1. ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ; 36 ಶಾಸಕರಿಗೆ ಮಣೆ, ಡಿಕೆಶಿ ಮೇಲುಗೈ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress Karnataka) ಸರ್ಕಾರ ಬಂದು 9 ತಿಂಗಳ ಬಳಿಕ ಕೊನೆಗೂ ನಿಗಮ – ಮಂಡಳಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ 36 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಂಪರ್ ಗಿಫ್ಟ್ ನೀಡಲಾಗಿದೆ. ಅಲ್ಲದೆ, ಪ್ರಮುಖ ಮಂಡಳಿಯಾದ ಬಿಡಿಎ ಈಗ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರ ಅತ್ಯಾಪ್ತ ಶಾಸಕನ ಪಾಲಾಗಿದೆ. ಬಿಡಿಎ ಅಧ್ಯಕ್ಷ (BDA President) ಸ್ಥಾನ ಪಡೆಯುವಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ (Shantinagar MLA NA Harris) ಕೊನೆಗೂ ಸಫಲರಾಗಿದ್ದಾರೆ. ಅಲ್ಲದೆ, ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ (DCM Political Secretary) ಎಂದು ಹೊಸ ಹುದ್ದೆಯೊಂದನ್ನು ಸೃಷ್ಟಿ ಮಾಡಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: Congress Karnataka: ಈ ನಿಗಮ – ಮಂಡಳಿ ಅವಧಿ ಕೇವಲ 2 ವರ್ಷ; ಸಿಎಂ, ಡಿಸಿಎಂ ಮಾಸ್ಟರ್ ಪ್ಲ್ಯಾನ್!
2.ರಾಮ ಮಂದಿರ ವಿಚಾರ ವಿಶ್ವಸಂಸ್ಥೆಯಲ್ಲಿ ಎತ್ತಿ ಕಿರಿಕ್ ಮಾಡಲು ಪಾಕಿಸ್ತಾನ ಯತ್ನ
ನ್ಯೂಯಾರ್ಕ್: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Prathistha) ಭವ್ಯ ಕಾರ್ಯಕ್ರಮದಿಂದ ಭಾರತೀಯರು ಕಣ್ಮನ ತುಂಬಿಕೊಂಡಿದ್ದರೆ, ಅತ್ತ ಪಾಕಿಸ್ತಾನ (Pakistan) ಆಕ್ರೋಶದಿಂದ ಕುದಿಯುತ್ತಿದೆ. ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲೂ (United nations) ಎತ್ತಲು ಪ್ರಯತ್ನಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ರಾಹುಲ್ ಗಾಂಧಿ ಯಾತ್ರೆಗೆ ಬಂಗಾಳದಲ್ಲಿ ದೀದಿ ಅಡ್ಡಿ; ನ್ಯಾಯ ಯಾತ್ರೆಗೆ ಇದೆಂಥ ಅನ್ಯಾಯ?
ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದ ಪ್ರಾಮುಖ್ಯ ಪಡೆದಿರುವ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೊಸ ವರ್ಚಸ್ಸು ನೀಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ (Bharat Jodo Nyay Yatra) ಪಶ್ಚಿಮ ಬಂಗಾಳದಲ್ಲೂ ರಾಜ್ಯ ಸರ್ಕಾರದಿಂದ ಅಡ್ಡಿಯಾಗಿದೆ. ಪಶ್ಚಿಮ ಬಂಗಾಳದ (West Bengal) ಹಲವೆಡೆ ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Nitish Kumar: ನಿತೀಶ್ ಕುಮಾರ್ ಮತ್ತೆ ಯುಟರ್ನ್; ಇವರ ‘ಜಂಪ್’ಗಿದೆ ‘ಲಾಂಗ್’ ಇತಿಹಾಸ!
4. ಚೀನಾಗೆ ಪೆಟ್ಟು ಕೊಟ್ಟ ತೈವಾನ್‌ನ ಯಂಗ್ ಲಿಯುಗೆ ಪದ್ಮಭೂಷಣ; ಭಾರತಕ್ಕೆ ಇವರ ಕೊಡುಗೆ?
