Site icon Vistara News

Diwali Bonus: ಕೇಂದ್ರ ನೌಕರರಿಗೆ ದೀಪಾವಳಿ ಬೋನಸ್‌ ಸಿಹಿ ಸುದ್ದಿ; ಇವರಿಗೆ ಮಾತ್ರ ಅನ್ವಯ!

Diwali Bonus

Diwali Bonus: Centre Approves Diwali Bonus for These Employees; Check Here

ನವದೆಹಲಿ: ದೀಪಾವಳಿ ಸಮೀಪಿಸುತ್ತಿದೆ. ಸರ್ಕಾರಿ ಸೇರಿ ಎಲ್ಲ ಕಚೇರಿಗಳಲ್ಲಿ ಈಗ ಬೋನಸ್‌ ಕುರಿತು ಚರ್ಚೆ, ಯಾವಾಗ ಕೊಡುತ್ತಾರೆ, ಎಷ್ಟು ಕೊಡುತ್ತಾರೆ ಎಂಬ ಅಂದಾಜಿನ ಲೆಕ್ಕಾಚಾರ ಶುರುವಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು (Central Government) ದೀಪಾವಳಿ ಸಿಹಿ ಸುದ್ದಿ (Diwali Bonus) ನೀಡಿದೆ. ಕೇಂದ್ರ ಸರ್ಕಾರವು ನೌಕರರಿಗೆ (Central Government Employees) ದೀಪಾವಳಿ ಬೋನಸ್‌ ನೀಡಿದೆ. ಗರಿಷ್ಠ 7 ಸಾವಿರ ರೂಪಾಯಿವರೆಗೆ ನೌಕರರಿಗೆ ಬೋನಸ್‌ ಸಿಗಲಿದೆ.

ಗ್ರೂಪ್‌ ಸಿ ನೌಕರರು, ನಾನ್‌-ಗೆಜೆಟೆಡ್‌ ಗ್ರೂಫ್‌ ಬಿ ಬ್ಯಾಂಕ್‌ ನೌಕರರು ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್‌ ಪಡೆಯಲಿದ್ದಾರೆ. ಆಯಾ ನೌಕರರ ಕಾರ್ಯಕ್ಷಮತೆ, ಸೇವಾ ಮನೋಭಾವ, ದಕ್ಷತೆ, ಸಮಯಪಾಲನೆ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಗರಿಷ್ಠ 7 ಸಾವಿರ ರೂಪಾಯಿವರೆಗೆ ಸರ್ಕಾರ ಬೋನಸ್‌ ನೀಡುತ್ತದೆ. ಇದರಿಂದ ನೌಕರರು ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತದೆ.

ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ವೆಚ್ಚದ ಇಲಾಖೆಯು ಬೋನಸ್‌ ಘೋಷಣೆ ಮಾಡಿ ಆದೇಶ ಹೊರಡಿಸಿದೆ. 2021ರ ಮಾರ್ಚ್‌ 31ರಿಂದ ಕಾರ್ಯನಿರ್ವಹಿಸುತ್ತಿರುವವರು ದೀಪಾವಳಿ ಬೋನಸ್‌ ಪಡೆಯಲು ಅರ್ಹರಾಗಿರುತ್ತಾರೆ. ಗ್ರೂಪ್‌ ಡಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಕೂಡ ಬೋನಸ್‌ ಪಡೆಯಲಿದ್ದಾರೆ.

ಇದನ್ನೂ ಓದಿ: DA Hike News: ರಾಜ್ಯ ಸರ್ಕಾರಿ ನೌಕರರಿಗೆ 4% ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಇದು Fake News

ಗ್ರೂಪ್‌ ಸಿ, ಡಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಸರ್ಕಾರವು ಪ್ರತಿ ವರ್ಷ ದೀಪಾವಳಿ ಬೋನಸ್‌ ನೀಡುತ್ತದೆ. ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಗಳು ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂದಿಯೂ ಬೋನಸ್‌ನ ಲಾಭ ಪಡೆಯಲಿದ್ದಾರೆ. ಇನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಪ್ರತಿ ವರ್ಷದ ಪ್ರಕ್ರಿಯೆಯಂತೆ ತುಟ್ಟಿ ಭತ್ಯೆ ಘೋಷಿಸಲಿದ್ದು, ಲಕ್ಷಾಂತರ ನೌಕರರು ಇದರ ಲಾಭ ಪಡೆಯಲಿದ್ದಾರೆ.

Exit mobile version