ದೇಶ
The Diary of West Bengal ನಿರ್ದೇಶಕನಿಗೆ ಕೋಲ್ಕೊತಾ ಪೊಲೀಸ್ ನೋಟಿಸ್, ಜೀವ ಸಹಿತ ಉಳಿಯಲಾರೆ ಎಂದಿದ್ದೇಕೆ ಡೈರೆಕ್ಟರ್!
The Diary of West Bengal: ಕಳೆದ ತಿಂಗಳ ಬಿಡುಗಡೆಯಾದ ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ನಿರ್ದೇಶಕರಿಗೆ ಸಂಕಟ ಎದುರಾಗಿದೆ. ನಾಗರಿಕರೊಬ್ಬರ ದೂರು ಆಧಾರದ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಕರಿಗೆ ಕೋಲ್ಕೊತಾ ಪೊಲೀಸರು ನೋಟಿಸ್ ನೀಡಿದ್ದಾರೆ.
ಕೋಲ್ಕೊತಾ, ಪಶ್ಚಿಮ ಬಂಗಾಳ: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಸಕ್ಸೆಸ್ ಕಂಡ ಬೆನ್ನಲ್ಲೇ, ಮುಂಬೈ ಮೂಲದ ಚಿತ್ರಕರ್ಮಿ ಸನೋಜ್ ಮಿಶ್ರಾ (Sanoj Mishra) ಅವರ ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ್’ (The Diary of West Bengal) ಸಿನಿಮಾ ಕೂಡ ಈಗ ವಿವಾದಕ್ಕೆ ಕಾರಣವಾಗಿದೆ. ಕೋಲ್ಕೊತಾ (Kolkata Police) ಜಂಟಿ ಪೊಲೀಸ್ ಕಮಿಷನರ್ ಶಂಖ ಶುಭ್ರ ಚಕ್ರವರ್ತಿ ಅವರು ನೋಟಿಸ್ (Notice) ನೀಡಿದ್ದಾರೆ. ಕೋಲ್ಕೊತಾದ ನಾಗರಿಕೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ಸಿನಿಮಾ ಬರಹಗಾರ ಹಾಗೂ ನಿರ್ದೇಶಕರಿಗೆ ನೋಟಿಸ್ ನೀಡಲಾಗಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಅದರ ಕಂಟೆಂಟ್ ಆಧಾರದ ಮೇಲೆ ದೂರು ದಾಖಲಾಗಿದೆ.
ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಸಂಬಂಧ ದೂರು ದಾಖಲಾಗಿದೆ. ಸಿನಿಮಾದ ಟ್ರೈಲರ್‌ಗೆ ಸಂಬಂಧಿಸಿದಂತೆ ತಮ್ಮ ಬಳಿ ಎರುವ ಎಲ್ಲ ಸಾಹಿತ್ಯಿಕ ವಸ್ತುಗಳ ಸಹಿತ ಮೇ 30ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಶಂಖ ಶುಭ್ರ ಚಕ್ರವರ್ತಿ ಅವರು ಹೇಳಿದ್ದಾರೆ. ಮುಂಬೈನ ಓಶಿವರ್ ಪೊಲೀಸ್ ಠಾಣೆಯ ಮೂಲಕ ನಿರ್ದೇಶಕ ಮಿಶ್ರಾ ಅವರಿಗೆ ನೋಟಿಸ್ ನೀಡಲಾಗಿದೆ.
ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾದ ಟ್ರೈಲರ್
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯು ರಾಜ್ಯದ ಕೆಲವು ಭಾಗಗಳಲ್ಲಿ ಕೋಮುಗಲಭೆಗೆ ಕಾರಣವಾಗಬಹುದು ಎಂದು ಪಶ್ಚಿಮ ಬಂಗಾಳ ತನ್ನ ನಿರ್ಧಾರಕ್ಕೆ ಕಾರಣವನ್ನು ನೀಡಿತ್ತು. ಆದರೆ, ಮೇ 18 ರಂದು ಸುಪ್ರೀಂ ಕೋರ್ಟ್ ನಿಷೇಧದ ಆದೇಶವನ್ನು ರದ್ದುಗೊಳಿಸಿದೆ.