ನವದೆಹಲಿ: ತೈವಾನ್‌ನ ತಂತ್ರಜ್ಞಾನ ದೈತ್ಯ ಕಂಪನಿಯಾದ ಫಾಕ್ಸ್‌ಕಾನ್ ಸಿಇಒ ಯಂಗ್ ಲಿಯು (Foxconn CEO Young Liu) ಅವರಿಗೆ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ (Padma Bhushan) ಘೋಷಿಸಿದೆ. ಕಳೆದ ನಾಲ್ಕು ದಶಕಗಳಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿರುವ ಯಂಗ್ ಲಿಯು ಅವರು ಮೂರು ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಹಾಗಾದರೆ, ಯಂಗ್ ಲಿಯು ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲು ಕಾರಣವೇನು? ಅವರು ಭಾರತಕ್ಕೆ ನೀಡಿದ ಕೊಡುಗೆ ಏನು ಎಂಬುದರ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Prema Dhanraj: ಸುಟ್ಟ ಗಾಯದಿಂದ ಪದ್ಮಶ್ರೀವರೆಗೆ; ಡಾ. ಪ್ರೇಮಾ ಧನರಾಜ್ ಬದುಕಿನ ರೋಚಕ ಪಯಣ
5. ಸಂವಿಧಾನ ಬದಲಾವಣೆ ಕೂಗನ್ನು ಖಂಡಿಸಿ, ನಾನೂ ಧ್ವನಿಗೂಡಿಸುವೆ: ಸಿದ್ದರಾಮಯ್ಯ ಕರೆ
ಬೆಂಗಳೂರು: ಸಂವಿಧಾನ ಬದಲಾವಣೆ (constitutional change call) ಚರ್ಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಖಂಡನೆ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ.. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ ಎರಡೂ ಸಹ ಒಂದೇ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ಧ್ವನಿಗೂಡಿಸುತ್ತೇನೆ ಎಂದು ಗಣರಾಜ್ಯೋತ್ಸವದ (Republic Day) ಮೇಲಿನ ಭಾಷಣದಲ್ಲಿ ಹೇಳಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಈಗ 210 ರೂ. ಉಳಿಸಿ, ನಿವೃತ್ತಿ ಬಳಿಕ ಪ್ರತಿ ತಿಂಗಳು 5 ಸಾವಿರ ರೂ. ಗಳಿಸಿ; ಯಾವುದು ಈ ಯೋಜನೆ?
ಬೆಂಗಳೂರು: ನಿವೃತ್ತಿ ನಂತರ ಪಿಂಚಣಿ ಪಡೆಯಬೇಕು ಎಂದು ಬಯಸುವವರಿಗೆ ಅಟಲ್ ಪೆನ್ಶನ್ ಯೋಜನೆ (Atal Pension Yojana-APY) ಉತ್ತಮ ಆಯ್ಕೆ. ಕೇಂದ್ರ ಸರ್ಕಾರ ಪರಿಚಯಿಸಿರುವ ಈ ಯೋಜನೆ ಬಡವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲಿದೆ. ನಿವೃತ್ತಿ ಸಮಯದಲ್ಲಿ ಅಂದರೆ ಫಲಾನುಭವಿಗೆ 60 ವರ್ಷ ಆದ ಮೇಲೆ ಪ್ರತಿ ತಿಂಗಳು 1,000 ರೂ.ಯಿಂದ 5,000 ರೂ.ವರೆಗೆ ಪಿಂಚಣಿ ಪಡೆಯುವ ಯೋಜನೆ ಇದಾಗಿದೆ. ಈ ಅಟಲ್ ಪೆನ್ಶನ್ ಯೋಜನೆ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಮದರಸಾಗಳಲ್ಲೂ ನಡೆಯಲಿದೆ ಇನ್ನು ರಾಮನ ಕುರಿತು ಅಧ್ಯಯನ; ಏನಿದು ಯೋಜನೆ?
