ನವದೆಹಲಿ: ಸಂವಿಧಾನ ನೀಡಿದ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಚಲಾಯಿಸಬೇಕಿದ್ದ ಭಾರತೀಯ ಆಡಳಿತ ಸೇವೆ(IAS officer)ಯ ಅಧಿಕಾರಿಯೊಬ್ಬರು ನಡೆದುಕೊಂಡ ರೀತಿಯು ಭಾರೀ ಚರ್ಚೆಗೆ ಕಾರಣವಾಗಿದೆ. ನೈಋತ್ಯ ದಿಲ್ಲಿಯ (South West Delhi) ಜಿಲ್ಲಾಧಿಕಾರಿ ಲಕ್ಷ್ಯ ಸಿಂಘಾಲ್ (District Magistrate Lakshya Singhal) ಅವರು, ಅರ್ಚಕರೊಬ್ಬರನ್ನು ತಮ್ಮ ಚೇಂಬರ್‌ಗೆ ಆಹ್ವಾನಿಸಿ, ತಾವು ಕುಳಿತುಕೊಳ್ಳುವ ಕುರ್ಚಿಯನ್ನು ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಬಳಿಕ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಸೆರೆ ಹಿಡಿಯಲಾದ ವಿಡಿಯೋ ಈಗ ಭಾರೀ ವೈರಲ್ ಆಗಿದೆ(viral Video).
ವೈರಲ್ ವಿಡಿಯೋದಲ್ಲಿರುವ ದೃಶ್ಯಗಳ ಪ್ರಕಾರ, ಸಿಂಘಾಲ್ ಅವರು ಅರ್ಚಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ ಮತ್ತು ವಿನಮ್ರದಿಂದ ಕೈಗಳನ್ನು ಮಡಚಿ ಶಾಲು ನೀಡುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಅಧಿಕೃತ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮನವಿ ಮಾಡುತ್ತಾರೆ, ಅಲ್ಲದೇ ಕೂಡಿಸುತ್ತಾರೆ. ಅಲ್ಲದೇ ಈ ವಿಡಿಯೋದಲ್ಲಿ ಓರ್ವ ಹೆಣ್ಣುಮಗಳು ಸೇರಿದಂತೆ ಕೆಲವರಿದ್ದಾರೆ. ಆದರೆ, ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
IAS Lakshay Singhal
— @Aspirant_upsc7 (@Aspirant_upsc7) October 22, 2023
DM south west Delhi pic.twitter.com/NXBGDozLcJ
ಈ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಜಿಲ್ಲಾಧಿಕಾರಿ ಸ್ಥಾನದ ಘನತೆಯನ್ನು ಹಾಳು ಮಾಡಿದ್ದಾರೆಂದು ಟೀಕಿಸಿದ್ದಾರೆ. ಅಲ್ಲದೇ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಡೆದುಕೊಂಡ ರೀತಿಯ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ.
ಈ ಸುದ್ದಿಯನ್ನು ಓದViral Video: ರಷ್ಯಾ ಯೂಟ್ಯೂಬರ್‌ಗೆ ದೆಹಲಿಯಲ್ಲಿ ಕಿರುಕುಳ; ಕ್ಷಮೆ ಯಾಚಿಸಿದ ನೆಟ್ಟಿಗರು
ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಐಎಎಸ್ ಅಧಿಕಾರಿ ಲಕ್ಷ್ಯ ಸಿಂಘಾಲ್ ಅವರ ಈ ನಡೆಯ ಕುರಿತು ಹಿರಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆಂದು ತಿಳಿದು ಬಂದಿದೆ. ಮತ್ತೊಂದೆಡೆ, ಹಿರಿಯ ಅಧಿಕಾರಿಯು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅರ್ಚಕರು ನನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರು ನನಗೆ ಅಜ್ಜನ ಸಮಾನ. ಹಾಗಾಗಿ, ಅವರಿಗೆ ಗೌರವದ ಆತಿಥ್ಯ ಸಲ್ಲಿಸಿದ್ದೇನೆ ಎಂದು ಐಎಎಸ್ ಅಧಿಕಾರಿ ಲಕ್ಷ್ಯ ಸಿಂಘಾಲ್ ಅವರು ಹೇಳಿಕೊಂಡಿದ್ದಾರೆ. ಪರಿಶೀಲನೆ ಹೊರತಾಗಿಯೂ ಈ ಅಧಿಕಾರಿಯ ವಿರುದ್ಧ ಯಾವುದೇ ಕ್ರಮವನ್ನು ಈ ವರೆಗೂ ಕೈಗೊಂಡಿಲ್ಲ.
ವಿವಾದದ ಕೇಂದ್ರ ಬಿಂದುವಾಗಿರುವ ಲಕ್ಷ್ಯ ಸಿಂಘಾಲ್ ಅವರು 2019ರ ಅರುಣಾಚಲ ಪ್ರದೇಶ-ಗೋವಾ-ಮಿಜೋರಾಮ್ ಮತ್ತು ಕೇಂದ್ರಾಡಳಿತ ಕೆಡರ್‌ನ ಅಧಿಕಾರಿಯಾಗಿದ್ದಾರೆ. ವೃತ್ತಿಪರ ನಡವಳಿಕೆ ಮತ್ತು ವೈಯಕ್ತಿಕ ನಡುವಳಿಕೆ ಹೇಗಿರಬೇಕು ಎಂಬ ಕುರಿತಾದ ಚರ್ಚೆಗೆ ವೈರಲ್ ವಿಡಿಯೋ ಕಾರಣವಾಗಿದೆ.