ಏತನ್ಮಧ್ಯೆ, ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನಿರ್ದೇಶಕ ಮಿಶ್ರಾ ಅವರು, ನನ್ನ ಸಿನಿಮಾ ಸಂಶೋಧನೆ, ಸಾಕ್ಷ್ಯಗಳು ಮತ್ತು ನೈಜ ಘಟನೆಗಳನ್ನಾಧರಿಸಿದೆ. ಜನಸಂಖ್ಯಾ ಬದಲಾವಣೆಯಿಂದಾಗಿ ಪಶ್ಚಿಮ ಬಂಗಾಳದ ಸಾಮಾಜಿಕ ಸಂರಚನೆಯ ಬದಲಾಗಿ ಹೋಗಿದೆ. ತುಷ್ಟಿಕರಣದ ರಾಜಕಾರಣವೇ ಇದಕ್ಕೆ ಕಾರಣ. ನನ್ನ ವಿರುದ್ಧ ಹೂಡಲಾಗಿರುವ ಪ್ರಕರಣವು ಕ್ರಿಮಿನಲ್‌ಗಳ ವಿರುದ್ಧ ದಾಖಲಿಸುವ ಪ್ರಕರಣಗಳಾಗಿವೆ. ವಾಸ್ತವದಲ್ಲಿ ನಾನು ಕ್ರಿಮಿನಲ್ ಅಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ. ನನಗೆ ಹೆದರಿಕೆ ಏನೆಂದರೆ, ಪಶ್ಚಿಮ ಬಂಗಾಳ ಪೊಲೀಸರು ನನ್ನನ್ನು ಅರೆಸ್ಟ್ ಮಾಡಬಹುದು ಮತ್ತು ನಾನು ಜೈಲಿನಲ್ಲಿ ಸಾಯಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: The Kerala Story : ಕೇರಳ ಸ್ಟೋರಿ ಸಿನಿಮಾ ನಟಿ ಆದಾ ಶರ್ಮಾ, ನಿರ್ದೇಶಕ ಸುದೀಪ್ರೋ ಸೇನ್‌ಗೆ ಅಪಘಾತ!
ಸತ್ಯವನ್ನು ಹೂತುಹಾಕಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಗಮನ ಹರಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಚಿತ್ರೀಕರಣವೂ ಸಂಪೂರ್ಣವಾಗಿ ಪಶ್ಚಿಮ ಬಂಗಾಳದ ಹೊರಗೆ ನಡೆಸಲಾಗಿದೆ. ನಾನು ಎಲ್ಲ ಕಾನೂನುಗಳನ್ನು ಪಾಲಿಸಿದ್ದೇನೆ. ನನ್ನ ವಿರುದ್ಧ ಎಲ್ಲ ಆರೋಪಗಳು ಆಧಾರರಹಿತವಾಗಿವೆ. ಯಾವುದೇ ರಾಜ್ಯವನ್ನು ಅವಮಾನವ ಉದ್ದೇಶ ನನಗಿಲ್ಲ. ಈ ಹಿಂದೆಯೂ ನಾನು ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡಿದ್ದೇನೆ ಎಂದು ಮಿಶ್ರಾ ಅವರು ಹೇಳಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕ್ರೈಂ
Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್; ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್
Apsara Murder: ತೆಲಂಗಾಣದ ಸರೂರ್ ನಗರದಲ್ಲಿ ಅರ್ಚಕನೊಬ್ಬ ಈಗಾಗಲೇ ಮದುವೆಯಾಗಿದ್ದರೂ ಮತ್ತೊಬ್ಬ ಮಹಿಳೆಯ ಸಹವಾಸ ಮಾಡಿದ್ದಾನೆ. ಪ್ರೀತಿಸುತ್ತಿದ್ದೀಯ, ಮದುವೆಯಾಗು ಎಂದು ಮಹಿಳೆ ಒತ್ತಾಯ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಅರ್ಚಕ ಕೊಂದಿದ್ದಾನೆ.