ಡೆಹ್ರಾಡೂನ್: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೊಂಡಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ದೇಶಾದ್ಯಂತ ಈಗ ರಾಮನ ಜಪವೇ ಶುರುವಾಗಿದೆ. ಇದರ ಬೆನ್ನಲ್ಲೇ, ಉತ್ತರಾಖಂಡದ ಮದರಸಾಗಳಲ್ಲೂ (Uttarakhand Madrasa) ಶ್ರೀರಾಮನ (Lord Ram) ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಒಟಿಟಿಗೆ ಬಂತು ʻಸಪ್ತ ಸಾಗರದಾಚೆ ಎಲ್ಲೋʼ ಸೈಡ್ ʻಬಿʼ ಸಿನಿಮಾ!
ಬೆಂಗಳೂರು: ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರುಕ್ಮಿಣಿ ವಸಂತ್ (rukmini vasanth) ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ (SSE SideB Twitter Review) ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿತ್ತು. 2023ರ ನವೆಂಬರ್ 17ರಂದು ಸೈಡ್ ಬಿ ಸಿನಿಮಾ ರಿಲೀಸ್ ಆಗಿತ್ತು. ವಿಶೇಷ ಅಂದರೆ ಸೈಡ್ ಬಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಇದೀಗ ಸೈಡ್ ಬಿ ‘ಅಮೆಜಾನ್ ಪ್ರೈಂ ವಿಡಿಯೊ’ (Amazon Prime Video) ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಶಾಲೆಯ ನೃತ್ಯದಲ್ಲಿ ಕಮಲದ ಹೂವು ಕಂಡ ಶಾಸಕ ಶಿವಲಿಂಗೇಗೌಡ ಕೆಂಡ!
ಹಾಸನ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ (Republic Day Celebration) ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮದಲ್ಲಿ ಕಮಲದ ಹೂವನ್ನು (Lotus Controversy) ಕಂಡು ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇ ಗೌಡರು (MLA KM Shivalingegowda) ಕೆಂಡಾಮಂಡಲರಾಗಿದ್ದಾರೆ. ಪಕ್ಷವೊಂದರ ಚಿಹ್ನೆಯನ್ನು ಈ ರೀತಿ ಮಕ್ಕಳ ಕೈಯಲ್ಲಿ ಕೊಟ್ಟು ಪ್ರದರ್ಶನ ಮಾಡಿಸೋದು ಸರೀನಾ ಎಂದು ಅವರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಲದ ಹೂವು ರಾಷ್ಟ್ರೀಯ ಹೂವು (Lotus National flower) ಎಂಬ ನೆಲೆಯಲ್ಲಿ ಪ್ರದರ್ಶನ ಮಾಡಿದ್ದೇವೆ, ಇದರಲ್ಲಿ ರಾಜಕೀಯ ಇಲ್ಲ ಎಂದು ಶಿಕ್ಷಕಿ ಹೇಳಿದರೂ ಅವರು ಒಪ್ಪಲಿಲ್ಲ. ಶಿಕ್ಷಕರು ಮಕ್ಕಳಿಗೆ ಹೇಳಿ ಕೊಡೋದು ಇದೇನಾ ಎಂದು ಅವರು ಕೆಂಡ ಕಾರಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. 1 ಟನ್ ಭಾರದ ಕಾರನ್ನು ಬಾಯಿಂದ ಎಳೆದ ಬ್ರೂಸ್ಲಿ ಅಭಿಮಾನಿ!
ರಾಯಚೂರು: ಗಣರಾಜೋತ್ಸವ ಸಂಭ್ರಮಾಚರಣೆ ವೇಳೆ ಬ್ರೂಸ್ಲಿ ಅಭಿಮಾನಿಯೊಬ್ಬರು ಮೈ ಜುಮ್ಮೆನಿಸುವ ಸಾಹಸ (Viral News) ಪ್ರದರ್ಶಿಸಿದ್ದಾರೆ. 1 ಟನ್ ಭಾರದ ಕಾರಿಗೆ ಹಗ್ಗ ಕಟ್ಟಿ ಬಾಯಿಂದ ಎಳೆದು ಸಾಹಸ ಮಾಡಿದ್ದು, ಸುಮಾರು 300 ಮೀಟರ್ ಬಾಯಿಂದಲೇ ರಿಡ್ಜ್ ಕಾರನ್ನು ಯುವಕ ಎಳೆದಿದ್ದಾನೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.