಿ20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ರಾಷ್ಟ್ರಗಳನ್ನು ಒಂದುಗೂಡಿಸುವುದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು! ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ” ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: G20 Summit 2023: ನಿಮ್ಮ ನಾಯಕತ್ವದಲ್ಲಿ ನಾವು ಏಳಿಗೆ ಹೊಂದುತ್ತೇವೆ! ಪ್ರಧಾನಿ ಮೋದಿಗೆ ಶಾರುಖ್ ಮೆಚ್ಚುಗೆ
ಆಲಿಯಾ ಭಟ್ ಅಭಿನಂದನೆ
ಭಾರತದ ಪಾಲಿಗೆ ಇದು ಐತಿಹಾಸಿಕ ಕ್ಷಣ. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ. ರಾಷ್ಟ್ರಗಳ ನಡುವೆ ಏಕತೆಯನ್ನು ಬೆಳೆಸುವ ಮತ್ತು ಉತ್ತಮ ಭವಿಷ್ಯಕ್ಕಾಗಿ ಮೈತ್ರಿಗಳನ್ನು ಸೇತುವೆ ಮಾಡುವ ಈ ಸ್ಮಾರಕ ಘಟನೆಗೆ ಸಾಕ್ಷಿಯಾಗಲು ಇಂತಹ ಹೆಮ್ಮೆಯ ಕ್ಷಣವಾಗಿದೆ ಎಂದು ನಟಿ ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ.
One Earth. One Family. One Future 🫶🏼
— Alia Bhatt (@aliaa08) September 11, 2023
A historic moment for India… Congratulations to Hon'ble PM @narendramodi ji for successfully hosting the G20 Summit. Such a proud moment to witness this monumental event that fosters unity between nations and bridges alliances for a better… https://t.co/WFcr0Ip9AV