ಹೈದರಾಬಾದ್: ಮನೆಯಲ್ಲೊಬ್ಬಳು ಮಡದಿ ಇದ್ದರೂ ಲವ್ವರ್ ಇರಬೇಕು ಎಂಬ ಅರ್ಚಕನೊಬ್ಬನ ಶೋಕಿಗಾಗಿ ತೆಲಂಗಾಣದಲ್ಲಿ 30 ವರ್ಷದ ಮಹಿಳೆಯೊಬ್ಬರ (Apsara Murder) ಜೀವವೇ ಬಲಿಯಾಗಿದೆ. ಹೌದು, ಶಂಷಾಬಾದ್ ಜಿಲ್ಲೆಯ ಸರೂರ್‌ನಗರದಲ್ಲಿ ಅರ್ಚಕನು ತನ್ನ ಗರ್ಲ್‌ಫ್ರೆಂಡ್‌ಅನ್ನು ಮದುವೆಯಾಗಬೇಕಾಗುತ್ತದೆ ಎಂದು ಆಕೆಯನ್ನು ಕೊಂದು, ದೇಹವನ್ನು ಚರಂಡಿ ಗುಂಡಿಗೆ (Manhole) ಎಸೆದಿದ್ದಾನೆ.
ಸರೂರ್ ನಗರದ ದೇವಾಲಯದಲ್ಲಿ ಅರ್ಚಕನಾಗಿರುವ ವೆಂಕಟ ಸೂರ್ಯ ಸಾಯಿ ಕೃಷ್ಣನಿಗೆ ಈಗಾಗಲೇ ಮದುವೆಯಾಗಿದೆ. ಮದುವೆ, ಸಂಸಾರ ಎಂದು ಸುಮ್ಮನಿರದ ಈತನು ಅಪ್ಸರಾ ಎಂಬ ಮಹಿಳೆಯ ಜತೆ ಸಂಬಂಧ ಬೆಳೆಸಿದ್ದಾನೆ. ಇಬ್ಬರ ಪ್ರೀತಿ ಗಾಢವಾದ ಮೇಲೆ ನನ್ನನ್ನು ಮದುವೆಯಾಗು ಎಂದು ಅಪ್ಸರಾ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮದುವೆಯಾದ ಕಾರಣ ಮತ್ತೊಂದು ಮದುವೆಯಾಗಲು ಒಪ್ಪದ ವೆಂಕಟಸೂರ್ಯ ಸಾಯಿ ಕೃಷ್ಣ, ಆಕೆಯನ್ನು ಕೊಂದು, ಚರಂಡಿಯ ಗುಂಡಿಯಲ್ಲಿ ಎಸೆದಿದ್ದಾನೆ.
ಗೋಶಾಲೆಗೆ ಭೇಟಿ ನೀಡುವ ನೆಪದಲ್ಲಿ ಕೊಲೆ
ಗೋಶಾಲೆಗೆ ಭೇಟಿ ನೀಡೋಣ ಎಂದು ವೆಂಕಟಸೂರ್ಯ ಸಾಯಿ ಕೃಷ್ಣ,ನು ಅಪ್ಸರಾ ಅವರನ್ನು ಕರೆಸಿದ್ದಾನೆ. ವೆಂಕಟೇಶ್ವರ ಕಾಲೋನಿ ನಿವಾಸಿಯಾದ ಅಪ್ಸರಾ, ವೆಂಕಟಸೂರ್ಯ ಸಾಯಿ ಕೃಷ್ಣನ ಮಾತು ಕೇಳಿ ಸುಲ್ತಾನ್‌ಪಳ್ಳಿಯಲ್ಲಿರುವ ಗೋಶಾಲೆಗೆ ಹೋಗಿದ್ದಾರೆ. ಇದೇ ವೇಳೆ, ನರ್ಕುಡಾ ಗ್ರಾಮದ ಹೊರವಲಯದಲ್ಲಿ ವೆಂಕಟಸೂರ್ಯ ಸಾಯಿ ಕೃಷ್ಣನು ಅಪ್ಸರಾ ತಲೆಮೇಲೆ ಬಂಡೆಗಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಚರಂಡಿ ಗುಂಡಿಯಲ್ಲಿ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Murder Case: ಕೋಪದಿಂದ ಅಜ್ಜಿಯ ಕೊಲೆ ಮಾಡಿದ, ಹೆಣ ಕಾರಿನಲ್ಲಿ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ!
