Site icon Vistara News

Child Trafficking: 5 ಲಕ್ಷ ರೂ.ಗೆ ಒಂದು ಮಗು ಮಾರಾಟ; 10 ಮಕ್ಕಳನ್ನು ರಕ್ಷಿಸಿದ ಸಿಬಿಐ!

Child Trafficking

Delhi Child Trafficking Case: Amid CBI Raids, Painful Visuals of 2 Newborns Being Rescued

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳ ಮಾರಾಟ ಜಾಲವೊಂದನ್ನು (Child Trafficking) ಕೇಂದ್ರೀಯ ತನಿಖಾ ಸಂಸ್ಥೆ (CBI) ಅಧಿಕಾರಿಗಳು ಭೇದಿಸಿದ್ದು, ಎರಡು ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ. ಆಸ್ಪತ್ರೆಗಳಿಂದಲೇ ಮಕ್ಕಳನ್ನು ಮಾರಾಟ ಮಾಡುತ್ತಿರುವ ಪ್ರಕರಣದ ಕುರಿತು ನಿಖರ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕೇಶವಪುರಂನಲ್ಲಿರುವ (Keshavpuram) ಮನೆಯೊಂದರಲ್ಲಿ ಎರಡು ನವಜಾತ ಶಿಶುಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಏಳೆಂಟು ಜನರನ್ನು ಬಂಧಿಸಿದ್ದಾರೆ. ಆಸ್ಪತ್ರೆಯ ನರ್ಸ್‌ಗಳು, ಸ್ವಚ್ಛತಾ ಸಿಬ್ಬಂದಿ ಸೇರಿ ಏಳೆಂಟು ಜನರನ್ನು ಬಂಧಿಸಲಾಗಿದೆ. ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳನ್ನು ಕಳ್ಳತನ ಮಾಡಿಯೋ, ಪೋಷಕರಿಗೆ ಮಗು ತೀರಿಕೊಂಡಿತು ಎಂಬುದಾಗಿ ಸುಳ್ಳ ಹೇಳಿಯೋ ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಇದಾದ ಬಳಿಕ 4-5 ಲಕ್ಷ ರೂ.ಗೆ ಆ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಹಾಗಾಗಿ, ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ತಿಂಗಳಲ್ಲೇ 10 ಮಕ್ಕಳ ಮಾರಾಟ

ಕಳೆದ ಒಂದು ತಿಂಗಳಲ್ಲಿಯೇ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ 10 ಮಕ್ಕಳನ್ನು ಮಾರಾಟ ಮಾಡಲಾಗಿದೆ ಎಂಬುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಯಾವ ಆಸ್ಪತ್ರೆಯಿಂದ ಯಾವ ಮಕ್ಕಳನ್ನು ಕಳ್ಳತನ ಮಾಡಲಾಯಿತು, ಅವುಗಳನ್ನು ಯಾರಿಗೆ ಮಾಡಲಾಯಿತು ಎಂಬುದರ ಕುರಿತು ಸಿಬಿಐ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಬಹುತೇಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಕೂಡ ಮೂಲಗಳು ತಿಳಿಸಿವೆ.

10 ಮಕ್ಕಳ ಪೋಷಕರು ಯಾರು? ಅವುಗಳನ್ನು ಯಾವ ಉದ್ದೇಶಕ್ಕಾಗಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂಬುದು ಸೇರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು, ಶುಕ್ರವಾರ (ಏಪ್ರಿಲ್‌ 6) ರಾತ್ರಿ ಎರಡು ನವಜಾತ ಶಿಶುಗಳನ್ನು ಅಧಿಕಾರಿಗಳು ಟವೆಲ್‌ನಲ್ಲಿ ಸುತ್ತಿಕೊಂಡು ಬಂದ ವಿಡಿಯೊ ಮನಕಲಕುವಂತಿದೆ.

ಇದನ್ನೂ ಓದಿ: Illegal Madrasa: ನೋಂದಣಿಯಾಗದೆ ಮಕ್ಕಳ ಶಿಕ್ಷಣ ನೀಡುವ ಮದರಸ, ಚರ್ಚ್‌ಗಳಿಗೆ ಬೀಳುತ್ತೆ ಬೀಗ!

Exit mobile version