Site icon Vistara News

The Diary of West Bengal ನಿರ್ದೇಶಕನಿಗೆ ಕೋಲ್ಕೊತಾ ಪೊಲೀಸ್ ನೋಟಿಸ್, ಜೀವ ಸಹಿತ ಉಳಿಯಲಾರೆ ಎಂದಿದ್ದೇಕೆ ಡೈರೆಕ್ಟರ್!

The of Dairy West Bengal cinema poster

ಕೋಲ್ಕೊತಾ, ಪಶ್ಚಿಮ ಬಂಗಾಳ: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಸಕ್ಸೆಸ್ ಕಂಡ ಬೆನ್ನಲ್ಲೇ, ಮುಂಬೈ ಮೂಲದ ಚಿತ್ರಕರ್ಮಿ ಸನೋಜ್ ಮಿಶ್ರಾ (Sanoj Mishra) ಅವರ ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ್’ (The Diary of West Bengal) ಸಿನಿಮಾ ಕೂಡ ಈಗ ವಿವಾದಕ್ಕೆ ಕಾರಣವಾಗಿದೆ. ಕೋಲ್ಕೊತಾ (Kolkata Police) ಜಂಟಿ ಪೊಲೀಸ್ ಕಮಿಷನರ್ ಶಂಖ ಶುಭ್ರ ಚಕ್ರವರ್ತಿ ಅವರು ನೋಟಿಸ್ (Notice) ನೀಡಿದ್ದಾರೆ. ಕೋಲ್ಕೊತಾದ ನಾಗರಿಕೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ಸಿನಿಮಾ ಬರಹಗಾರ ಹಾಗೂ ನಿರ್ದೇಶಕರಿಗೆ ನೋಟಿಸ್ ನೀಡಲಾಗಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಅದರ ಕಂಟೆಂಟ್ ಆಧಾರದ ಮೇಲೆ ದೂರು ದಾಖಲಾಗಿದೆ.

ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಸಂಬಂಧ ದೂರು ದಾಖಲಾಗಿದೆ. ಸಿನಿಮಾದ ಟ್ರೈಲರ್‌ಗೆ ಸಂಬಂಧಿಸಿದಂತೆ ತಮ್ಮ ಬಳಿ ಎರುವ ಎಲ್ಲ ಸಾಹಿತ್ಯಿಕ ವಸ್ತುಗಳ ಸಹಿತ ಮೇ 30ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಶಂಖ ಶುಭ್ರ ಚಕ್ರವರ್ತಿ ಅವರು ಹೇಳಿದ್ದಾರೆ. ಮುಂಬೈನ ಓಶಿವರ್ ಪೊಲೀಸ್ ಠಾಣೆಯ ಮೂಲಕ ನಿರ್ದೇಶಕ ಮಿಶ್ರಾ ಅವರಿಗೆ ನೋಟಿಸ್ ನೀಡಲಾಗಿದೆ.

ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾದ ಟ್ರೈಲರ್

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯು ರಾಜ್ಯದ ಕೆಲವು ಭಾಗಗಳಲ್ಲಿ ಕೋಮುಗಲಭೆಗೆ ಕಾರಣವಾಗಬಹುದು ಎಂದು ಪಶ್ಚಿಮ ಬಂಗಾಳ ತನ್ನ ನಿರ್ಧಾರಕ್ಕೆ ಕಾರಣವನ್ನು ನೀಡಿತ್ತು. ಆದರೆ, ಮೇ 18 ರಂದು ಸುಪ್ರೀಂ ಕೋರ್ಟ್ ನಿಷೇಧದ ಆದೇಶವನ್ನು ರದ್ದುಗೊಳಿಸಿದೆ.

ಏತನ್ಮಧ್ಯೆ, ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನಿರ್ದೇಶಕ ಮಿಶ್ರಾ ಅವರು, ನನ್ನ ಸಿನಿಮಾ ಸಂಶೋಧನೆ, ಸಾಕ್ಷ್ಯಗಳು ಮತ್ತು ನೈಜ ಘಟನೆಗಳನ್ನಾಧರಿಸಿದೆ. ಜನಸಂಖ್ಯಾ ಬದಲಾವಣೆಯಿಂದಾಗಿ ಪಶ್ಚಿಮ ಬಂಗಾಳದ ಸಾಮಾಜಿಕ ಸಂರಚನೆಯ ಬದಲಾಗಿ ಹೋಗಿದೆ. ತುಷ್ಟಿಕರಣದ ರಾಜಕಾರಣವೇ ಇದಕ್ಕೆ ಕಾರಣ. ನನ್ನ ವಿರುದ್ಧ ಹೂಡಲಾಗಿರುವ ಪ್ರಕರಣವು ಕ್ರಿಮಿನಲ್‌ಗಳ ವಿರುದ್ಧ ದಾಖಲಿಸುವ ಪ್ರಕರಣಗಳಾಗಿವೆ. ವಾಸ್ತವದಲ್ಲಿ ನಾನು ಕ್ರಿಮಿನಲ್ ಅಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ. ನನಗೆ ಹೆದರಿಕೆ ಏನೆಂದರೆ, ಪಶ್ಚಿಮ ಬಂಗಾಳ ಪೊಲೀಸರು ನನ್ನನ್ನು ಅರೆಸ್ಟ್ ಮಾಡಬಹುದು ಮತ್ತು ನಾನು ಜೈಲಿನಲ್ಲಿ ಸಾಯಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿ ಸಿನಿಮಾ ನಟಿ ಆದಾ ಶರ್ಮಾ, ನಿರ್ದೇಶಕ ಸುದೀಪ್ರೋ ಸೇನ್‌ಗೆ ಅಪಘಾತ!

ಸತ್ಯವನ್ನು ಹೂತುಹಾಕಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಗಮನ ಹರಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಚಿತ್ರೀಕರಣವೂ ಸಂಪೂರ್ಣವಾಗಿ ಪಶ್ಚಿಮ ಬಂಗಾಳದ ಹೊರಗೆ ನಡೆಸಲಾಗಿದೆ. ನಾನು ಎಲ್ಲ ಕಾನೂನುಗಳನ್ನು ಪಾಲಿಸಿದ್ದೇನೆ. ನನ್ನ ವಿರುದ್ಧ ಎಲ್ಲ ಆರೋಪಗಳು ಆಧಾರರಹಿತವಾಗಿವೆ. ಯಾವುದೇ ರಾಜ್ಯವನ್ನು ಅವಮಾನವ ಉದ್ದೇಶ ನನಗಿಲ್ಲ. ಈ ಹಿಂದೆಯೂ ನಾನು ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡಿದ್ದೇನೆ ಎಂದು ಮಿಶ್ರಾ ಅವರು ಹೇಳಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version