ಜೂನ್ 3ರಿಂದ ಅಪ್ಸರಾ ಕಾಣೆಯಾದ ಕಾರಣ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಅಪ್ಸರಾ ಕಾಲ್ ರೆಕಾರ್ಡ್ಸ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವೆಂಕಟಸೂರ್ಯ ಸಾಯಿ ಕೃಷ್ಣನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಅರ್ಚಕನು ತಾನು ನಡೆಸಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮದುವೆಯಾಗು ಎಂಬುದಾಗಿ ಅಪ್ಸರಾ ಪೀಡಿಸಿದ ಕಾರಣ ಕೊಲೆ ಮಾಡಿದೆ ಎಂಬುದಾಗಿ ವೆಂಕಟಸೂರ್ಯ ಸಾಯಿ ಕೃಷ್ಣ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನು ಚರಂಡಿಯಲ್ಲಿ ಬಿದ್ದಿರುವ ಶವವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಮಹಿಳೆಯೊಬ್ಬರು ಕಾಣೆಯಾದ ಪ್ರಕರಣವು ಆಕೆಯ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಮದುವೆಯಾದರೂ ಮತ್ತೊಬ್ಬ ಮಹಿಳೆಯ ಸಹವಾಸ ಮಾಡುವ ಜತೆಗೆ ಆಕೆಯನ್ನು ಕೊಲೆಗೈದ ಅರ್ಚಕನು ಕಂಬಿ ಎಣಿಸುತ್ತಿದ್ದಾನೆ.
ತಂತ್ರಜ್ಞಾನ
Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?
Aadhaar Services: ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ಮತ್ತು ಗುರುತು ದೃಢೀಕರಣಕ್ಕೆ ಆಧಾರ್ ಅತ್ಯಗತ್ಯ ಸರ್ಕಾರಿ ಗುರುತಿನ ಪತ್ರವಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ.
ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳಿಗೆ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ವ್ಯವಸ್ಥೆಯನ್ನು ಒದಗಿಸಿದೆ. ಬಳಕೆದಾರರು ಯುಐಡಿಎಐ ಜಾಲತಾಣ (www.myaadhaar.uidai.gov.in) ಅಥವಾ ಎಂಆಧಾರ್ (mAadhaar) ಆ್ಯಪ್ ಮೂಲಕ ಆಧಾರ್ ಲಾಕ್ ಮಾಡಬಹುದಾಗಿದೆ.
ಆಧಾರ್ ಹೇಗೆ ಲಾಕ್ ಮಾಡುವುದು?
ಎಸ್ಸೆಮ್ಮೆಸ್ ಮೂಲಕ: GVID ಟೈಪ್ ಮಾಡಿ ನಿಮ್ಮ ನಾಲ್ಕು ಅಥಾ ಎಂಟು ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ ಮತ್ತು ಅದನ್ನು 1947ಕೆ ಸೆಂಡ್ ಮಾಡಿದೆ. ಉದಾಹರಣೆ: GVID 7893 SMS to 1947
ವೆಬ್‌ಸೈಟ್ ಮೂಲಕ: ಯುಐಡಿಎಐ ವೆಬ್‌ಸೈಟ್ (https://resident.uidai.gov.in/aadhaar-lockunlock)ಗೆ ಭೇಟಿ ನೀಡಿ. ಹೋಮ್‌ಪುಟದಲ್ಲಿರುವ ಮೈ ಆಧಾರ್ ಸೆಕ್ಷನ್‌ನಲ್ಲಿರುವ ಲಾಕ್ ಆಧಾರ್ (Lock Aadhaar) ಮೇಲೆ ಕ್ಲಿಕ್ ಮಾಡಿ. ಬಳಿಕ ಯುಐಡಿ ಲಾಕ್ ಆಪ್ಷನ್ ಸೆಲೆಕ್ಟ್ ಮಾಡಿ. ಯುಐಡಿ ನಂಬರ್, ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ. ಸೆಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಗ ನಿಮ್ಮ ಆಧಾರ್ ಯಶಸ್ವಿಯಾಗಿ ಲಾಕ್ ಆಗುತ್ತದೆ.
ಆಧಾರ್ ಅನ್‌ಲಾಕ್ ಮಾಡುವುದು ಹೇಗೆ?
ಎಸ್ಸೆಮ್ಮೆಸ್ ಮೂಲಕ: RVID ಅಂತಾ ಟೈಪ್ ಮಾಡಿ ಸ್ಪೇಸ್ ಬಿಟ್ಟು ನಾಲ್ಕು ಅಥವಾ 8 ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ, 1947 ನಂಬರ್‌ಗೆ ಸೆಂಡ್ ಮಾಡಿ.
