ಮುಂಬೈ: ಇದೇ ಮೊದಲ ಬಾರಿಗೆ ಎಂಬಂಥ ಪ್ರಿಪೇಯ್ಡ್ ಪ್ಲಾನ್ (Pre paid plan) ಒಂದನ್ನು ರಿಲಯನ್ಸ್ ಜಿಯೋದಿಂದ (Reliance Jio) ಘೋಷಣೆ ಮಾಡಲಾಗಿದೆ. ದೀಪಾವಳಿ (Diwali festival offer) ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದ್ದು, ಈ ಪ್ರಿಪೇಯ್ಡ್ ಪ್ಲಾನ್ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯ ಜತೆಗೆ ಬಂದಿದೆ. ಅಂದ ಹಾಗೆ ಇದು ಜಿಯೋ ಪ್ರಿಪೇಯ್ಡ್ 866 ರೂಪಾಯಿಯ ಪ್ಲಾನ್ ಆಗಿದೆ. ಇಷ್ಟು ಮೊತ್ತಕ್ಕೆ ಬಳಕೆದಾರರು ರೀಚಾರ್ಜ್ ಮಾಡಿಸಿಕೊಂಡಲ್ಲಿ ಯಾವುದೇ ಅಡೆತಡೆಯಿಲ್ಲದ ಸಂಪರ್ಕ ಪಡೆಯಬಹುದು ಹಾಗೂ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜತೆಗೆ ಸಂತೋಷವಾದ ಸಮಯವನ್ನು ಕಳೆಯಬಹುದು. ಅದು ಹೇಗೆಂದರೆ, ಜಿಯೋ ಪ್ರಿಪೇಯ್ಡ್ ಗ್ರಾಹಕರು ಸ್ವಿಗ್ಗಿಯಲ್ಲಿ ಉಚಿತ ಡೆಲಿವರಿ ಅನುಕೂಲಗಳನ್ನು ಪಡೆಯಬಹುದಾಗಿದೆ. ಅದು ಕೂಡ ಸ್ವಿಗ್ಗಿಯ ಆಹಾರ, ದಿನಸಿ ಮತ್ತು ಇತರ ವಿಭಾಗಗಳಿಗೂ ಅನ್ವಯ ಆಗಲಿದೆ.
ಹಬ್ಬದ ಸಂದರ್ಭದ ಉದ್ಘಾಟನಾ ಆಫರ್ ಆಗಿ, ಜಿಯೋ- ಸ್ವಿಗ್ಗಿ ಜತೆಗಿನ ಪ್ಲಾನ್ ರೀಚಾರ್ಜ್ ಮಾಡಿಸುವಂಥವರ ಮೈಜಿಯೋ ಖಾತೆಗೆ ಐವತ್ತು ರೂಪಾಯಿಯ ಕ್ಯಾಶ್ ಬ್ಯಾಕ್ ಸಹ ದೊರೆಯಲಿದೆ. ಒಂದು ವೇಳೆ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ಮೂರು ತಿಂಗಳ ಅವಧಿಗೆ ಪಡೆಯಬೇಕು ಎಂದಾದಲ್ಲಿ 99 ರೂಪಾಯಿ ಆಗುತ್ತದೆ.
ರಿಲಯನ್ಸ್ ಜಿಯೋದ 866 ರೂಪಾಯಿಯ ಪ್ಲಾನ್ ಪಡೆದುಕೊಂಡಲ್ಲಿ ದಿನಕ್ಕೆ 2 ಜಿಬಿ ಡೇಟಾ ಸಿಗುತ್ತದೆ. ಅದರ ಜತೆಗೆ ಅನಿಯಮಿತ ಕರೆ ದೊರೆಯುತ್ತದೆ. ಈ ಪ್ಲಾನ್ ಅಡಿಯಲ್ಲಿ ಚಂದಾದಾರರಿಗೆ ಅನಿಯಮಿತ 5ಜಿ ಡೇಟಾ ದೊರೆಯಲಿದೆ. ಇದರ ವ್ಯಾಲಿಡಿಟಿ 84 ದಿನಗಳ ಅವಧಿಗೆ ಇರುತ್ತದೆ. ಈ ಪ್ಲಾನ್ ನಲ್ಲಿ ಮೂರು ತಿಂಗಳ ಅವಧಿಗೆ ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ಮತ್ತು ಜಿಯೋಸೂಟ್ ಅಪ್ಲಿಕೇಷನ್ ಗಳಿಗೆ ಸಂಪರ್ಕ ಸಹ ದೊರೆಯಲಿದೆ.
ಸ್ವಿಗ್ಗಿ ಒನ್ ಲೈಟ್ ಸಬ್ ಸ್ಕ್ರಿಪ್ಷನ್ ಅನುಕೂಲಗಳಿವು…
-149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥ ಹತ್ತು ಉಚಿತ ಹೋಮ್ ಡೆಲಿವರಿ
-199 ರೂಪಾಯಿ ಮೇಲ್ಪಟ್ಟ ಹತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳ ಹತ್ತು ಉಚಿತ ಹೋಮ್ ಡೆಲಿವರಿ
-ಆಹಾರ ಮತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳಿಗೆ ಯಾವುದೇ ಹೆಚ್ಚು ಶುಲ್ಕಗಳಿಲ್ಲ
-ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಹಾರ ಡೆಲಿವರಿ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಸಿಗುವಂಥ ಆಫರ್ ಗಳಿಗಿಂತ 30 ಪರ್ಸೆಂಟ್ ತನಕ ಹೆಚ್ಚುವರಿ ರಿಯಾಯಿತಿ
-60 ರೂಪಾಯಿ ಮೇಲ್ಪಟ್ಟ ಜೆನಿ ಡೆಲಿವರಿಗಳ ಮೇಲೆ ಶೇ 10ರಷ್ಟು ರಿಯಾಯಿತಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಭರ್ಜರಿ ಯೋಜನೆಯನ್ನೇ ಘೋಷಣೆ ಮಾಡಿದೆ. ಮತ್ತು ಇದುವರೆಗೆ ಇಂಥದ್ದೊಂದು ಪ್ಲಾನ್ ಅನ್ನು ಉಳಿದ ಯಾವುದೇ ಟೆಲಿಕಾಂ ಕಂಪನಿಗಳು ಜಾರಿಗೆ ತಂದಿಲ್ಲ.
ಈ ಸುದ್ದಿಯನ್ನೂ ಓದಿ: Reliance: ರಿಲಯನ್ಸ್ ನಿರ್ದೇಶಕರ ಮಂಡಳಿ ಸೇರಿದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