ಹೊಸದಿಲ್ಲಿ: ರಾಜಧಾನಿಯ ಹೊರಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ತಮ್ಮ ಪ್ರತಿಭಟನೆಗೆ (Delhi Farmers Protest) ತಾತ್ಕಾಲಿಕ ನಿಲುಗಡೆ ನೀಡಿದ್ದ ರೈತರು ಇಂದು ತಮ್ಮ ಪಾದಯಾತ್ರೆಯನ್ನು (Delhi Chalo) ಪುನರಾರಂಭಿಸಲಿದ್ದಾರೆ. ತಮ್ಮ ಪ್ರಮುಖ ಬೇಡಿಕೆಗಳ ಪಟ್ಟಿಯೊಂದಿಗೆ ರಾಜಧಾನಿಯನ್ನು ತಲುಪಲು (Framers March) ಅವರು ಮುಂದುವರಿದಿದ್ದು, ಭಾರಿ ಭದ್ರತಾ ನಿಯೋಜನೆಯನ್ನು ಸೋಲಿಸಲು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಪ್ರತಿಭಟನೆ ನಿರತ ರೈತರು ನಿನ್ನೆ ರಾತ್ರಿ ಕದನ ವಿರಾಮ ಘೋಷಿಸಿದ್ದು, ಇಂದು ಮತ್ತೆ ಪ್ರಯತ್ನಿಸುವುದಾಗಿ ಹೇಳಿದ್ದರು. ರೈತರು ಇಂದು ಮತ್ತೆ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಬಹುದು ಎಂಬ ಆತಂಕದಿಂದ ನಿಷೇಧಾಜ್ಞೆಗಳನ್ನು ಹಾಕಲಾಗಿದೆ. ಭಾರಿ ಭದ್ರತಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ರೈತರು ಪಂಜಾಬ್-ಹರಿಯಾಣ ಗಡಿಯನ್ನು ದಾಟುವುದನ್ನು ತಡೆಯಲು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ನಿನ್ನೆ ಬಳಸಲಾಗಿತ್ತು. 2020-21ರಲ್ಲಿ ನಡೆದ ರೈತರ ಪ್ರತಿಭಟನೆಯ 13 ತಿಂಗಳ ಕಾಲ ದೆಹಲಿಯ ಗಡಿಯನ್ನು ಉಸಿರುಗಟ್ಟಿಸಿತ್ತು.
ಇದೀಗ ದೀರ್ಘಾವಧಿ ಮುಷ್ಕರಕ್ಕೆ ತಯಾರಿ ನಡೆಸಿದ್ದೇವೆ ಮತ್ತು ದೆಹಲಿಗೆ ತಲುಪಲು ಸಾಕಷ್ಟು ಡೀಸೆಲ್ ಮತ್ತು ಆರು ತಿಂಗಳವರೆಗೆ ಪಡಿತರವನ್ನು ಹೊಂದಿದ್ದೇವೆ ಎಂದು ರೈತರು ಹೇಳಿದ್ದಾರೆ. ತಿಂಗಳುಗಟ್ಟಲೆಯಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹಿಂತಿರುಗುವುದಿಲ್ಲ ಎಂದು ರೈತರೊಬ್ಬರು ತಿಳಿಸಿದ್ದಾರೆ.
ಬೇಡಿಕೆಗಳ ಪಟ್ಟಿ ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಮ್‌ಎಸ್‌ಪಿ, ಕೃಷಿ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸಿನ ಅನುಷ್ಠಾನಕ್ಕೆ ಸಂಬಂಧಿಸಿದ ಮೂರು ಪ್ರಮುಖ ಬೇಡಿಕೆಗಳನ್ನು ಹೊರತುಪಡಿಸಿ ಅವರ ಹೆಚ್ಚಿನ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಬಿಕ್ಕಟ್ಟು ಪರಿಹರಿಸಲು ಹೆಚ್ಚಿನ ಮಾತುಕತೆಗೆ ಸರ್ಕಾರ ನಿನ್ನೆ ರೈತರನ್ನು ಕರೆದಿದೆ. ಆದರೆ ಅವರು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ರೈತರು ಹೊಸ ಬೇಡಿಕೆಗಳನ್ನು ಮುಂದಿಡುತ್ತಿರುವುದರಿಂದ ಮಾತುಕತೆಗೆ ಸಮಯ ಹಿಡಿಯುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಿಂಸಾಚಾರದಲ್ಲಿ ಪಾಲ್ಗೊಳ್ಳದಂತೆ ಅವರು ರೈತರನ್ನು ಒತ್ತಾಯಿಸಿದ್ದಾರೆ ಮತ್ತು ಇನ್ನೊಂದು ಸುತ್ತಿನ ಸಂವಾದಕ್ಕೆ ಆಹ್ವಾನಿಸಿದ್ದಾರೆ.
ಪೊಲೀಸರು ದೆಹಲಿಯ ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ಟೈರ್ ಡಿಫ್ಲೇಟರ್‌ಗಳು, ಬ್ಯಾರಕೇಡ್‌ಗಳನ್ನು ಬಳಸಿ ಬಂದ್ ಮಾಡಿದ್ದಾರೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಮೊದಲ ರಕ್ಷಣಾ ಸಾಲನ್ನು ನಿನ್ನೆ ರೈತರು ಮುರಿದಿದ್ದರು.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರ ಮತ್ತೆ ವಾಗ್ವಾದಕ್ಕಿಳಿದಿವೆ. ರೈತರು ನಗರವನ್ನು ಪ್ರವೇಶಿಸಲು ಯಶಸ್ವಿಯಾದರೆ ಅವರನ್ನು ನಿರ್ಬಂಧಿಸಲು ಕ್ರೀಡಾಂಗಣವನ್ನು ಬಂದೀಖಾನೆಯಾಗಿ ಪರಿವರ್ತಿಸುವ ಕೇಂದ್ರದ ಪ್ರಸ್ತಾವನೆಯನ್ನು ಅರವಿಂದ ಕೇಜ್ರಿವಾಲ್ ಸರ್ಕಾರ ತಿರಸ್ಕರಿಸಿದೆ.
ಇಡೀ ದೆಹಲಿಯಲ್ಲಿ ಒಂದು ತಿಂಗಳ ಕಾಲ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಗಡಿಯುದ್ದಕ್ಕೂ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಪ್ರತಿಭಟನಾಕಾರರು ನಗರಕ್ಕೆ ಪ್ರವೇಶಿಸಲು ಸಾಧ್ಯವಾಗದಂತೆ ಪೊಲೀಸರು ಎಲ್ಲಾ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.
ಹೀಗಾಗಿ ದೆಹಲಿಯನ್ನು ಅದರ ಸ್ಯಾಟಲೈಟ್ ಪಟ್ಟಣಗಳೊಂದಿಗೆ ಸಂಪರ್ಕಿಸುವ ಗಡಿಗಳಲ್ಲಿನ ಜಂಕ್ಷನ್‌ಗಳು ನಿನ್ನೆ ಟ್ರಾಫಿಕ್ ದುಃಸ್ವಪ್ನಕ್ಕೆ ಕಾರಣವಾಯಿತು. ಟ್ರಾಫಿಕ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಗಂಟೆಗಳಷ್ಟು ಕಾಲ ಸಿಲುಕಿ ಹಾಕಿಕೊಂಡರು.
ಇದನ್ನೂ ಓದಿ: Delhi Chalo Protest: ರೈತರ ಬಂಧನದ ಹಿಂದಿನ ಮಾಸ್ಟರ್ ಮೈಂಡ್ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ ಆರೋಪ