ಇದನ್ನೂ ಓದಿ: Aadhaar card : ಆಧಾರ್ ಜತೆ ನಿಮ್ಮ ಇ-ಮೇಲ್, ಮೊಬೈಲ್ ಲಿಂಕ್ ಆಗಿದೆಯೇ ? ಹೀಗೆ ಖಾತರಿಪಡಿಸಿಕೊಳ್ಳಿ
ವೆಬ್‌ಸೈಟ್ ಮೂಲಕ ಹೀಗೆ ಮಾಡಿ: ಇಲ್ಲಿ ಕೂಡ ಸೇನ್ ಲಾಕ್ ಮಾಡುವ ಪ್ರಕ್ರಿಯೇ ಫಾಲೋ ಮಾಡಬೇಕು. ಮೊದಲಿಗೆ ಯುಐಡಿಎಐಗೆ ಹೋಗಿ. ಬಳಿಕ ಅನ್‌ಲಾಕ್ ಆಯ್ಕೆಯ ಸೆಲೆಕ್ಟ ಮಾಡಿ. ಹೊಸ ವಿಐಡಿ ಮತ್ತುಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ. ಆಗ ನಿಮ್ಮ ಆಧಾರ್ ನಂಬರ್ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್
Viral News: ಅತ್ಯಾಚಾರಕ್ಕೀಡಾದ ಬಾಲಕಿಯು ಈಗ ಗರ್ಭ ಧರಿಸಿದ್ದು, ಆಕೆಯ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯವು ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ಗಾಂಧಿನಗರ: 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೋಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿ ಈಗ ತಿಂಗಳಾಗಿದೆ. ಆಕೆಯ ಗರ್ಭಪಾತಕ್ಕೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು, “ಮೊದಲೆಲ್ಲ 17 ವರ್ಷದ ಹೆಣ್ಣುಮಕ್ಕಳು ಮಕ್ಕಳನ್ನು ಹೆರುತ್ತಿದ್ದರು, 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು. ಇದೆಲ್ಲ ತಿಳಿಯಲು (Viral News) ಮನುಸ್ಮೃತಿ ಓದಿ” ಎಂದು ಕೂಡ ಹೇಳಿದೆ.
ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ, ಆಕೆಗೆ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತ ಬಾಲಕಿಯ ತಂದೆಯು ಅರ್ಜಿ ಸಲ್ಲಿಸಿದ್ದರು. “ಹಿಂದಿನ ಕಾಲದಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳು ಮದುವೆಯಾಗಿ, ಮಕ್ಕಳನ್ನು ಹೆರುತ್ತಿದ್ದರು ಎಂಬುದು ಗೊತ್ತಿರಲಿ. ಇದನ್ನು ನೀವು ಓದಿಲ್ಲವೆಂದರೆ, ಮನುಸ್ಮೃತಿ ಓದಿ ತಿಳಿದುಕೊಳ್ಳಿ” ಎಂದು ನ್ಯಾಯಮೂರ್ತಿ ಸಮೀರ್ ಜೆ ದಾವೆ ಹೇಳಿದರು.
ಸಂತ್ರಸ್ತೆಯ ತಂದೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿಕಂದರ್ ಸೈಯದ್, “ಆಗಸ್ಟ್ 18ರಂದು ಬಾಲಕಿಯು ಮಗು ಹೆರುವ ಸಾಧ್ಯತೆ ಇದೆ. ವೈದ್ಯರು ಡೇಟ್ ಕೊಟ್ಟಿದ್ದಾರೆ. ಆಕೆಯ ವಯಸ್ಸನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡಬೇಕು” ಎಂದು ವಾದ ಮಂಡಿಸಿದರು. ಆದರೆ, ನ್ಯಾಯಾಲಯವು, “ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು.
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ರಾಜಕೋಟ್‌ನಲ್ಲಿರುವ ಸಿವಿಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಅವರು ಬಾಲಕಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗುವಿನ ವೈದ್ಯಕೀಯ ತಪಾಸಣೆಯನ್ನು ತುರ್ತಾಗಿ ಮಾಡಬೇಕು ಎಂದು ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದೆ. ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ನ್ಯಾಯಾಲಯವು, ಜೂನ್ 15ಕ್ಕೆ ವಿಚಾರಣೆ ಮುಂದೂಡಿದೆ.
ಸಹೋದರನಿಂದಲೇ ಗರ್ಭ ಧರಿಸಿದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೆಲ ದಿನಗಳ ಹಿಂದೆ ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ನ್ಯಾ. ಜಿಯಾದ್ ರೆಹಮಾನ್ ಅವರು ಗರ್ಭಪಾತ ಮಾಡಿಸಲು ಅನುಮತಿ ನೀಡಿದ್ದರು.
“ಗರ್ಭಪಾತಕ್ಕೆ ಅನುಮತಿ ನೀಡದೆ ಹೋದರೆ ಸಾಮಾಜಿಕ ವ್ಯವಸ್ಥೆ ಹಾಗೂ ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿತು. ವೈದ್ಯಕೀಯ ಮಂಡಳಿಯು ಗರ್ಭಪಾತದ ಕುರಿತು ವರದಿ ಸಲ್ಲಿಸಿತ್ತು. 15 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಗೂ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು.
ಕರ್ನಾಟಕ
Nirmala Sitharaman: ಬೆಂಗ್ಳೂರಲ್ಲಿ ಸದ್ದಿಲ್ಲದೆ ನಡೆಯಿತು ವಿತ್ತ ಸಚಿವೆ ನಿರ್ಮಲಾ ಪುತ್ರಿಯ ಮದ್ವೆ! ಆಶೀರ್ವದಿಸಿದ ಅದಮಾರು ಶ್ರೀಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪುತ್ರಿ ಪರಕಾಲ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ.
ಬೆಂಗಳೂರು: ಈಗೆಲ್ಲ ಮದುವೆ ಎನ್ನುವುದೇ ಆಡಂಬರ. ಅದರಲ್ಲೂ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದುಬಿಟ್ಟರಂತೂ ಕೇಳುವುದೇ ಬೇಡ. ಕೋಟಿ ಕೋಟಿ ಹಣ ಸುರಿದು ಅದ್ಧೂರಿ ಮದುವೆ ಮಾಡಿಬಿಡುತ್ತಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾತ್ರ ಈ ಐಷಾರಾಮಿ ರೂಢಿಯನ್ನು ಮುರಿದು, ತಮ್ಮ ಮಗಳಿಗೆ ಮದುವೆ (Marriage) ಮಾಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಮಗಳು ಪರಕಾಲ ವಂಗಮಾಯಿ ಅವರು ಪ್ರತೀಕ್ ಅವರ ಜತೆ ಗುರುವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಿವಾಹ ಕಾರ್ಯಕ್ರಮ ಜರುಗಿದೆ. ಈ ವೇಳೆ ಹಾಜರಿದ್ದ ಉಡುಪಿಯ ಅದಮಾರು ಮಠದ ಶ್ರೀಗಳು ಹಾಜರಿದ್ದು, ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಯಾವುದೇ ರಾಜಕಾರಣಿಯನ್ನು ಮದುವೆಗೆ ಆಮಂತ್ರಿಸದೆ ಕೆಲವೇ ಕೆಲವು ಬಂಧುಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ವರದಿಯಿದೆ.
ಇದನ್ನೂ ಓದಿ: Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು
ಬ್ರಾಹ್ಮಣ ಕುಟುಂಬದವರಾಗಿರುವ ನಿರ್ಮಲಾ ಅವರು ಬ್ರಾಹ್ಮಣ ಸಂಪ್ರದಾಯದಂತೆಯೇ ಮಗಳ ಮದುವೆ ನೆರವೇರಿಸಿದ್ದಾರೆ. ಉಡುಪಿಯ ಅದಮಾರು ಮಠದ ಆಶೀರ್ವಾದ ಮತ್ತು ಸೂಚನೆಗಳಂತೆ ಮದುವೆ ನಡೆಸಲಾಗಿದೆ.
ಪರಕಾಲ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಸದ್ಯ ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ನಿರ್ಮಲಾ ಅವರ ಅಳಿಯ ಪ್ರತೀಕ್ ದೋಷಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದಾರೆ.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ23 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